fbpx
Achivers

ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದವನು ಈಗ ಸಾವಿರಾರು ಕೋಟಿ ಬೆಲೆಬಾಳುವ ಉದ್ಯಮದ ಉಪಾಧ್ಯಕ್ಷ!!

ಜೀವನದಲ್ಲಿ ಏಳು ಬೀಳುಗಳು ಸಹಜ ಆದರೆ ಕೆಲವರ ಜೀವನ ಎಂಥ ತಿರುವನ್ನು ತೆಗೆದುಕೊಳ್ಳುತ್ತದೆ ಎಂದರೆ , ನಂಬಲಿಕ್ಕೇ  ಸಾಧ್ಯವಾಗುವುದಿಲ್ಲ .

ಈ ಕೆಳಗಿರುವ ಕಥೆಯು ಸ್ಪೂರ್ತಿ ತುಂಬುವಂಥದ್ದು .

ಶರ್ಮ , ಬುದ್ದಿವಂತಿಕೆ , ನಿಷ್ಠೆಯ ಫಲ .

ಅವರು ದೋಬಿಯ ಮಗ , ಅವರ ಮನೆ 10 *15 ಅಗಲದ ಒಂದು ಕೋಣೆ  , ಆ ಕೋಣೆಯಲ್ಲಿ ಇದ್ದವರು ಸಂಖ್ಯೆ 8 . ಈ ಕುಟುಂಬದ ಸದಸ್ಯರೇ ನಮ್ಮ ಕಥೆಯ ನಾಯಕ ಬಿಕಾಶ್ ಚೌದರಿ . ಅವರಿಗೆ 2  ತಂಗಿಯರು . ಅಲ್ಲಿದ್ದದ್ದು ಅವರ ಕುಟುಂಬ ಹಾಗು , ಅವರ ತಂದೆಯ ಸಹೋದರನ ಕುಟುಂಬ. ಭೋವಾಣಿಪುರ್, ಕೋಲ್ಕತಾದಲ್ಲಿ ಅವರ ಮನೆ . ತುಂಬ ಕಷ್ಟ ಇತ್ತಾದ್ದರಿಂದ , ಎಷ್ಟೋ ಬಾರಿ ಮಕ್ಕಳಿಗೆ  ಇದ್ದ ಊಟವನ್ನು ತಿನ್ನಿಸಿ ಅಪ್ಪ ಅಮ್ಮ ಹಾಗು ಚಿಕಪ್ಪ ಚಿಕಮ್ಮ ಉಪವಾಸ  ಮಲಗಿದ್ದು ಉಂಟು .

ಬಿಕಾಶ್ರವರ ತಂದೆ ಮನೆ ಮನೆಗೆ ಹೋಗಿ ಒಗೆಯುವ ಬಟ್ಟೆ ತರುತ್ತಿದ್ದರು . ಅದರಲ್ಲೊಂದು ಮನೆಯಲ್ಲಿಇದ್ದವರು 80 ರ ದಶಕದ ಕ್ರಿಕೆಟ್ ಆಟಗಾರ ಅರುಣ್ ಲಾಲ್ ಹಾಗು ಅವರ ಹೆಂಡತಿ ದೇಬಜನಿ. ಬಿಕಾಶ್ರವರ ಅಮ್ಮನ ಕೋರಿಕೆಯ ಮೇಲೆ ಜೂಲಿಯನ್ ಡೇ ಶಾಲೆಯು ಬಿಕಾಶ್ರವರಿಗೆ ಉಚಿತ ಶಿಕ್ಷಣ ಕೊಡಲು ನಿರ್ಧರಿಸಿತು .

ಅವರು ಅವರ ಕುಟುಂಬ ದಲ್ಲಿ ಇಂಗ್ಲಿಷ್ ಮಾದ್ಯಮದಲ್ಲಿ ಓದುವ ಮೊದಲಿಗರಾಗಿದ್ದರು. ಆದ್ದರಿಂದ ಇಂಗ್ಲಿಷ್ ಭಾಷೆಯ ಮೇಲೆ ಅವರಿಗೆ ಹಿಡಿತ ಇರಲಿಲ್ಲ . ಅವರ ತಂದೆ ದೇಬಜನಿರವನ್ನು ಇವರಿಗೆ ಸಹಾಯ ಮಾಡಲು ಕೇಳಿದರು. ಆಗ ಬಿಕಾಶ್ ಗೆ 12  ವರ್ಷ. ಅಲ್ಲಿಯವರೆಗೆ ಬಿಕಾಶ್ ಎಂದೂ  ಶಾಲೆಗೇ , ಅಲ್ಲಿನ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನೇ ಕೊಡುತ್ತಿರಲಿಲ್ಲ. ಬರಿ ಆಟವನ್ನೇ ಆಡುತಾ ಸಮಯ ಕಳೆಯುತ್ತಿದ್ದ. ಮನೆಯಲ್ಲಿ ಹೆಚ್ಚು ಜಾಗವಿಲ್ಲದ್ದರಿಂದ ಅವರ ಅಮ್ಮ ಕೂಡ ಅದಕ್ಕೆ ಅಡ್ಡ ಬರುತಿರಲ್ಲಿಲ. ದೇಬಜನಿ ದಿನ ಕೊಡುವ ಆರೆಂಜ್ ಜ್ಯೂಸು ಅವರಿಗೆ ದೇಬಜನಿ ಮನೆಗೆ ಹೋಗಲು  ಆಕರ್ಷಿಸಿದ್ದು. ಬಿಕಾಶ್ 8 ನೇ ಕ್ಲಾಸ್ಗೆ ಬರುವಷ್ಟರಲ್ಲಿ ಅರುಣ್ ಲಾಲ್ ಹಾಗು ದೇಬಜನಿ ಬಿಕಾಶ್ನ  ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡರು. ಅವರಿಗೆ ಮಕ್ಕಳಿರಲಿಲ್ಲ , ಬಿಕಾಶ್ ಅವರ ಮಗನಾದನು. ಬಿಕಾಶ್ ಗೆ ಅವರು ಎರಡನೇ ತಂದೆ ತಾಯಿಯಾದರೂ.

Image Credit: ET

ಆಮೇಲೆ ಅವರು ಸಂತ.ಕ್ಸೇವಿಯರ್ ಕಾಲೇಜ್ನಲ್ಲಿ ಕಾಮರ್ಸ್ ವಿಷಯದಲ್ಲಿ  ಪದವಿ ಪಡುಯುತ್ತಾರೆ . ನಂತರ ಕ್ಯಾಟ್ ಪರೀಕ್ಷೆ ಬರೆಯುತ್ತಾರೆ. ಅತ್ಯುತ್ತಮ  ಅಂಕವನ್ನು ತೆಗೆಯುತಾರೆ . ಕೊಲ್ಕತ್ತಾ ದ ಐಐಎಂ ಗೆ ಸೇರುತಾರೆ .ಅಲ್ಲಿಂದ ಮುಂದೆ ಎಂದೂ  ತಿರುಗಿಯೇ ನೋಡುವುದಿಲ್ಲ .

Image result for bikash chowdhury

ಈಗ ಸದ್ಯಕ್ಕೆ JSW ನಲ್ಲಿ ಉಪಾಧ್ಯಕ್ಷ ಹುದ್ದೆಯಲ್ಲಿದ್ದಾರೆ. ಕಾಮ್ನ ಎಂಬುವರನ್ನು ಮದುವೆಯಾಗಿದ್ದಾರೆ. ಹಳೆ ಸ್ನೇಹಿತರ್ಯಾರನ್ನು ಅವರು ಮರೆತಿಲ್ಲ ತಮ್ಮ ಮಗಳ ಹೆಸರು ಅರುಣ್ ಲಾಲ್ರವರ ಉಪಕಾರಕ್ಕೆ ಆಭಾರಿಯಾಗಿ ಅರುಣಿಮಾ  ಎಂದು ಇಟ್ಟಿದ್ದಾರೆ. ಅವರ ಕುಟುಂಬಕ್ಕೆ ಕೈಲಾದ ಸಹಾಯವನ್ನು ಮಾಡುತ್ತಲೇ ಇದ್ದಾರೆ . ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯವನ್ನು ಮಾಡುತ್ತಲೇ ಇದ್ದಾರೆ.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತಾರೆ , ಆದರೆ ಅದರ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ . ಅದಕ್ಕೆ ಹೇಳುವುದು ತುಂಬಿದ ಕೊಡ ತುಳುಕುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top