fbpx
Awareness

ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾಗರೀಕನ ಅಸ್ತ್ರ ಆರ್.ಟಿ.ಐ.!! ಅರ್ಜಿ ಸಲ್ಲುಸುವುದು ಹೇಗೆ??

ದೇಶವಾಸಿಗಳ ಅನುಕೂಲಕ್ಕಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಸಹ ಒಂದು. ಭಾರತದ ಪ್ರಜೆ ತನ್ನ ಸಮಸ್ಯೆ ಹಾಗೂ ಸಂಬಂಧ ಪಟ್ಟ ಮಾಹಿತಿ ಈ ಹಕ್ಕಿನ ಮೂಲಕ ಪಡೆಯಬಹುದು. ಹಾಗಿದ್ದರೆ ಆರ್‌ಟಿಐ ಹೇಗೆ ತುಂಬುವುದು, ಮತ್ತು ಇದರಲ್ಲಿ ಏನು ಇರುತ್ತದೆ ಎನ್ನುವ ಪರಿಚಯ ಇಲ್ಲಿದೆ.

Image result for citizen against corruption india

Source: The Better India

ಈ ಪತ್ರದಲ್ಲಿ ಪ್ರಶ್ನೆಗಳಿಂದ ಕೂಡಿದ್ದು, ಸಬಂಧ ಪಟ್ಟ ಅಧಿಕಾರಿಗಳಿಂದ ಉತ್ತರ ಕೇಳುವು ವಿಧಾನ ಆರ್‌ಟಿಐ. ಈ ಪತ್ರ ಹೀಗೆಯೇ ಬರೆಯ ಬೇಕು. ಎಂದೇನು ಇಲ್ಲವಾದರೂ ಕೂಡ, ನೀವು ಬರೆದ ಪತ್ರದಲ್ಲಿ ಈ ಕೆಳಗಿನ ಅಂಶಗಳು ಇದ್ದರೆ ಉತ್ತಮ.

ಹಂತ ೧: ನೀವು ಕೇಳಬೇಕಾದ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಳ್ಳಿ
ಹಂತ ೨: ನಿಮ್ಮ ಹೆಸರು ಹಾಗೂ ವಿಳಾಸ. ಮಾನ್ಯರೆ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕೋರಿ
ಹಂತ ೩: ಅಗತ್ಯ ದಾಖಲೆಗಳನ್ನು ಹೊಂದಿಸಿಕೊಳ್ಳಿ. ಅಲ್ಲದೆ ಪೋಸ್ಟಲ್ ಆರ್ಡರ್ ಪಡೆಯಿಫಿನ್ನು ಬಿಪಿಎಲ್ ಕಾರ್ಡ್ ಇದ್ದರೆ ಲಗ್ಗತಿಸಿ.
ಹಂತ ೪: ಪತ್ರದಲ್ಲಿ ೨೦೦೫ರ ಮಾಹಿತಿ ಹಕ್ಕು ಕಾಯ್ದೆಯ ಅನುಸಾರ ಎಂದು ನಮೂದಿಸಿ
ಹಂತ ೫: ಪತ್ರ ತಲುಬೇಕಾದ ವಿಳಾಸ ಹಾಗೂ ನಿಮ್ಮ ವಿಳಾಸವನ್ನು ಸರಿಯಾಗಿ ಬರೆಯಿರಿ.
ನೀವು ಬರೆದ ಪತ್ರದ ಜೊತೆಗೆ ಪೋಸ್ಟಲ್ ಆರ್ಡರ್ ಲಗ್ಗತಿಸಿ. ಅಲ್ಲದೆ ಪೋಸ್ಟಲ್ ಆರ್ಡರ್‌ನಲ್ಲಿ ವಿಳಾಸ ಹೆಸರು ಬರೆಯಿರಿ.
Image result for RTI india
೧- ಆರ್‌ಟಿಐ ಅರ್ಜಿ ಬರೆಯುವುದು ಸರಳ.
ಇದರಲ್ಲಿ ಪ್ರಶ್ನೆಗಳ ಗುಚ್ಚವೇ ಅಡಿಗಿರುತ್ತದೆ. ಅಥವಾ ನಿಮಗೆ ಬೇಕಾದ ಮಾಹಿತಿ ವಿವರ ಇರುತ್ತದೆ.

  •  ಸರಳ ಭಾಷೆಯಲ್ಲಿ ಬರೆದರೆ ಸೂಕ್ತ
  • ನಿಮ್ಮ ಪ್ರಶ್ನೆಗಳು ನೇರವಾಗಿರಲಿ. ಮತ್ತು ಪ್ರಶ್ನೆಯಿಂದ ನೀವು ಪಡೆಯುವ ಉಪಯೋಗವನ್ನು ನಮೂದಿಸಬೇಡಿ.
  • ನಿಮಗೆ ಸಂಬಂಧಿತ ಪ್ರಶ್ನೆಗಳ ಉತ್ತರವನ್ನು ಪಡೆಯಿರಿ. ಆದರೆ ಇದರಲ್ಲಿ ಆರ್‌ಟಿಐ ಮಾಹಿತಿ ಪಡೆದು ನೀವೇನು ಮಾಡಲಿದ್ದೀರಿ ಎಂಬುದನ್ನು ತಿಳಿಸುವುದು ಅವಶ್ಯಕವಲ್ಲ.
  • ಆರ್‌ಟಿಐ ಪತ್ರದಲ್ಲಿ ನಿಮ್ಮ ಅಸಮಾಧಾನ, ಕುಂದು ಕೊರತೆಗಳು ಇರಬಾರದು.

೨- ನಿಮಗೆ ಬಹಳಷ್ಟು ಮಾಹಿತಿಗಳು ಬೇಕಿದ್ದರೆ, ಚಿಕ್ಕದಾಗಿ ಚೊಕ್ಕವಾಗಿ ಪ್ರಶ್ನೆಗಳನ್ನು ಬರೆಯಿರಿ.
ನೀವು ಬರೆದ ಪ್ರಶ್ನೆ (ಪಿಐಓ) ಓದಗರಿಗೆ ಅರ್ಥವಾಗುವಂತೆ ಇರಲಿ. ಒಂದು ವೇಳೆ ಹೆಚ್ಚು ಮಾಹಿತಿ ಅವಶ್ಯಕ ಇದ್ದಲ್ಲಿ ಒಂದಕ್ಕಿಂತ ಹೆಚ್ಚು ಆರ್‌ಟಿಐ ಅರ್ಜಿ ನಮೂದಿಸಿದರೆ ಸೂಕ್ತ.

೩- ನೀವು ಬಯಸುವ ಮಾಹಿತಿ ಚಿಕ್ಕದಾಗಿರಲಿ 
ಉದಾ: ೧೯೮೬ರಿಂದ ಈ ವರೆಗೆ ಬೋರವೆಲ್ ಪರವಾನಿಗೆಯ ವಿವರ ನೀಡುವಂತೆ ಕೇಳಿದರೆ. ಪಿಐಒ ಅವರು ೩೦ ವರ್ಷಗಳ ದಾಖಲೆಯನ್ನು ಪರಿಕ್ಷಿಸಬೇಕು.
ಇದರ ಬದಲಿಗೆ ಸೂಕ್ತ ದಿನಾಂಕ ಅಥವಾ ೬ ತಿಂಗಳಿನಿಂದ ೧ ವರ್ಷದ ಮಾಹಿತಿ ಪಡೆದರೆ ಒಳ್ಳೆಯದು.
ಅರ್ಜಿಯನ್ನು ಹಾಕುವ ಮುನ್ನ ಮತ್ತೊಮ್ಮೆ ಹಸೆರು ವಿಳಾಸ ಪರೀಕ್ಷಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top