fbpx
News

ಯುನೈಟೆಡ್ ನೇಷನ್ಸ್ ಸಂಸ್ಥೆಯ ಹಲವು ಪ್ರಮುಖ ಅಂತರಾಷ್ಟ್ರೀಯ ಸ್ತ್ರೀ ರಕ್ಷಣಾ ಕ್ರಮಗಳು

ಯುನೈಟೆಡ್ ನೇಷನ್ಸ್ ಸಂಸ್ಥೆ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ 1981ರ ಸೆಪ್ಟಂಬರ್ 3ರಂದು ಒಂದು ಅಂತಾರಾಷ್ಟ್ರೀಯ ಒಡಂಬಡಿಕೆ ಮಾಡಿಕೊಂಡಿತ್ತು ಕನ್ವೇನ್ಷನ್ ಆನ್ ದ ಎಲಿಮಿನೇಶನ್ ಆಫ್ ಆಲ್ ಫಾರ್ಮ್ ಆಫ್ ಡಿಸ್ಕ್ರೀಮಿನೇಶನ್ ಆಗೈನಸ್ಟ್ ವಿಮನ್ (DEDAW and Convention on the Elimination of all forms of Discrimination Against Women) ಎಂಬ ಸಾಮೂಹಿಕ ಒಡಂಬದಿಕೆಗೆ ಕೆಲವೇ ಕೆಲವು ದೇಶಗಳನ್ನು ಹೊರತುಪಡಿಸಿ ಸುಮಾರು 50 ದೇಶಗಳು ಬದ್ಧತೆ ವ್ಯಕ್ತಪಡಿಸಿದವು. ಇರಾನ್, ಸುಡಾನ್, ಸೋಮಾಲಿಯ, ಕತಾರ್, ನೌರು. ಪಲೌ,ತೊಂಗ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಈ ಒಪ್ಪಂದಕ್ಕೆ ಸಹಿ ಮಾಡಲು ಹಲವು ಆಕ್ಷೇಪಣೆಗಳಿಟ್ಟವು. ಈ ಒಡಂಬಡಿಕೆಯ ಮೂಲ ಉದ್ದೇಶ ಲಿಂಗಬೇದವನ್ನು ತಡೆಗಟ್ಟಿ ಸಮಾಜದಲ್ಲಿ ಪುರುಷರಿಗಿರುವ ಎಲ್ಲ ಹಕ್ಕು ಬಾಧ್ಯತೆಗಳನ್ನು ಮಹಿಳೆಯರಿಗೂ ಅನ್ವಯಿಸುವಂತೆ ನೋಡಿಕೊಳ್ಳುವುದು. ಅಂದರೆ ಮಹಿಳೆಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾಪಾಡಿ ಮಹಿಳೆಗೆ ಸಮಾಜದಲ್ಲಿ ಸಂವಿಧಾನಬದ್ಧವಾಗಿ ಸಮಾನತೆಯನ್ನು ಜಾರಿಗೆ ತರುವುದು ಇದರ ಉದ್ದೇಶವಾಗಿದೆ.

*ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಹಂತಗಳಲ್ಲೂ ಡಿಸಿಷನ್ ಮೇಕಿಂಗ್ ನಲ್ಲಿ ಮಹಿಳೆಯರಿಗೂ ಪಾಲ್ಗೊಳ್ಳುವ ಅವಕಾಶ ಮಾಡಿಕೊಡಲು ಉತ್ತೇಜಿಸುವುದು ಹಾಗೂ ಮಹಿಳೆಯರು ಭಾಗವಹಿಸುವುದನ್ನು ಉತ್ತೇಜಿಸುವುದು.

*ಉದ್ಯೋಗ ಸ್ಥಲದಲ್ಲಿ ಮಹಿಳೆಯರ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು

* ಕಾನೂನು ರೀತ್ಯಾ ಎಲ್ಲಾ ರಂಗಳಲ್ಲೂ ಹಾಗೂ ಸಮಾಜದಲ್ಲೂ ಮಹಿಳೆಯರು ಹಾಗೂ ಪುರುಷರ ಸಮಾನತೆಯನ್ನು ಕಾಯ್ದುಕೊಳ್ಳುವುದು. ಹಾಗೂ ಕಾನೂನಿನ ಮೂಲಕ ಮಹಿಳೆಯರು ಹಾಗೂ ಯುವತಿಯರ ರಕ್ಷಣೆಯನ್ನು ಖಚಿತ ಪಡಿಸಿ ಕೊಳ್ಳುವುದು.

*ರಕ್ಷಣಾ ದಳಗಳು ಹಾಗೂ ರಕ್ಷಣಾ ಸಂಸ್ಥೆಗಳ ಮೂಲದ ಲಿಂಗ ಬೇಧ ನೀತಿಯಿಂದ ಮಹಿಳೆಯರಿಗೆ ಆಗುವ ಅನ್ಯಾಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು.

*ಮಹಿಳೆಯರಿಗೆ ಹೊರೆಯಾಗುವಂತೆ ಹಾಗೂ ಲಿಂಗ ಬೇಧ ನೀತಿಗಳು ಹಾಗೂ ಕಟ್ಟಳೆಗಳನ್ನು ಗುರುತಿಸಿ ಅವುಗಳನ್ನು ಶಮನಗೊಳಿಸಲು ಕ್ರಮ ಕೈ ಗೊಳ್ಳುವುದು.

*ಸಾಮಾಜಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳ ನಿರ್ದಾರಗಳಲ್ಲಿ ಹಾಗೂ ಅವುಗಳ ಅಳವಡಿಕೆಯಲ್ಲಿ ಮಹಿಳೆಯ ಅನಿಭವಗಳು, ಅಗತ್ಯಗಳು ಹಾಗೂ ದೃಷ್ಠಿಕೋನಗಳನ್ನು ಗಣನೆಗೆ ತೆಗೆದುಕೊಂಡು ಮಹಿಳೆಗೆ ಸಾಮಾಜಿಕ ನ್ಯಾಯ ಹಾಗೂ ಸಾಮಾನತೆಯ ನೆಮ್ಮದಿಯನ್ನು ನೀಡುವಂತೆ ಪ್ರೇರೇಪಿಸುವುದು ಹಾಗೂ ಖಚಿತ ಪಡಿಸಿ ಕೊಳ್ಳುವುದು.

ಮಹಿಳೆಯರ ಮೇಲೆ ಶೋಷಣೆ ಹಾಗೂ ಮಹಿಳೆಯರ ಮೂಲಭೂತ ಹಕ್ಕಿಗೆ ಚ್ಯುತಿ ಬರುವಂತಹ ಚಟುವಟಿಕೆಗಳು ಎಲ್ಲೇ ನಡೆಯುತ್ತಿದ್ದರೂ ರಾಷ್ಟ್ರಮಟ್ಟದಲ್ಲೇ ಆಗಲಿ ಅಥವಾ ಪ್ರಾದೇಶಿಕ ಮಟ್ಟದಲ್ಲಾಗಲಿ ಯುನೈಟೆಡ್ ನೇಷನ್ಸ್ ಸಂಸ್ಥೆಯ ಈ (ಸಿ.ಈ.ಡಿ.ಏ.ಡಬ್ಯು) ಕಾರ್ಯಕ್ರಮದಲ್ಲಿ ಸಹಾಯ ಪಡೆದುಕೊಳ್ಳಬಹುದು ಎಂದು ಯು.ಎಸ್.ಏ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top