fbpx
News

ಸಣ್ಣ ಉಳಿತಾಯದ ದೊಡ್ಡ ಖಷಿ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಮಹಿಳೆಯರಿ ಮನೆ ನಡೆಸಿಕೊಂಡು ಹೋಗುವುದು ಒಂದು ಸವಾಲಾಗಿ ಪರಿಣಮಿಸಿದೆ. ಇಂತಹದರಲ್ಲಿ ಮಹಿಳೆಯರು ಸ್ಮಾರ್ಟ್ ಇನ್ ವೆಸ್ಟ್ ಮೆಂಟ್ ಮುಖಾಂತರ ತಮ್ಮ ಹಾಗೂ ತಮ್ಮ ಕುಟುಂಬ ಭವಿಷ್ಯವನ್ನು ಉಜ್ವಲಗೊಳಿಸಬಹುದು.

ನಮಗೆ ಬರುವ ಎಣಿಸಿದ ಕಜ್ಜಾಯದಂಥ ಅಲ್ಪ ಸಂಬಳದಲ್ಲಿ ಖರ್ಚುವೆಚ್ಚ ನಿಭಾಯಿಸುವುದೇ ಕಷ್ಟಕರವಾಗಿರುವಾಗ ಇನ್ನು ಉಳಿತಾಯ ಮಾಡುವುದು ಎಲ್ಲಿಂದ ಎಂದೇ ಎಲ್ಲರೂ ಚಿಂತಿಸುತ್ತಾರೆ. ನಿಮ್ಮಯೋಚನೆಯೂ ಸರಿಯಾಗಿಯೇ ಇದೆ. ಆದರೆ ಕ್ರಮಬದ್ಧವಾದ ಯೋಜನೆ ಹಾಗೂ ಶಿಸ್ತುಬದ್ದಾವಾಗಿ ಖರ್ಚುವೆಚ್ಚ ನಿಭಾಯಿಸುತ್ತಾ ಜೀವನ ಸಾಗಿಸಿದರೆ ಉಳಿತಾಯ ಅಸಾಧ್ಯವೇನಲ್ಲ.

*ನಿಮ್ಮ ಮಾಸಿಕ ಬಜೆಟ್ ನಲ್ಲಿ ನಿಶ್ಚಿತ ಖರ್ಚುಗಳ ಪಟ್ಟಿಯನ್ನು ಬೇರೆಯಾಗಿಡಿ. ಅಂದರೆ ಕರೆಂಟ್ ಬಿಲ್, ಫೋನ್ ಬಿಲ್, ವಾಟರ್ ಬಿಲ್, ಮನೆ ಬಾಡಿಗೆ, ಮಕ್ಕಳ ಫೀಸ್ ಇತ್ಯಾದಿ. ಯಾವ ಖರ್ಚುಗಳನ್ನು ಸ್ವಲ್ಪ ಮೊಟಕುಗೊಳಿಸಬಹುದೋ ಅವನ್ನು ಬೇರೆಯಾಗಿಡಿ. ಅಂದರೆ ಬಟ್ಟೆ. ಸ್ಯಾಂಡಲ್ಸ್, ಹೋಟೆಲ್- ಪಾರ್ಟಿ – ಪ್ರವಾಸ ಇತ್ಯಾದಿ.

*ಮಹಿಯರು ತಮ್ಮ ಕಾಸ್ಮೆಟಿಕ್ಸ್ ಖರ್ಚನ್ನೂ ಆದಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ನೀವು ತಿಮಗಳಿನಲ್ಲಿ 2 ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗುವಿರಾದರೆ, ಅದನ್ನು ಒಂದು ಸಲಕ್ಕೆ ಇಳಿಸಿ ಅಥವಾ 2 ತಿಂಗಳಿಗೊಮ್ಮೆ ಹೋಗುವಾದೊಳಿತು, ಇದರಿಂದ ಉಳಿಯುವ ಹಣವನ್ನು ಬ್ಯಾಂಕಿಗೆ ಸೇರಿಸಿ.

*ಪ್ರತಿದಿನ ಮಾಡುವ ಸಣ್ಣಪುಟ್ಟ ವ್ಯವಹಾರದಲ್ಲಿ ಸಿಗುವ ಚ್ಚಿಲ್ಲರೆ ಹಣವನ್ನು ಮಕ್ಕಳಿಗೆ ಕೊಟ್ಟು, ಗೋಲಕಕ್ಕೆ ಹಾಕಿಸಿ. ಅಂದರೆ ತರಕಾರಿ ಕೊಂಡಾಗ, ಹೊರಗಿನ ಶಾಪಿಂಗ್ ಮುಗಿಸಿ ಬಂದಾಗ ಇತ್ಯಾದಿ. ಆಕಸ್ಮಿಕವಾಗಿ ಎದುರಾಗುವ ಔಷಧಿ ಖರ್ಚು, ಅಥಿಗಳ ಆಗಮನದ ಸಮಯದಲ್ಲಿ ಇದು ಬಹಳ ನೆರವಾಗುತ್ತದೆ.

*ಹಣ ಉಳಿತಾಯಕ್ಕಾಗಿ ನೀವು ನಿಮ್ಮ ಮನರಂಜನೆಯ ಖರ್ಚನ್ನು ಸ್ಚಲ್ಪ ಮೊಟಕು ಮಾಡಬಹುದು. ಅಂದರೆ ಪ್ರತಿವಾರ ಅಥವಾ 15 ದಿನಗಳಿಗೊಮ್ಮೆ ಹೊರಗಿನ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವ ಬದಲು, ತಿಂಗಳಿಗೊಮ್ಮೆ ಮನೆಯವರೆಲ್ಲ ಒಟ್ಟಿಗೆ ಆ ಚಿತ್ರದ ಸಿ.ಡಿ ನೋಡಬಹುದು. ಗಂಡಸರ ಸಿಗರೇಟ್ ಸೇವನೆ, ಮಧುಪಾನ, ಅನಗತ್ಯ ಕಿಟಿಪಾರ್ಟಿಗಳು, ಕಂಡದ್ದನೆಲ್ಲ ಖರೀದಿಸುವ ಚಟ ಇತ್ಯಾದಿ ಬಿಟ್ಟರೆ ಎಷ್ಟೋ ಉಳಿತಾಯವಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top