`ಹುಕ್ಕಾ’ ಅಮಲು
ಬೆಂಗಳೂರು ನಗರದಲ್ಲಿ ಅಕ್ರಮ ಹುಕ್ಕಾ ಬಾರ್ಗಳು ತಲೆ ಎತ್ತುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿರುವ ಹುಕ್ಕಾಬಾರ್ಳು ಯುವಜನಾಂಗವನ್ನು ಗುರಿಯಾಗಿಟ್ಟುಕೊಂಡು ವ್ಯವಹಾರ ನಡೆಸುತ್ತಿವೆ. ಈ ಉತ್ಪನ್ನ ಒಂದು ಸ್ಟೈಲ್, ಚಿಂತೆಯನ್ನು ದೂರ ಮಾಡುತ್ತದೆ ಅಥವಾ ಏಕಾಂತತೆಯ ಬೇಸರವನ್ನು ಕಳೆಯುತ್ತದೆ ಎಂದು ವಿದ್ಯಾರ್ಥಿ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ.
ಇದು ಪೆÇೀಷಕರ ಕಳವಳಕ್ಕೆ ಕಾರಣವಾಗಿದೆ. ಪ್ರಸ್ತುತ ಹುಕ್ಕಾ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದ್ದು, ಕೋಟ್ಪಾ ಕಾಯ್ದೆಯ ಸೆಕ್ಷನ್ಗಳ ಉಲ್ಲಂಘನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳಿಗೆ ಈ ಹುಕ್ಕಾ ಒಂದು ರೀತಿಯ ಹೆಬ್ಬಾಗಿಲಾದಂತಾಗಿದೆ.ತಂಬಾಕಿನ ಅಂಶ ಹೆಚ್ಚು ಹುಕ್ಕಾವನ್ನು ನಾರ್ಘಿಲೆ, ಶೀಶ ಮತ್ತು ಗೋಝಾ ಎಂದು ಕರೆಯಲಾಗುತ್ತಿದ್ದು, ಇದು ನೀರಿನ ಪೈಪ್ನೊಂದಿಗೆ ಸ್ಮೋಕ್ ಚೇಂಬರ್, ಬೌಲ್, ಪೈಪ್ ಮತ್ತು ಹೋಸ್ ಹೊಂದಿರುತ್ತದೆ. ಹುಕ್ಕಾ ಸೇವನೆ ಮಾಡುವವರು ಈ ಪೈಪ್ ಮೂಲಕ ಸಿಗರೇಟ್ ಸೇವನೆ ಮಾಡುವವರಿಗಿಂತ ಹೆಚ್ಚಿನ ತಂಬಾಕು ಸೇವನೆ ಮಾಡುತ್ತಾರೆ.
ಇದರ ಜತೆಗೆ ಹೆಚ್ಚು ಹೊಗೆ ದೇಹಕ್ಕೆ ಹೋಗುತ್ತದೆ. ಇದು ಹೆಚ್ಚು ಕಡಿಮೆ 60 ನಿಮಿಷಗಳ ಕಾಲ ಇರುತ್ತದೆ. ಹುಕ್ಕಾ ಹೊಗೆ ಅತಿ ಹೆಚ್ಚಿನ ಟಾಕ್ಸಿಕ್ ಅಂಶಗಳನ್ನು ಒಳಗೊಂಡಿರುತ್ತದೆ. ಅಂದರೆ, ಟಾರ್, ಕಾರ್ಬನ್ ಮಾನಾಕ್ಸೈಡ್, ಲೋಹದ ಅಂಶ ಮತ್ತು ಕ್ಯಾನ್ಸರ್ ರೋಗ ತರುವ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಹುಕ್ಕಾ ಸೇವನೆ ಮಾಡುವವರು ಸಿಗರೇಟ್ ಸೇದುವವರಿಗಿಂತ ಹೆಚ್ಚಿನ ಕಾರ್ಬನ್ ಮಾನಾಕ್ಸೈಡ್ ಮತ್ತು ಹೊಗೆಯನ್ನು ಹೊರಬಿಡುತ್ತಾರೆ. ಈ ಹುಕ್ಕಾ ಸೇವನೆ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್, ಹೃದಯಾಘಾತ ಮತ್ತು ತೀವ್ರ ತೆರನಾದ ಅನಾರೋಗ್ಯಕ್ಕೆ ಕಾರಣವಾಗುತ್ತದೆ.ಕೋಟ್ಪಾ ಕಾಯ್ದೆಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ(ಕೋಟ್ಪಾ)ದ ಸೆಕ್ಷನ್ 4, 5, 6 ಮತ್ತು 7ರ ಪ್ರಕಾರ ಸಾರ್ವಜನಿಕ ಸ್ಥಳಗಳಾದ ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಹುಕ್ಕಾ ಸೇವನೆ ಮಾಡುವುದು ಅಕ್ರಮ ಮತ್ತು ಅಪರಾಧವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ.
ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ ಎಲ್ಲಾ ಕೆಫೆಗಳು, ಹೊಟೇಲ್ಗಳು, ಬಾರ್ಗಳು ಮತ್ತು ರೆಸ್ಟೋರೆಂಟ್ಗಳು ಕಡ್ಡಾಯವಾಗಿ ಕೋಟ್ಪಾ ಕಾಯ್ದೆಯನ್ನು ಪಾಲಿಸಬೇಕು ಎಂಬ ನಿಯಮವಿದೆ. ಇದನ್ನು ಪಾಲಿಸಿದರೆ ಮಾತ್ರ ಮುನ್ಸಿಪಾಲಿಟಿಗಳು ವ್ಯಾಪಾರ ಪರವಾನಗಿ ನೀಡಬೇಕೆಂದೂ ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಕ್ಕಾಬಾರ್ಗಳು ಕೋಟ್ಪಾ ಕಾಯ್ದೆಯ ಯಾವುದೇ ಕಾನೂನನ್ನು ಪಾಲಿಸದಿರುವುದು ನೋವಿನ ಸಂಗತಿ. ಈ ಕಾನೂನು ಉಲ್ಲಂಘನೆಯ ಪರಿಣಾಮ ಹುಕ್ಕಾಬಾರ್ಗಳ ಪರವಾನಗಿಯನ್ನು ರದ್ದು ಮಾಡಲು ಕಾನೂನಿನಲ್ಲಿ ಅವಕಾಶವಿದೆ.
ಹುಕ್ಕಾಬಾರ್ಗಳೂ ಸಹ ಕಾನೂನನ್ನು ಪಾಲಿಸುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. ಹುಕ್ಕಾಬಾರ್ ನಡೆಸಲು ನಿಯಮಗಳು ಸೆಕ್ಷನ್4ರ ಅಡಿಯಲ್ಲಿ ಬರುವ ಕಾನೂನು ಪ್ರಕಾರ 30 ಆಸನಗಳಿಗಿಂತ ಕಡಿಮೆ ಸಾಮಥ್ರ್ಯವಿರುವ ಹೊಟೇಲ್ಗಳು, ರೆಸ್ಟೋರೆಂಟ್ಗಳು, ಬಾರ್ಗಳಲ್ಲಿ ಹುಕ್ಕಾ ಸೇವೆ ಇರುವಂತಿಲ್ಲ. 30 ಸೀಟ್ಗಳಿಗಿಂತ ಹೆಚ್ಚಿನ ಸಾಮಥ್ರ್ಯವಿರುವ ಕಡೆ ಹುಕ್ಕಾ ಸೇವೆಯನ್ನು ನೀಡಬಹುದು. ಆದರೆ, ಇದಕ್ಕೆಂದೆ ಪ್ರತ್ಯೇಕ ಧೂಮಪಾನ ಸ್ಥಳವನ್ನು ಮೀಸಲಿಟ್ಟಿರಬೇಕು. ಈ ಸ್ಥಳದಲ್ಲಿ ಯಾವುದೇ ತಿಂಡಿ-ತಿನಿಸು ಸೇವೆ ಇರಬಾರದು ಮತ್ತು ಪ್ರತ್ಯೇಕ ವೆಂಟಿಲೇಶನ್ ವ್ಯವಸ್ಥೆ ಇರಬೇಕು. ಸೆಕ್ಷನ್ 5ರ ಪ್ರಕಾರ ಹುಕ್ಕಾವನ್ನು ಉತ್ತೇಜಿಸುವಂತಹ ಯಾವುದೇ ಜಾಹೀರಾತು ಪ್ರದರ್ಶಿಸುವಂತಿಲ್ಲ. ಸೆಕ್ಷನ್ 6(ಎ), (ಬಿ), (ಎ) ಶಿಕ್ಷಣ ಸಂಸ್ಥೆಗಳಿರುವ ಸುತ್ತಮುತ್ತಲಿನ 100 ಯಾರ್ಡ್ಗಳ ವ್ಯಾಪ್ತಿಯಲ್ಲಿ ಹುಕ್ಕಾ ಮಾರಾಟ ಮಾಡುವಂತಿಲ್ಲ. (ಬಿ) ಮಕ್ಕಳಿಗೆ ಹುಕ್ಕಾ ಮಾರಾಟ ಮಾಡುವಂತಿಲ್ಲ. ಹುಕ್ಕಾ ಮಾರಾಟ ಮಾಡುವ ಸ್ಥಳಗಳಲ್ಲಿ ದೊರಕುವ ತಂಬಾಕು ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂಬ ಚಿತ್ರಸಹಿತವಾದ ಪ್ರಕಟಣಾ ಫಲಕ ಹಾಕುವುದು ಕಡ್ಡಾಯ.ಸೆಕ್ಷನ್ 7ರ ಪ್ರಕಾರ ಹುಕ್ಕಾದಿಂದ ಆಗುವ ದುಷ್ಪರಿಣಾಮದ ಬಗ್ಗೆ ಚಿತ್ರಸಹಿತವಾದ ಪ್ರಕಟಣೆ ಹುಕ್ಕಾ ಉತ್ಪನ್ನಗಳ ಮೇಲಿರುವುದು ಕಡ್ಡಾಯ.
ಹುಕ್ಕಾ ಸೇವನೆಯಿಂದ ದುಷ್ಪರಿಣಾಮಗಳುಹುಕ್ಕಾದಲ್ಲಿನ ತಂಬಾಕು ಮತ್ತು ಅದರಿಂದ ಬರುವ ಹೊಗೆಯಲ್ಲಿ ಹಲವಾರು ವಿಷಕಾರಕ ಅಂಶಗಳು ಇರುವುದರಿಂದ ಹುಕ್ಕಾ ಸೇವನೆ ಮಾಡಿದರೆ ಹೃದ್ರೋಗಗಳು ಕಾಣಿಸಿಕೊಳ್ಳುತ್ತವೆ. ಹುಕ್ಕಾವನ್ನು ಒಬ್ಬರಿಂದ ಒಬ್ಬರು ಹಂಚಿಕೊಂಡು ಸೇವನೆ ಮಾಡುವುದರಿಂದ ಒಬ್ಬರಲ್ಲಿರುವ ರೋಗ ಮತ್ತೊಬ್ಬರಿಗೆ ಅಂಟಿಕೊಳ್ಳುವ ಸಾಧ್ಯತೆಗಳಿವೆ. ಗರ್ಭಿಣಿಯರು ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಹುಕ್ಕಾ ಸೇದಿದರೆ ಹುಟ್ಟುವ ಮಗುವಿನ ತೂಕ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲ, ಆ ಮಕ್ಕಳಿಗೆ ಶ್ವಾಸಕೋಶ ಸಮಸ್ಯೆ ಸೇರಿದಂತೆ ಮತ್ತಿತರೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಯುವಜನಾಂಗ ಈ ಪಿಡುಗಿಗೆ ದಾಸರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ವಿಚಾರದ ಬಗ್ಗೆ ಬಿಬಿಎಂಪಿ ಕಠಿಣ ಕ್ರಮಗಳನ್ನು ಜರುಗಿಸುವ ಅಗತ್ಯವಿದೆ. ಪೆÇಲೀಸರ ನೆರವಿನಿಂದ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಕಾನೂನನ್ನು ಉಲ್ಲಂಘನೆ ಆಗದ ರೀತಿಯಲ್ಲಿ ನೋಡಿಕೊಳ್ಳುವ ಅಗತ್ಯವಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹುಕ್ಕಾಬಾರ್ಗಳನ್ನು ನಿಷೇಧಿಸುವುದು ಅತ್ಯಗತ್ಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
