fbpx
News

ವೈಮಾನಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಸಾಧನೆಗೆ ಬೆಂಗಳೂರು ಮುಂದಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತೀಕವಾಗಿ ಹಾಗೂ ವೈಮಾನಿಕ ಕ್ಷೇತ್ರದಲ್ಲು ಬಹುದೊಡ್ಡದಾದ ಸಾಧನೆಗೆ ನಮ್ಮ ಭಾರತ ಸಜ್ಜಾಗಿದೆ.

ಬಭಾರತದ ಹಿರಿಮೆಯನ್ನು ತಂದುಕೊಟ್ಟಿದ್ದು ನಮ್ಮ ಬೆಂಗಳೂರು ಎಂದರೆ ಹೆಮ್ಮೆ ಪಡುವ ವಿಚಾರವಾಗಿದೆ ಅದೇನೆಂದರೆ ಸ್ವದೇಶಿ ನಿರ್ಮಿತ ಜೆಟ್ ಎಂಜಿನ್ ಒಂದು ಬೆಂಗಳೂರಿನ ಖಾಸಗಿ ಕಂಪನಿಯೊಂದು ಅಭಿವೃದ್ಧಿ ಪಡಿಸಿದೆ. ಕೆಲವು ಪರಿಕ್ಷೆ ಬಳಿಕ ಪ್ರಮಾಣ ಪತ್ರವನ್ನು ಪಡೆದ ನಂತರ ಆ ಕಂಪನಿಗೆ ದೊರೆತರೆ, ಜೆಟ್ ಎಂಜಿನ್ ಅಭಿವೃದ್ಧಿಪಡಿಸಿದ ಏಷ್ಯಾದ ಮೊದಲ ಹಾಗೂ ವಿಶ್ವದ ನಾಲ್ಕನೇ ದೇಶ ಎಂಬ ಸಾಧನೆ ನಮ್ಮ ಭಾರತ ಪಾತ್ರವಾಗಲಿದೆ.

ಬೆಂಗಳೂರಿನ ಇಂಟೆಕ್ ಡಿಎಂಎಲ್ ಎಸ್ ಕಂಪನಿಯ ಅಧೀನದಲ್ಲಿರುವ ಪೋಯೆರ್ ಜೆಟ್ ಎಂಜಿನ್ ಅಭಿವೃದ್ಧಿ ಪಡಿಸಿದೆ ಇದಕ್ಕಾಗಿ ಎರಡು ವರ್ಷಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಕಂಪನಿ ಆರಂಭಿಸಿತ್ತು. ಎಚ್ ಎ ಎಲ್ ಹಾಗೂ ಭಾರತ್ ಚಾರ್ಜ್ನಂತಹ ಕಂಪನಿಗಳ ಜೊತೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಇಲ್ಲಿತನಕ 9ಕೋಟಿ ರೂ. ಖರ್ಚಾಗಿದೆ ಎಂದು ಇನ್ಟೆಕ್ ಕಂಪನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಬಲರಾಮ್ ತಿಳಿಸಿದ್ದಾರೆ.

ಕಂಪನಿ ಅಭಿವೃದ್ಧಿಪಡಿಸಿರುವ ಜೆಟ್ ಎಂಜಿನ್ ಎಂಜೆಇ -20 ಎಂದು ಹೆಸರಿಡಲಾಗಿದ್ದು, ಇದು ಗ್ಯಾಸ್ ಟರ್ಬೈನ್ ಎಂಜಿನ್ ಇದಾಗಿದೆ. ಮಾನವ ರಹಿತ ವೈಮಾನಿಕ ನೌಕೆಗಳಿಗೆ ಈ ಎಂಜಿನ್ ಶಕ್ತಿ ಒದಗಿಸಬಲ್ಲದು. 2.16 ಕೆ.ಜಿ ತೂಕವಿರುವ ಇದು, 20 ಕೆಜಿಯಷ್ಟು ಶಕ್ತಿಯನ್ನು ಕೊಡುತ್ತದೆ. ಆದರೆ ಮಿಲಿಟರಿ ದರ್ಜೆಯ ಡ್ರೋನ್ ಗಳಿಗೆ ಈ ಎಂಜಿನ್ ಸಾಕಾಗದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top