fbpx
News

ನಿಮ್ಮ ಮನೆಯಲ್ಲಿ ಒಂದು ಸಾಕು ಪ್ರಾಣಿಗಳ ಅರೈಕೆ

ನಿಮ್ಮ ಮನೆಯಲ್ಲಿ ಒಂದು ಸಾಕು ಪ್ರಾಣಿ ತಂದಿದ್ದರೆ, ಅದು ಪರಿಪೂರ್ಣವಾಗಿ ಆರೋಗ್ಯದಿಂದಲ್ಲಿ ಮಾತ್ರ ನೀವುಆರೋಗ್ಯದಿಂದಿರ ಬಹುದು ಹೀಗಾಗಿ ನಿಮ್ಮ ಆರೋಗ್ಯದ ಜೊತೆಗೆ ಅದರ ಆರೋಗ್ಯದ ಬಗೆಗೂ ಗಮನಹರಿಸುವುದು ಅತ್ಯಗತ್ಯ.

ನಿಮ್ಮ ಸಾಕು ಪ್ರಾಣಿಯನ್ನು ಆಗಾಗ ಪಶುವೈದ್ಯರ ಬಳಿ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿ ಮತ್ತು ಅಗತ್ಯವಿರುವ ಎಲ್ಲ ಚುಚ್ಚುಮದ್ದುಗಳನ್ನು ಕೊಡಿಸಿ. ಇದರ ಜೊತೆಗೆ ಅದರ ಸ್ವಚ್ಛತೆಗೆ ಸಾಕಷ್ಟು ಗಮನಕೊಡಬೇಕಾಗುತ್ತದೆ. ನೀವು ಮನೆಯಲ್ಲಿ ಸಾಕುಪ್ರಾಣಿ ಹೊಂದಿದ್ದರೆ ಕೆಳಕಂಡ ಸಂಗತಿಗಳ ಮೇಲೊಮ್ಮೆ ಗಮನಹರಿಸಿ.

*ನಿಮ್ಮ ಸಾಕುಪ್ರಾಣಿಗಳನ್ನು ಸಾಂಕ್ರಮಿಕ ರೋಗಗಳಿಂದ ರಕ್ಷಿಸಲು ಆಗಾಗ ಚುಚ್ಚುಮದ್ದು ಹಾಕಿಸುವುದನ್ನು ಮರೆಯಬೇಡಿ.

*ನುರಿತ ಪಶುವೈದ್ಯರಿಂದ ಅದರ ಆರೋಗ್ಯದಿಂದ ಬಗ್ಗೆ ಮೇಲಿಂದ ಮೇಲೆ ತಪಾಸಣೇ ಮಾಡಿಸಿ. ಅದು ಕುಳಿತುಕೊಳ್ಳುವ ಸ್ಥಳ ಹಾಗೂ ಮಲಗುವ ಜಾಗವನ್ನು ಯಾವಾಗಲೂ ಸ್ವಚ್ಛವಾಗಿಡಿ.

*ಅದರ ದೈಹಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಕೊಡಿ. ಅದಕ್ಕೆ ನಿಯಮಿತಮಾಗಿ ಸ್ನಾನಮಾಡಿಸಿ.

*ನೀವು ಬೆಕ್ಕು ಸಾಕಿದ್ದರೆ ಕೆಲವು ಹೆಚ್ಚರಿಕೆ ವಹಿಸಬೇಕಾಗುತ್ತದೆ. ಮನೆಯಲ್ಲಿ ಗರ್ಭಿಣಿಯರು ಯಾರಾದರೂ ಇದ್ದರೆ, ಅವರು ಯಾವುದೇ ಕಾರಣಕ್ಕೂ ಬೆಕ್ಕಿನ ದೇಹ ಸ್ಪರ್ಶಿಸದಂತೆ ನೋಡಿಕೊಳ್ಳಿ. ಏಕೆಂದರೆ ಅದರಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆ, ಗರ್ಭಸ್ಥ ಶಿಶುವಿಗೆ ಹುಟ್ಟು ತೊಂದರೆ ಅಥವಾ ಟಾಕ್ಸೊಪ್ಲಾಸ್ಮೊಸಿಸ್ ನಂತಹ ರೋಗ ಉಂಟಾಗುವ ಅಪಾಯ ಇರುತ್ತದೆ.

*ನಾಯಿ-ಬೆಕ್ಕುಗಳನ್ನು ಸ್ಪರ್ಶಿಸಿದ ಬಳಿಕ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಮಕ್ಕಳಿಗೂ ಕೂಡ ಕೈಗಳನ್ನು ತೊಳೆದುಕೊಳ್ಳಲು ಹೇಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top