fbpx
Awareness

ಕನ್ನಡ ಸಾಹಿತ್ಯಕ್ಕೆ ಬೇಕು ಹೊಸ ಕಾಯಕಲ್ಪ

ಕನ್ನಡ ಭಾಷೆ ಚಾಕ್ಷುಶ(ಅಕ್ಷರ)ರೂಪತಾಳಿ, ಸಾಹಿತ್ಯ ರಚನೆಯ ಹಂತ ತಲುಪುವ ಬಹುಕಾಲ ಮುಂಚೆಯೇ ಅದು ಜನಪದವಾಗಿ ಸಾಕಷ್ಟು ಪ್ರವೃದ್ಧಿಯನ್ನು ಹೊಂದಿತ್ತು ಎಂಬುದು ವೈಜ್ಞಾನಿಕ ಸತ್ಯ. ಅದು ಹಲ್ಮಿಡಿ ಶಾಸನ, ವಡ್ಡಾರಾಧನೆ, ಕವಿರಾಜಮಾರ್ಗ ಎಂಬ ಪ್ರಾಚೀನ ಸಾಹಿತ್ಯ ಕೃತಿಗಳ ಮೂಲಕ ಆರಂಭವಾಗಿ ಜನಪದವನ್ನು ತೊರೆದು ಪಂಡಿತರ, ಆಸ್ಥಾನದ ಭಾಷೆಯಾಗಿ ಅಂದರೆ ಹಳೆಗನ್ನಡ ರೂಪದಲ್ಲಿ19ನೇ ಶತಮಾನದವರೆಗೂ ಮುಂದುವ-ರಿಯಿತು. ಸಾಹಿತ್ಯ 19ನೇ ಶತಮಾನದ ನಂತರ ಹೊಸಗನ್ನಡ ಅಂದರೆ ಆಧುನಿಕ ಕನ್ನಡದ ರೂಪವನ್ನು ಪಡೆಯಿತು. ಕೆಂಪುನಾರಾಯಣನ ಗೋದಾವರಿ ಎಂಬ ಕಾದಂಬರಿ ಹೊಸಗನ್ನಡ ಸಾಹಿತ್ಯದ ಮೊದಲ ಕೃತಿ.

ಮುದ್ದಣ ಹೊಸಗನ್ನಡವನ್ನು ಹೆಚ್ಚು ಪ್ರಖರಗೊಳಿಸಿದರು. ಕಥೆ, ಕವನ, ಕಾದಂಬರಿ, ಹರಟೆ, ಪ್ರಬಂಧ, ನಿಬಂಧ, ಪ್ರವಾಸ ಕಥನ, ಆತ್ಮ ಕಥನ, ವೈಚಾರಿಕ, ವ್ಯಕ್ತಿತ್ವ ವಿಕಸನ ಹೀಗೆ ಸಾಹಿತ್ಯದ ಹರಹು ಮತ್ತೂಮೇರೆ ಮೀರಿತು. ಹೊಸಗನ್ನಡ ಸಾಹಿತ್ಯದ ಪ್ರಮುಖ ಘಟ್ಟಗಳಾಗಿ ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ (ದಲಿತ-ಬಂಡಾಯ) ಎಂಬ ಹೊಸ ರೂಪಗಳನ್ನು ಮೈದಳೆಯುತ್ತಬಂದ ಸಾಹಿತ್ಯ ಪ್ರಕಾರ ಈಗ ಯಾವುದೇ ಗತಿಯಿಲ್ಲದೆ ಒಂದು ನಿರ್ವಾತಕ್ಕೆ ಬಂದು ನಿಂತಿದೆ. ಕನ್ನಡ ಸಾಹಿತ್ಯ ರಚನೆಯಲ್ಲಿ ಮೊದಲಿನ ಬದ್ಧತೆ, ಶೃದ್ಧೆ, ಶ್ರಮ ಮತ್ತು ಶಕ್ತಿ ಇಂದು ಕಾಣುತ್ತಿಲ್ಲ.

ಪಂಪ-ರನ್ನ, ಶರಣ-ದಾಸ, ಹ-ರಿಹರ-ರಾಘವಾಂಕ, ಕುಮಾರವ್ಯಾಸ-ಚಾಮರಸ… ಕುವೆಂಪು-ಬೇಂದ್ರೆ, ಮಾಸ್ತಿ-ಕಾರಂತ, ಕಣವಿ-ಜಿ.ಎಸ್.ಎಸ್, ಕಂಬಾರ-ತೇಜಸ್ವಿ, ಕಲ್ಬುರ್ಗಿ-ಶೆಟ್ಟರ್…ಹೀಗೆ ಶ್ರೇಷ್ಠ ಸಾಹಿತಿ ದಿಗ್ಗಜರ ಸಂತತಿ ಬೆಳೆಯದೆ ಇರುವದು ತುಂಬ ವಿಷಾದದ ಸಂಗತಿ. ದಿನಪತ್ರಿಕೆಗಳನ್ನು ಅವಸರದ ಸಾಹಿತ್ಯ ಎಂದು ಕರೆಯುತ್ತೇವೆ. ಆದರೆ ಪತ್ರಿಕೆಯ ಭಾಷೆಯೇ ಇಂದು ಸಾಹಿತ್ಯದ ಭಾಷೆಯಾಗುತ್ತಿದೆ. ಅಂದರೆ ನಮ್ಮ ಸಾಹಿತ್ಯ ಬರವಣಿಗೆ ತುಂಬ ಅವಸರದಲ್ಲಿದೆ. ಪತ್ರಿಕಾ ವರದಿ ಗಳ ಹಾಗೆ ಲಘು-ಲಲಿತವಾಗಿದೆ. ಗಂಭೀರ ಸಾಹಿತ್ಯ ರಚನೆಯಾಗದಿರುವುದಕ್ಕೆ ಇಂದಿನ ಆಧುನಿಕ ಜೀವನ ಶೈಲಿಯೇ ಬಹಳಷ್ಟು ಕಾರಣವಾಗಿದೆ. ಯಾರಿಗೂ ಸಮಯವಿಲ್ಲ, ಎಲ್ಲವೂ ಫಾಸ್ಟ್ ಫುಡ್ ಯುಗ, ಯಾರಿಗೂ ಗಂಭೀರ ಸಾಹಿತ್ಯ ಓದುವದಕ್ಕೆ ಸಮಯವಿಲ್ಲ.

ನಮ್ಮ ಪರಂಪರೆ-ಸಂಸ್ಕøತಿಯನ್ನು, ನಮ್ಮ ಹಳ್ಳಿಯ ಸೊಗಡು-ಸೊಬಗನ್ನು ಬಿಂಬಿ ಸುವಂತಹ ಸಾಹಿತ್ಯ ಇಂದು ರಚನೆ ಯಾಗುತ್ತಿಲ್ಲ. ನಗರ ಜೀವನದ ತಲ್ಲಣಗಳು, ಅಸಹ್ಯಗಳು ಸಾಹಿ ತ್ಯದ ಬೆಳಸಾಗುತ್ತಿವೆ. ಕನ್ನಡದ ಕಥೆ- ಕಾದಂಬರಿಗಳನ್ನು ಆಧರಿಸಿದ ಚಲನಚಿತ್ರಗಳ ನಿರ್ಮಾಣ ನಿಂತು ಹೋಗಿದೆ. ಈಗೇನಿದ್ದರೂ ಅಶ್ಲೀಲ ಮತ್ತು ವಿದೇಶಿ ಸಂಸ್ಕøತಿಯ ವೈಭೋಗ. ವಾಟ್ಸ್‍ಅಪ್ ಸ್ಟೋರಿ, ಫೇಸ್‍ಬುಕ್ ಕವಿತೆ, ಬ್ಲಾಗ್ ಕಾದಂಬರಿ, ಟ್ವಿಟರ್ ಚುಟುಕು ಇವು ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕೆಗಳು ಆರಂಭಿಸಿದ ಸಾಹಿತ್ಯ ಪ್ರಕಾರಗಳು. ಜನರೂ ಸಹ ತಿಳಿಯಾದ, ಕಿರಿದಾದ ಮತ್ತು ನಗು ಉಕ್ಕಿಸುವ ಸೆಳೆಮಿಂಚಿನ ಬರಹಗಳನ್ನು ಅಪೇಕ್ಷಿಸುತ್ತಿದ್ದಾರೆ.

ಗಂಭೀರ ಸಾಹಿತ್ಯದ ಬರವಣಿಗೆ ಇಲ್ಲವೆಂದಲ್ಲ, ಅದು ಅಲ್ಲಲ್ಲಿ ಕಥೆ, ಕವಿತೆ, ಕಾದಂಬರಿಯ ರೂಪದಲ್ಲಿ ಬೆಳೆಯುತ್ತಿದೆ. ಆದರೆ ಅದರ ಪ್ರಮಾಣ ಮತ್ತು ಪ್ರಭಾವ ತುಂಬ ಕಡಿಮೆ ಎಂದೇ ಹೇಳಬಹುದು. ನಿಜವಾಗಿಯೂ ನಮ್ಮ ವ್ಯಕ್ತಿತ್ವವನ್ನು ರೂಪಿಸಲಿಕ್ಕೆ ಬೇಕಾದವುಗಳು ನಮ್ಮ ಸಂಸ್ಕøತಿಯನ್ನು ಬಿಂಬಿಸುವಂತಹ ಕಥೆ, ಕಾವ್ಯ, ನಾಟಕ, ಕಾದಂಬರಿ, ಪ್ರಬಂಧ ಹಾಗೂ ವೈಚಾರಿಕ ಸಾಹಿತ್ಯ. ಸಾಂದ್ರ ಸಾಹಿತ್ಯ ರಚನೆಗೆ ವಿಷಯ ವಸ್ತುವಿನ ಆಯ್ಕೆ, ವ್ಯಾಪಕ ಜ್ಞಾನದ ಏಕ ಸೂತ್ರತೆ, ಒಂದು ಭಾವದ ಸುತ್ತ ಗಿರಕಿ ಹೊಡೆಯುವ ಮಾಂತ್ರಿಕ ಶೈಲಿ, ಬರಹದ ಅಂತರ್ಮುಖತೆ ಒಗ್ಗುವ ತರ್ಕ, ವಿಡಂಬನೆ, ವಿಚಾರ, ಹಾಸ್ಯ ಎಲ್ಲವನ್ನೂ ಮೇಳೈಸಿ ಓದುಗರ ಮನವನ್ನು ಅರಳಿಸಿ, ಕೆರಳಿಸಿ ಗೆಲ್ಲುವ ಮತ್ತು ದಿಗ್ದರ್ಶಿಸುವ ಸವಾಲು ಇಂದಿನ ಸಾಹಿತಿಗಳ ಮುಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top