fbpx
News

ಮನೆಯ ಟಾಯ್ಲೆಟ್ ಕ್ಲೀನಿಂಗ್ ನಿರ್ಲಕ್ಷಿಸುವ ವಿಷಯವಲ್ಲ

ಮನೆಯಲ್ಲಿ ಟಾಯ್ಲೆಟ್ ಕ್ಲೀನಿಂಗ್ ಇಲ್ಲದಿದ್ದರೆ. ಸರಿಯಾಗದ ಅರ್ಥದಲ್ಲಿ ಮನೆ ಶುಚಿಯಾಗಿಲ್ಲವೆಂದು ಹೇಳಬೇಕಾಗುತ್ತದೆ. ಬಹಳ ಜನ ಮನೆಯ ಮೆಯ್ನ್ ಹಾಲನ್ನು (ಲಿವಿಂಗ್ ರೂಮ್) ಬಲು ಶುಚಿಯಾಗಿ, ನೀಟಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಟಾಯ್ಲೆಟ್ ನ ಶುಚಿತ್ವದಕಡೆ ಒಂದಿಷ್ಟೂ ಗಮನ ಕೊಡುವುದಿಲ್ಲ.

*ಟಾಯ್ಲೆಟ್ ಸದಾ ನೀಟ್ ಮತ್ತು ಫ್ರೆಶ್ ಆಗಿರಸಲು, ಹಠಮಾರಿ ಕಲೆಗಳನ್ನು ತೊಲಗಿಸಿ. ದುರ್ಗಂಧವನ್ನು ಸಂಪೂರ್ಣ ಓಡಿಸಿ, ಸುಗಂಧ ಸೂಸಬಲ್ಲದಂಥ ಉತ್ತಮ ಕಮಪನಿಯ ಕ್ಲೀವರನ್ನು ಬಳಸಿ.

*ವಾರದಲ್ಲಿ 2-3 ಸಲ ಟಾಯ್ಲೆಟ್ ಸೀಟ್ ನ ಒಳ ಮತ್ತ ಹೊರಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

*ಟಾಯ್ಲೆಟ್ ಶುಚಿಗೊಳಿಸಲು ಶಸಕ್ತ ಬ್ರಿಸಲ್ಸ್ ವುಳ್ಳ ಬ್ರಶ್ಶನ್ನೇ ಬಳಸಬೇಕು. ಆಗ ಮಾತ್ರ ಅದು ಟಾಯ್ಲೆಟ್ ನ ಎಲ್ಲಾ ಭಾಗಗಳನ್ನೂ ಸಮರ್ಪಕವಾಗಿ ಶುಚಿಗೊಳಿಸಬಲ್ಲದು.

*ಆಸಿಡ್, ಫೆನಾಯಿಲ್ ಮುಂತಾದ ಹಳೆಯ ಕಾಲದಲ್ಲಿ ವಿಧಾನವನ್ನು ಬಿಟ್ಟುಬಿಡಿ. ಆಧುನಿಕ ವಿಜ್ಞಾನದ ತಾಂತ್ರಿಕ ಕೊಡುಗೆಗಳಾದ ಟಾಯ್ಲೆಟ್ ಕ್ಲೀನರ್ ಗಳನ್ನು ಸ್ವಚ್ಚಗೊಳಿಸಿ ಹೊಳೆಹೊಳೆಯುವಂತೆ ಮಾಡುವುದಲ್ಲದೆ, ಕೀಟಾಣುಗಳ ಸಂಪೂರ್ಣ ನಾಶ ಮಾಡಿ ಟಾಯ್ಲೆಟ್ ನ್ನು 100% ಸ್ವಚ್ಚಗೊಳಿಸುತ್ತದೆ. ಇದರಲ್ಲಿರುವ ಮುಖ್ಯ ಅನುಕೂಲವೆಂದರೆ, ಇದರಿಂದ ಟಾಯ್ಲೆಟ್ ಶುಚಿಗೊಳಿಸುವ ಕೆಲಸ ಬಹಳ ಸುಲಭವಾಗಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಟಾಯ್ಲೆಟ್ ಸಂಪೂರ್ಣ ಸ್ವಚ್ಛವಾಗುತ್ತದೆ, ಹೆಚ್ಚಿನ ಶ್ರಮಪಡಬೇಕಿಲ್ಲ.

*ಟಾಯ್ಲೆಟ್ ನ್ನು ಸದಾ ಸಚ್ಛ ಹಾಗೂ ದುರ್ಗಂಧ ರಹಿತವಾಗಿಡಲು ಅದರ ಟ್ಯಾಂಕ್ ಟಾಯ್ಲೆಟ್ ಬೌಲ್ ಟಾಯ್ಲೆಟ್ ಅನ್ನು ಅಗತ್ಯವಾಗಿ ಹಾಕಿಡಿ.

*ಒಂದು ಜೊತೆ ಕಾಮನ್ ಬಾತ್ ರೂಮ್ ಚಪ್ಪಲಿಗಳನ್ನು ಟಾಯ್ಲೆಟ್ ನ ಹೊರಗಿಟ್ಟಿರಿ. ಇದರಿಂದಾಗಿ ಎಲ್ಲರೂ ಇವನ್ನು ಧರಿಸಿ ಟಾಯ್ಲೆಟ್ ಬಳಸುವಹಾಗೆ ಮಾಡಿ. ಕೀಟಾಣುಗಳು ಮನೆಯಲ್ಲ ಹರಡುವುದು ತಪ್ಪುತ್ತದೆ.

*ಸಣ್ಣ ಮಕ್ಕಳಿಗೆ ಟಾಯ್ಲೆಟ್ ಬಳಸುವುದನ್ನು ಕಲಿಸಿ, ಟಾಯ್ಲೆಟ್ ಮ್ಯಾನರ್ಸ್ ರೂಢಿಸಿ.

*ಟಾಯ್ಲೆಟ್ ಶುಚಿಗೊಳಿಸುವಾಗ, ಕೈಗವಸು ಧರಿಸಿ ಬಾಯಿ-ಮುಖ ಮುಚ್ಚುವಂತೆ ಬಟ್ಟೆಯಿಂದ ಸಿತ್ತಿಕೊಳ್ಳಿ. ಆಗ ಕೀಟಾಣು ನಿಮ್ಮ ದೇಹ ಪ್ರವೇಶಿಸುವಿದಿಲ್ಲ. ಟಾಯ್ಲೆಟ್ ಕ್ಲೀನಿಂಗ್ ಪೂರ್ತಿಗೊಂಡ ನಂತರ, ಅವಶ್ಯವಿದ್ದರೆ ಸ್ನಾನ ಮಾಡಿರಿ.

*ಸಾಧ್ಯವಾದಷ್ಟು ಟಾಯ್ಲೆಟ್ ಅನ್ನು ಡ್ರೈ ಆಗಿರಿಸಿ. ನೀರು ಹರಡಿ, ತೇವಾಂಶ ಹೆಚ್ಚಿದಷ್ಟೂ ಬ್ಯಾಕ್ಟೀರಿಯಾ ಅಧಿಕಗೊಳ್ಳುತ್ತದೆ. ಕೊಳಕು ಹೆಚ್ಚುತ್ತದೆ. ಇದಕ್ಕಾಗಿ ಉತ್ತಮ ವೈಪರ್ಸ್ ಬಳಸಿರಿ.

*ಮನೆಯ ಇತರ ಕೋಣೆಗಳಿಗಿಂತ ಟಾಯ್ಲೆಟ್ ನಲ್ಲೇ ಹೆಚ್ಚಿನ ಕೀಟಾಣುಗಳು ತುಂಬಿರುತ್ತವೆ. ಅಲ್ಲೇ ಇವು ಬೇಗ ಬೇಗ ವೃದ್ಧಿ ಯಾಗುತ್ತವೆ. ಹೀಗಾಗಿ ಇದರ ಶುಚಿತ್ವದ ಕಡೆ ಎಷ್ಟು ಗಮನಕೊಟ್ಟರು ಸಾಲದು. ಸ್ವಚ್ಛತೆ-ಶುಭ್ರತೆಗಳು ಮಾತ್ರವೇ ರೋಗ ಹರಡದಂತೆ ನಿಂತ್ರಿಸಬಲ್ಲ ಮೂಲ ಸಾಧನಗಳಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top