fbpx
Achivers

ಕರ್ನಾಟಕದ ಹಿರಿಮೆ ಯಕ್ಷಗಾನಕ್ಕೆ ಸಿಕ್ಕಬೇಕಿದೆ ಇನ್ನಷ್ಟು ಪ್ರೋತ್ಸಾಹ!!

ಆರಾಧನ ಯಕ್ಷಗಾನದ ಸಾಮಗಾನ
ಕರ್ನಾಟಕದಲ್ಲಿ ಜಾನಪದ ಕುಣಿತ ಹಾಗೂ ಬಯಲಾಟಗಳಿಗೆ ಕೊರತೆ ಯಿಲ್ಲ. ವೀರಗಾಸೆ, ಡೊಳ್ಳು ಕುಣಿತ, ದೊಡ್ಡಾಟ, ಸಣ್ಣಾಟ ಈ ಕಲೆ ಪ್ರಕಾರಗಳಲ್ಲಿ ಯಕ್ಷಗಾನವೂ ಒಂದು. ಗಂಡು ಕಲೆ ಎಂದು ಕರೆಸಿಕೊಂಡಿರುವ ಈ ಯಕ್ಷಗಾನವು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮನೆ ಮಾತಾಗಿದೆ. ಮೊಬೈಲ್, ಕಂಪ್ಯೂಟರ್‍ಯುಗದಲ್ಲಿ ವಿನಾಶದತ್ತ ಸಾಗುತ್ತಿ ರುವ ಈ ಕಲೆಯನ್ನು ಉಳಿಸಿ ಬೆಳೆಸಲು ಕೆಲವರು ಶ್ರಮಿಸುತ್ತಿದ್ದಾರೆ. ಅವರಲ್ಲಿ ಬಾಲಕೃಷ್ಣ ನಾಯರ್‍ಒಬ್ಬರು. ಇವರು ವೃತ್ತಿಯಲ್ಲಿ ಕೃಷಿಕರಾಗಿ ದ್ದರೂ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರು.

ಖ್ಯಾಣ ಯಕ್ಷಗಾನ ಕಲಾ ವಿದ ಸುಬ್ಬಣ್ಣಕೋಡಿ ಕೃಷ್ಣಭಟ್ಟರಿಂದ ಅಭಿನಯ, ನೃತ್ಯಗಳನ್ನು ಅಭ್ಯಾಸ ಮಾಡಿ, 1985ರಲ್ಲಿ ಯುವರಂಗ ಎಂಬ ಸಂಸ್ಥೆಯ ಮೂಲಕ ಹವ್ಯಾಸಿ ಕಲಾವಿದರಾಗಿ ಹಲವು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ.ಭಾಗವತಿಕೆ, ಚಂಡೆ-ಮದ್ದಲೆ, ಮೃದಂಗ, ಚಕ್ರ ತಾಳದಲ್ಲಿ ಪರಿಣತಿ ಹೊಂದಿರುವ ಇವರು ವಿವಿಧ ಸರ್ಕಾರಿ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ 150ಕ್ಕೂ ಹೆಚ್ಚು ಮಕ್ಕಳಿಗೆ ಯಕ್ಷಗಾನವನ್ನು ಉಚಿತವಾಗಿ ಅಭ್ಯಾಸ ಮಾಡಿಸುತ್ತಿದ್ದಾರೆ. 2013ರಲ್ಲಿ ದ.ಕಜಿಲ್ಲೆ ಸುಳ್ಯ ತಾಲ್ಲೂಕಿನ ಉಬರಡ್ಕ ಮಿತ್ತೂರು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಯಕ್ಷಗಾನದ ಅಭಿನಯ, ನೃತ್ಯ, ನಾಟ್ಯ ತರ ಬೇತಿಯನ್ನು ನೀಡಲು ಪ್ರಾರಂ ಭಿಸಿದಾಗ, ಅದೇ ಶಾಲೆ ಮುಖ್ಯ ಶಿಕ್ಷಕಿ ಇಂದಿರಾ.ಕೆ. ಅವರು ಅವಕಾಶ ನೀಡಿ ಪ್ರೋತ್ಸಾಹಿಸಿದರು.

ಆನಂತರದಲ್ಲಿ ಹಂತ ಹಂತವಾಗಿ ದೊಡ್ಡತೋಟ, ಮಡ ಪ್ಯಾಡಿ, ಅಮ್ಮೆಮಡಿಯಾರು, ಜಟ್ಟಿಪಳ್ಳ ಶಾಲೆ ಗಳಲ್ಲಿ ಫಲಾಪೇಕ್ಷೆಇಲ್ಲದೆ ಈ ಕಲೆಯನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದಾರೆ.2014ರಲ್ಲಿ ಉಬರಡ್ಕ ಮಿತ್ತೂರು ಸ.ಹಿ. ಪ್ರಾ.ಶಾಲೆಯಲ್ಲಿ ಅಹೋರಾತ್ರಿ ಯಕ್ಷೋ ತ್ಸವ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲಾ ಮಕ್ಕಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಲ್ಲಿ ಪುರಾಣ ಪ್ರಸಂಗಗಳನ್ನು ಪ್ರದರ್ಶಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.ಈ ಕಾರ್ಯಕ್ರಮಕ್ಕೆ ಸರ್ಕಾರ ಹಣ ನೀಡುವುದಾಗಿ ಭರವಸೆ ನೀಡಿದರೂ, ಇಲ್ಲಿಯವರೆಗೆ ಯಾವುದೇ ಹಣ ಬಂದಿಲ್ಲ.

ಗ್ರಾಮಸ್ಥರು, ಮಕ್ಕಳ ಪೋಷಕರು ಮತ್ತು ಯಕ್ಷ ಪ್ರೇಮಿಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಆರ್ಥಿಕ ಹಿಂದುಳಿದ ಮಕ್ಕಳಿರುವುದ-ರಿಂದ ಶುಲ್ಕ ನೀಡಿ ಕಲಿಯುವುದಕ್ಕೆ ಕಷ್ಟ ಕರ. ಇದಕ್ಕಾಗಿ ಅವರಲ್ಲಿನ ಕಲೆ ಬೆಳೆಸುವ ಉದ್ದೇಶ ದಿಂದ 2015ರಲ್ಲಿ ಶ್ರೀನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘ ವನ್ನು ಸ್ಥಾಪಿಸಿ, ಇದರ ಮೂಲಕ ಅನೇಕ ಜಾತ್ರಾ ಮಹೋತ್ಸವಗಳಲ್ಲಿ ಮಕ್ಕಳಿಂದ ಯಕ್ಷಗಾನ ಪ್ರದ ರ್ಶನ ನೀಡಿದ್ದಾರೆ. ಇನ್ನೂ ಮುಂದೆಯೂ ಬೇರೆ ಬೇರೆ ಶಾಲೆಯಲ್ಲಿ ಅವಕಾಶ ಸಿಕ್ಕರೆ ಮುಂದುವರಿಸಿ ಕೊಂಡು ಹೋಗುವ ಕನಸಿದೆ.

ಇದಲ್ಲದೆ ಗ್ರಾಮಸ್ಥರು ಮತ್ತು ಯಕ್ಷ ಪ್ರೇಮಿಗಳ ಸಹಕಾರದೊಂದಿಗೆ ಹಿಮ್ಮೇಳಕ್ಕೆ ಸಂಬಂಧಪಟ್ಟ ಚೆಂಡೆ-ಮದ್ದಳೆ, ಭಾಗವತಿಕೆಯನ್ನು ನುರಿತ ಕಲಾವಿದರಿಂದ ಮಕ್ಕಳಿಗೆ ಕಲಿಸುವ ಉದ್ದೇಶ ಹೊಂದಿದ್ದಾರೆ.ಇದಕ್ಕೆಲ್ಲ ಬೆನ್ನೆಲುಬಾಗಿ ಮಕ್ಕಳ ಕಲಾ ಸಂಘದ ಅಧ್ಯಕ್ಷರಾದ ರಾಜೇಶ್ವರಿಕಾಡುತೋಟ, ಜಟ್ಟಿಪಳ್ಳಿ ಶಾಲೆ ಮುಖ್ಯ ಶಿಕ್ಷಕಿ ಇಂದಿರಾ.ಕೆ ನಿಂತಿದ್ದಾರೆ.ಇಷ್ಟೆಲ್ಲ ಸಾಧನೆ ಮಾಡಿದ ಬಾಲಕೃಷ್ಣ ನಾಯರ್ ಅವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿವೆ. ಮಡಪ್ಪಾಡಿಯಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿಗ್ರಾಮಸ್ಥರು ಸನ್ಮಾನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top