ಇಂಡಿಯಾ ಏರ್ ಶೋ ಬೆಂಗಳೂರಿನಲ್ಲಿ ಆರಂಭವಾಗಿದೆ. ಏರ್ ಶೋ ವಿಕ್ಷಿಸಲು ಸಾವಿರಾರು ಜನ ಆಗಮಿಸಲಿದ್ದಾರೆ. ಫೆ 14 ರಿಂದ ಫೆ.18ರ ವರೆಗೆ ನಡೆಯಲಿದೆ.
ಏರ್ ಶೋ ವಿಕ್ಷಿಸಲು ಸಾವಿರಾರು ಸಂಖ್ಯೆಯ ಪಾಸ್ ಮತ್ತು ಟಿಕೇಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿದ್ದು ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ಜನರು ನೋಡಿ ಖುಷಿಪಡಲಿದ್ದಾರೆ.
ಈ ಬಾರಿ ಏರ್ ಶೋಗೆ ಚೀನಾದಿಂದ ಯುದ್ಧವಿಮಾನಗಳು ಬಾನಂಗಳದಲ್ಲಿ ಜನರನ್ನು ರಂಜಿಸಲಿವೆ. ಸಾನಿರಾರು ಜನ ಏರ್ ಶೋಗೆ ಬರುವ ಕಾರಣದಿಂದ ಟ್ರಾಫಿಕ್ ಸಮಸ್ಯಯನ್ನು ತಡೆಯಲು ಜನರು ತಮ್ಮ ಸ್ವಂತ ವಾಹನಗಳಲ್ಲಿ ಬರುವುದನ್ನು ಬಿಟ್ಟು ಬಿಎಂಟಿಸಿ ಬಸ್ ನಲ್ಲಿ ಆಗಮಿಸುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ತಯಾರಾಗುವ ವಿಮಾನದ ಬಿಡಿಭಾಗಗಳು ಜಗತ್ತಿನಲ್ಲೇ ಹೆಸರುವಾಸಿ. ಆದ್ದರಿಂದಲೇ ಅವುಗಳ ಖರೀದಿಗೆ ವಿದೇಶಿ ಸಂಸ್ಥೆಗಳು ಹಾತೊರೆಯುತ್ತವೆ. ಇದು ವ್ಯಾಪಾರದ ಮಾತಾಯಿತು. ವೈಮಾನಿಕ ಕಸರತ್ತಿನಲ್ಲಿ ಈ ಸಲ ವಿಶೇಷವೇನಿದೆ ಎಂಬ ಪ್ರಶ್ನೆ ನಿಮ್ಮದಾದರೆ ಭಾರತದ ಸೂರ್ಯಕಿರಣ ಹಾಗೂ ಇಂಗ್ಲೆಂಡ್‌ನಿಂದ ಯಾಕೊವ್‌ಲೇವ್ಸ್ ತಂಡಗಳು ಪ್ರೇಕ್ಷಕರನ್ನು ರಂಜಿಸಲು ತಾಲೀಮು ನಡೆಸಿವೆ.
ಕಳೆದ ಬಾರಿಯ ಪ್ರದರ್ಶನದಲ್ಲಿ ವೀಕ್ಷಕರ ಮನಸೂರೆಗೊಂಡಿದ್ದ ಫ್ಲೈಯಿಂಗ್ ಬುಲ್ಸ್ ಹಾಗೂ ವಿಂಗ್ ವಾಕರ್ಸ್ ತಂಡಗಳು ಈ ಸಲ ಭಾಗವಹಿಸುತ್ತಿಲ್ಲ. 2013ರಲ್ಲಿ ವಿಮಾನಪ್ರಿಯರ ಮನಸ್ಸು ಕದ್ದಿದ್ದ ರಷ್ಯನ್ ನೈಟ್ಸ್ ತಂಡ ಮತ್ತೆ ಗೈರಾಗಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಗಸ್ತು ವಿಮಾನಗಳು ಸಹ ಮಂಗಳವಾರವೇ ಭಾರತೀಯ ವಾಯುಪಡೆಗೆ ಸೇರ್ಪಡೆ ಆಗಲಿವೆ.
ಏರ್ ಶೋ ವಿಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ವಿಕ್ಷಕರು ತಮ್ಮ ಕಾರುಗಳಲ್ಲಿ ಆಗಮಿಸಿದಲ್ಲಿ ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥ ತ್ರಾಸ್ ಆಗುವ ಕಾರನದಿಂದ ವಿಕ್ಷಕರು ಸಂಚಾರಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
