fbpx
News

ಮನೆಯ ಆಹಾರದ ಸಾಮಗ್ರಿಗಳನ್ನು ಸಂರಕ್ಷಣೆ ಮಾಡುವುದು ಹೇಗೆ?

ಮನೆಗೆ ಆಹಾರ ಸಾಮಗ್ರಿಗಳನ್ನು ತಂದ ಬಳಿಕ ಅದನ್ನು ಇಡುವಾಗ ಕೆಲವು ಹೆಚ್ಚರಿಕೆಗಳನ್ನು ವಹಿಸಬೇಕ. ಒಂದು ವೇಳೆ ಆಹಾರ ಧಾನ್ಯಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿಡದೆ ಹೊದರೇ, ಅದರಲ್ಲಿ ದುರ್ವಾಸನೆ ಉಂಟಾಗುವ ಸಾಧ್ಯತೆ ಇರುತ್ತದೆ. ಅದರಲ್ಲಿ ಕೀಟಾಣುಗಳು ಆಗಬಹುದು. ಹೀಗಾಗಿ ಅವುಗಳನ್ನು ಸ್ವಚ್ಛತೆಯ ಬಗ್ಗೆ ಗಮನಕೊಡುವುದು ಅತ್ಯವಶ್ಯಕ. ಆಹಾರ ಧಾನ್ಯಗಳ ಸ್ವಚ್ಛತೆಯನ್ನು ಹೇಗೆ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಿರಿ.

*ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಿರುವ ಮುನ್ನ ಅವನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಸ್ವಚ್ಛಗೊಳಿಸಿದ ಬಳಿಕವೆ ಸಂಗ್ರಹಿಸಿಡಿ.

*ಯಾವ ಸ್ಥಳದಲ್ಲಿ ನೀವು ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿಸುತ್ತಿದ್ದೀರೋ, ಅದು ತೇವಾಂಶ ಮುಕ್ತವಾಗಿರುವಂತೆ.

*ಹಳೆಯ ಆಹಾರ ಧಾನ್ಯಗಳಲ್ಲಿ ಹೊಸ ಆಹಾರ ಧಾನ್ಯಗಳನ್ನು ಯಾವುದೇ ಕಾರಣಕ್ಕೂ ಸೇರಿಲೇಬೇಡಿ.

*ನೀವು ಆಹಾರ ಸಂಗ್ರಹಿಸುತ್ತಿರುವ, ಕೋಣೆಯ ಗೋಡೆಗಳಲ್ಲಿ ಬಿರುಕುಗಳು, ರಂಧ್ರಗಳು ಏನಾದರೂ ಬಿದ್ದಿದ್ದರೆ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡುವ ಮುನ್ನವೇ ಅವನ್ನು ಸಿಮೆಂಟ್ ನಿಂದ ತುಂಬಿ.

*ಸ್ಟೀಲ್ ಕಂಟೇನರ್ ನಲ್ಲಿ ಸಾಮಾನು ತುಂಬುವ ಮುಂಚೆ ಅದಕ್ಕೆ ಪೇಂಟ್ ಮಾಡಿಸಿ. ಹೀಗೆ ಮಾಡಿದಾಗ ತೇವಾಂಶ ಉಂಟಾಗುವುದಿಲ್ಲ.

*ಪ್ಲಾಸ್ಟೀಕ್ ಕಂಟೇನರ್ ಆಹಾರ ಸಂಗ್ರಹಿಸಿಡಲು ಉಪಯುಕ್ತ ಸಾಧನಗಳಾಗಿವೆ. ಯಾವ ಸ್ಥಳದಲ್ಲಿ ನೀವು ಕಂಟೇನರ್ ಇಡುತ್ತೀದ್ದೀರೋ ಅಲ್ಲಿ ಇದ್ದಿಲಿನ ಪುಡಿಯನ್ನು ಹಾಕಿ.

*ಧಾನ್ಯ ಸಂಗ್ರಹಿಸುವ ಮುಂಚೆ ರೂಮಿನಲ್ಲಿ ಸೆಲ್ಫಾಸ್, ಡಿಲೊಸಿಯಾ ಅಥವಾ ಫಾಸ್ ರಾಕ್ಸಿನ್ ಸಿಂಪಡಣೆ ಮಾಡಿ.

*ಒಂದು ವೇಳೆ ನಿವು ಸ್ಟೋರ್ ರೂಮಿನಲ್ಲಿ ಹಳೆಯ ಗೋಣಿಚೀಲದಲ್ಲಿ ಸಂಗ್ರಹಿಸಿಡುವುದಿದ್ದರೆ ಅದನ್ನು 1% ಮೆಲಾಥಿಯಾನ್ ದ್ರಾವಣದಲ್ಲಿ ಮುಳುಗಿಸಿ ನಂತರ ಒಣಗಿಸಿ ಉಪಯೋಗಿಸಿ.

*ಸ್ಟೋರ್ ರೂಮ್ ಅನ್ನು ಮೇಲಿಂದ ಮೇಲೆ ತೆರೆಯುವುದು ಸೂಕ್ತವಲ್ಲ. ಆದೇಶ ಕೆಲವು ದಿನಗಳ ಅಂತರದಲ್ಲಿ ಒಂದು ಸಲ ತೆರೆದು ನೋಡುವುದು ಒಳ್ಳೆದು.

*ಧಾನ್ಯದ ಚೀಲಗಳನ್ನು ಕಂಟೇನರ್ ಗಳನ್ನು ಗೋಡೆಯಿಂದ ಸ್ವಲ್ಪ ದೂರಕ್ಕೆ ಇಡಿ.

*ಧಾನ್ಯ ತುಂಬುವ ಮೊದಲು ಅಲ್ಲಿ ಶೇ. 10 ಕಿಂತ ಹೆಚ್ಚು ತೇವಾಂಶ ಇರದಂತೆ ನೋಡಿಕೊಳ್ಳಿ.

*ಸ್ಟೋರ್ ರೂಮಿನ ಆಸುಪಾಸು ಕೊಳೆ ಕಸ ಇರದಂತೆ ನೋಡಿಕೊಳ್ಳಿ.

*ಸ್ಟೋರ್ ರೂಮಿನ ಕಿಟಕಿಗಳನ್ನು ಚೆನ್ನಾಗಿ ಭದ್ರಪಡಿಸಿ. ಏಕೆಂದರೆ ಅದು ಇಲಿಗಳು ಬಂದುಹೋಗುವ ಸ್ಥಳವಾಗದಂತೆ ನೋಡಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top