fbpx
News

ಒಳಾಂಗಣ ಸಸ್ಯಗಳನ್ನು ಅಲಂಕಾರಕ್ಕಾಗಿ ಇಡುವವರಿಗೊಂದಿಷ್ಟು ಮಾಹಿತಿ

ಮನೆಯ ಸೌಂದರ್ಯ ಹೆಚ್ಚಿಸಲು ಹಾಗೂ ಹಸಿರಿನ ಅನುಭೂತಿ ಪಡೆದುಕೊಳ್ಳಲು ಜನರು ಈಗ ಡ್ರಾಯಿಂಗ್ ರೂಮ್, ಬಾಲ್ಕನಿ ಹಾಗೂ ಅಡುಗೆ ಮನೆಯಲ್ಲಿ ಒಳಾಂಗಣದ ಅಲಂಕಾರಿಕ ಸಸ್ಯಗಳ ಕುಂಡಗಳನ್ನು ಇಡುತ್ತಾರೆ. ನಿಮ್ಮ ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಇಟ್ಟಿದ್ದರೆ, ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು.

*ಎಷ್ಟೋಸಲ ಸಸ್ಯಗಳ ಎಲೆಗಳು ಅಕಾಲಿಕವಾಗಿ ಉದುರಲಾರಂಭಿಸುತ್ತವೆ. ಇದರ ಕಾರಣ ಕಂಡಿಯಿಡಿಯುವುದು ಒಮ್ಮೊಮ್ಮೆ ಕಷ್ಟಕರವಾಗಿ ಪರಿಣಮಿಸುತ್ತದೆ. ಇದಕ್ಕಾಗಿ ವಾತಾವರಣದಲ್ಲಿ ಪರಿವರ್ತನೆ, ಗೊಬ್ಬರದ ಸ್ಥಿತಿ ಗಾಹೂ ಕ್ರಿಮಿನಾಶಕಗಳ ಕುರಿತಂತೆ ತಜ್ಞರರಿಂದ ಸಲಹೆ ಪಡೆದುಕೊಳ್ಳಿ.

ಕೆಲವೊಂದು ಸಲ ಸಸ್ಯಗಳು ನಿಧಾನವಾಗಿ ಬೆಳೆಯುತ್ತವೆ ಇಲ್ಲವೆ ದುರ್ಬಲವಾಗುತ್ತವೆ. ಅವುಗಳ ಎಲೆಗಳು ಚಿಕ್ಕದಾಗಿ ಕಾಣಿಸಿಕೊಳ್ಳತೊಡಗುತ್ತದೆ. ಇಂತಹ ಸ್ಥಿತಿಯಲ್ಲಿ ಕುಂಡಗಳನ್ನು ವಿಸ್ತಾರವಾದ ಜಾಗದಲ್ಲಿ ಇಡಿ.

*ಯಾವುದೇ ಸಸ್ಯ ಹುಲುಸಾಗಿ ಬೆಳೆಯಲು ಸೂಕ್ತ ತಾಪಮಾನದ ಅಗತ್ಯವಿದೆ. ಹೀಗಾಗಿ ಆ ಬಗ್ಗೆಯೂ ಗಮನಕೊಡಿ.

*ಆಗಾಗ ಕುಂಡಗಳ ಮಣ್ಣನ್ನು ಪರೀಕ್ಷಿಸುತ್ತಾಇರಿ, ಯಾವುದಾರೂ ಕುಂಡ ಗಲೀಜಾಗಿದ್ದರೆ ಅದರಲ್ಲಿ ಕ್ರಿಮಿಗಳೇನಾದರೂ ತಗುಲಿದ್ದರೆ ಅದರ ಮಣನ್ನು ಬದಲಿಸಿ.

*ಎಷ್ಟೋಸಲ ಸಸ್ಯಗಳ ಮೇಲ್ಭಾಗದ ಚಿಗುರೆಲೆಗಳು ಹಳದಿ ಬಣ್ಣಕ್ಕೆ ತೇವದ ಕೊರತೆ , ಉಪ್ಪಿನಂಶ ಅಧಿಕವಾಗಿರುವುದು, ಗೊಬ್ಬರದ ಕೊರತೆ ಅಥವಾ ವಿಷಕಾರಕ ಘಟಕಗಳು ಅಂದರೆ ಫ್ಲೋರೈಡ್ ಟಾಕ್ಸಿಟಿ ಮುಂತಾದ ಕಾರಣಗಳಿರಬಹುದು. ಕಾರಣಗಳನ್ನು ಪತ್ತೆ ಮಾಡಿ ಅದನ್ನು ನಿವಾರಿಸಲು ಪ್ರಯತ್ನಿಸಿ.

*ಹೊಸ ಸಸ್ಯಕ್ಕೆ ಆರಂಭದ ದಿನಗಳಲ್ಲಿ ಹೆಚ್ಚು ಬೆಳಕಿನ ಅವಶ್ಯಕತೆ ಉಂಟಾಗುತ್ತದೆ. ಕೆಲವು ದಿನಗಳ ಬಳಿಕ ಕಡಿಮೆ ಬೆಳಕು ಸಾಕೆನಿಸುತ್ತದೆ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು.

*ಕಂಡದ ಮಣ್ಣಿನಲ್ಲಿ ಗೊಬ್ಬರದ ಪ್ರಮಾಣ ಅಧಿಕವಾಗಿರುವುದು ಕಂಡುಬಂದರೆ, ಅದರಲ್ಲಿ ನೀರನ್ನು ಹೆಚ್ಚು ಹಾಕಿ. ಅದು ಫಿಲ್ಟರ್ ಆಗಿ ರಂಧ್ರದ ಮೂಲಕ ಹೊರಹೊಗುತ್ತದೆ.

*ಒಳಾಂಗಣ ಸಸ್ಯವನ್ನು ನೇರವಾಗಿ ಬಿಸಿಲು ಬರುವ ಕಡೆ ಇಡಬೇಡಿ. ಆರಂಭಿಕ ದಿನಗಳಲ್ಲಿ ನೆರಳಿನಲ್ಲಿಡಿ. ನಂತರ ಕ್ರಮೇಣ ಬೆಳಕಿರುವ ಕಡೆ ಸರಿಸುತ್ತಾ ಹೋಗಿ. ಒಂದು ವೇಳೆ ಮನೆಯಲ್ಲಿ ಬೆಳಕಿನ ಕೊರತೆಯಿದ್ದರೆ ಕೃತಕ ಬೆಳಕಿನ ವ್ಯವಸ್ಥೆಮಾಡಿ.

*ಹಿಚ್ಚಿನ ಒಳಾಂಗಣ ಸಸ್ಯಗಳಿಗೆ ಹಗಲು ಹೊತ್ತಿನಲ್ಲಿ 25-35 ಡಿಗ್ರಿ ಫ್ಯಾರನ್ ಹೀಟ್ ಹಾಗೂ ರಾತ್ರಿ ಹೊತ್ತಿನಲ್ಲಿ 10-15 ಡಿಗ್ರಿ ಉಷ್ಣಾಂಶದ ಅಗತ್ಯ ಇರುತ್ತದೆ.

*ಸಸ್ಯದಲ್ಲಿ ವಾತಾವಣದಲ್ಲಿರುವ ತೇವಾಂಶದ ಅಗತ್ಯ ಬೀಳುತ್ತದೆ. ಈ ತೇವಾಂಶದ ಪ್ರಮಾಣ 10-15 ರ ಪ್ರಮಾಣದಲ್ಲಿರಬೇಕು.

*ಚಳಿಗಾಲದ ದಿನಗಳಲ್ಲಿ ರೋಮ್ ಹೀಟರ್ ಅಥವಾ ಏರ್ ಬ್ಲೋಯರ್ ಬಳಕೆಯಿಂದ ತೇವಾಂಶದ ಕೊರತೆಯುಂಟಾಗುತ್ತದೆ. ಹೀಗಾಗಿ ಎಲ್ಲಕ್ಕೂ ಉತ್ತಮ ಉಪಾಯವೆಂದರೆ, ರೂಮ್ ಹ್ಯುಮಿಡಿ ಫೈಯರ್ ನ್ನು ಬಳಸುವುದು. ಇದರ ಜೊತೆಗೆ ನೀರಿನ ಸ್ಪ್ರೇ ಮಾಡುವುರ ಮೂಲಕ ತೇವಾಂಶವನ್ನು ಹೆಚ್ಚಿಸಬಹುದು.

*ಮಣ್ಣಿನ ಕುಂಡಗಳ ಬದಲಿಗೆ ಪ್ಲಾಸ್ಟಿಕ್ ಕುಂಡಗಳನ್ನು ಉಪಯೋಗಿಸಿ.

*ಹೊಸ ಸಸಿಗಳನ್ನು ನೆಡುವಾಗ ಕ್ಲೋರಿನ್ ಬ್ಲೀಚ್ ಹಾಗೂ ನೀರಿನದ್ರಾವಣದಲ್ಲಿ ಸ್ಪೆರ್ ಲೈಸ್ ಮಾಡಿದ ಬಳಕವೇ ನೆಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top