ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂ ತೆ ತಮಿಳುನಾಡಿನ ಎಐಡಿಎಂಕೆ ಅಧಿನಾಯಕಿ ಶಶಿಕಲಾ ನಟರಾಜ್ ಅವರು ಅಪರಾಧಿ ಎಂದು ಸುಫ್ರೀಂ ಕೋರ್ಟ್ ನ ನ್ಯಾಯಮೂರ್ತಿ ಪಿ.ಸಿ. ಘೋಷ್ ಮತ್ತು ಅಮಿತಾವ ರಾಯ್ ನೇತೃತ್ವದ ದ್ವಿ ಸದಸ್ಯ ಪೀಠ ಇಂದು ಒಮ್ಮತದ ತೀರ್ಪು ನೀಡಿದ್ದು, ಹಾಗೂ ಶಶಿಕಲಾಗೆ ನಾಲ್ಕು ವರ್ಷ ಜೈಲು ಸಜೆ ಮತ್ತು 10 ಕೋಟಿ ರೂ. ದಂಡ ವಿಧಿಸಿದೆ.
ಶಶಿಕಲಾ ಸಿಎಂ ಪಟ್ಟಕ್ಕೇರುವ ಕನಸು ಕನಸಾಗಿಯೇ ಉಳಿಯಿತು. ಸುಪ್ರೀಂ ಕೋರ್ಟ್ ತೀರ್ಪು ಬಂದಿರುವ ಹಿನ್ನಲೇಯಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಧೀಶ ಮೈಕಲ್ ಡಿ ಕುನ್ಹಾ ನೀಡಿದ್ದ ತೀರ್ಪು ಎತ್ತಿ ಹಿಡಿದಿದ್ದು, ಪ್ರಕರಣದಲ್ಲಿ ದೋಷಿಗಳಾಗಿರುವ ಶಶಿಕಲಾ ನಟರಾಜನ್, ಸುಧಾಕರನ್ ಮತ್ತು ಇಳವರಸಿ ಬೆಂಗಳೂರಿನ ಪರಪ್ಪನ ಹಗ್ರಹಾರದಲ್ಲಿ ಜೈಲು ಪಾಲಗಲಿದ್ದಾರೆ.
ತೀರ್ಪಿನ ಹಿನ್ನೆಲೆಯಲ್ಲಿ ಶಶಿಕಲಾ ನಟರಾಜನ್ 10 ವರ್ಷಗಳ ಕಾಲ ಯಾವುದೇ ಸ್ಥಾನವನ್ನಲಂಕರಿಸುವಂತಿಲ್ಲ. ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಪ್ರಕರಣದ ಮೊದಲ ಆರೋಪಿ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈ ಬಿಟ್ಟಿದೆ. ಆದರೆ 2,3 ಮತ್ತು 4ನೆ ಆರೋಪಿಗಳಾದ ಕ್ರಮವಾಗಿ ಶಶಿಕಲಾ ನಟರಾಜನ್, ಅವರ ಅಕ್ಕನ ಮಗ ಸುಧಾಕರನ್ ಮತ್ತು ಅಣ್ಣನ ಹೆಂಡತಿ ಇಳವರಸಿ ಅವರಿಗೆ ತಕ್ಷಣ ವಿಶೇಷ ನ್ಯಾಯಾಲಯಕ್ಕೆ ಶರಣಾಗಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಪನ್ನೀರ್ ಸೆಲ್ವಂ ಪಾಳಯದಲ್ಲಿ ಹರ್ಷೋದ್ಗಾರ : ಶಶಿಕಲಾ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂ ಪಾಳಯದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿದೆ. ಅಭಿಮಾನಿಗಳು ಸಿಹಿ ತಿಂಡಿ ಹಂಚಿ ಹರ್ಷ ವ್ಯಕ್ತಪಡಿಸಿದರು.
21 ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಮೊದಲು ಆರೋಪ ಮಾಡಿದಾಗ ಯಾರೂ ನಂಬಲಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪು ಭ್ರಷ್ಟಚಾರ ನಿಗ್ರಹಕ್ಕೆ ಇದೊಂದು ಮೈಲುಗಲ್ಲು: ಎಂ.ಕೆ.ಸ್ಟಾಲೀನ್, ಡಿಎಂಕೆ ಕಾರ್ಯಾಧ್ಯಕ್ಷ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
