fbpx
Achivers

ಅಜಂತಾ ಗುಹೆಗಳನ್ನು ಕಟ್ಟಿಸಿದ್ದು ಅನ್ಯಗ್ರಹ ಜೀವಿಗಳು ಎಂದು ಹೇಳುತ್ತಿದೆ ಹೊಸ ಸಂಶೋಧನೆ!!

ಶಿಲ್ಪಕಲೆಯ ಅದ್ಬುತ ಈ ಅಜಂತಾ

ಅಜಂತಾ ಗುಹೆಗಳು ವಿಸ್ಮಯಗಳ ಆಗರ . ಅಜಂತಾ ಗುಹೆಗಳ ನಿಖರತೆಗೆ , ಸೌಂದರ್ಯಕ್ಕೆ ಅಜಂತಾ ಗುಹೆಗಳೇ ಸಾಟಿ . ಅಜಂತಾ ಗುಹೆಗಳ ಪ್ರತಿ ಕಲ್ಲಿನಲ್ಲೂ , ಪ್ರತಿ ಕೆತ್ತನೆಯ ಹಿಂದೆಯೂ ಎಷ್ಟೋ ವಿಷಯಗಳು ಅಡಗಿವೆ . ಈ ಅಜಂತಾ ಗುಹೆಗಳ ನಿರ್ಮಾಣ ಶುರುವಾಗಿದ್ದು ಕ್ರಿಸ್ತಪೂರ್ವ ೨ನೇ ಶತಮಾನದಲ್ಲಿ . ಅದನ್ನು ಬೌದ್ಧ ಧರ್ಮದ ಅನುನಾಯಿಗಳಿಂದ  , ಬುದ್ಧನ ಸಮ್ಮುಖದಲ್ಲಿ ನಿರ್ಮಿಸಲಾಯಿತು . ಮೊದಲಿಗೆ ಅಲ್ಲಿ ಬಣ್ಣಗಳ ಉಪಯೋಗವಿರಲಿಲ್ಲ , ಏಕೆಂದರೆ ಬುದ್ದನು  ಬಣ್ಣಗಳ ಉಪಯೋಗ  ಲೌಕಿಕ ಆಸೆಗಳ ಪ್ರತೀಕ ಎಂದು ಪ್ರತಿಪಾದಿಸುತ್ತಿದ್ದನು . ಅವನು ಕಾಲವಾದ ನಂತರ ಅಲ್ಲಿ ಬುದ್ಧನ ಜೀವನದ ಬಗ್ಗೆಗಿನ ಸಾಕಷ್ಟು ಚಿತ್ರಕಲೆಗಳನ್ನು ಬಣ್ಣ ಬಣ್ಣವಾಗಿ ಅಲ್ಲಿಯ ಗೋಡೆಗಳ ಮೇಲೆ ಚಿತ್ರಿಸಲಾಯಿತು .

ಆ ಗುಹೆಗಳನ್ನು ನಿರ್ಮಿಸಿದವರು ಬಾಹ್ಯಾಕಾಶದ ಬಗ್ಗೆ ಬಹಳ ಸಂಶೋಧನೆಯನ್ನ ಮಾಡಿದ್ದವರು . ಅವರಿಗೆ ಬಾಹ್ಯಾಕಾಶದ ವಸ್ತುಗಳ ಮಧ್ಯದ ಸಂಬಂಧದ ಬಗ್ಗೆ ಜ್ಞಾನವಿತ್ತು. 

ಆ ಬೆಟ್ಟದ ತುದಿಯಲ್ಲಿ ನಿಖರವಾಗಿ ಗುಹೆಗಳನ್ನು ಕೊರೆಯಲಾಗಿದೆ , ಅದರಲ್ಲಿ ಕೆಲವೊಂದು ಪೂರ್ವದ ಕಡೆ , ಇನ್ನು ಕೆಲವು ದಕ್ಷಿಣದ ಕಡೆ  ಮತ್ತೆ ಕೆಲವು ಪಶ್ಚಿಮದ ಕಡೆ ಮುಖ ಮಾಡಿದೆ . ಅವುಗಳನ್ನು ಕೊರೆದಿರುವ ಶೈಲಿಯನ್ನು ನೋಡಿದರೆ , ನಮ್ಮ ಪೂರ್ವಜರಿಗೆ ಬಾಹ್ಯಾಕಾಶದ ಬಗ್ಗೆ , ಅಲ್ಲಿನ ಕಾಯಗಳ ಬಗ್ಗೆ ಬಹಳ ಆಸಕ್ತಿಯಿತ್ತೆಂದು ತಿಳಿಯಬಹುದು . ಅದಕ್ಕೆ ಸಾಕ್ಷಿ ಅಲ್ಲಿರುವ ೨ ಗುಹೆಗಳು.

ಆ ೨ ಗುಹೆಗಳಲ್ಲೂ ಸ್ತೂಪಗಳಿವೆ . ಅದರಲ್ಲಿ ಬುದ್ಧನ ಮೂರ್ತಿ ಇದೆ. ಆ ಮೊದಲನೆಯ ಗುಹೆಯು ಗುಹೆ ನಂ. ೧೯ . ಇದು ಮಕರ ಸಂಕ್ರಮಣದ ಕಡೆ ಕೇಂದ್ರೀಕೃತವಾಗಿದೆ . ಅಂದರೆ ಮಕರ ಸಂಕ್ರಮಣದ ದಿನ ಈ ಗುಹೆಯ ಮೇಲ್ಭಾಗದಲ್ಲಿರುವ ಕಿಟಕಿಯ ಮೂಲಕ ಕಿರಣಗಳು ಹಾದು ಒಳಗಿರುವ ಬುದ್ಧನ ಮೂರ್ತಿಯನ್ನು ಬೆಳಗುತ್ತದೆ . ಎರಡನೇ ಗುಹೆ , ಗುಹೆ ನಂ ೨೬ ರಲ್ಲೂ ಸಹ ಇಂಥಹುದೇ ನಡೆಯುತ್ತದೆ , ಆದರೆ ಅದು ಕರ್ಕಾಟಕ ಸಂಕ್ರಮಣದ ದಿನ . ಕಲ್ಲಿನ ಒಳಗಿನಿಂದ ಗುಹೆಗಳನ್ನು ಕೆತ್ತುವಾಗ ಇಂತಹ ವಿದ್ಯಾಮಾನ ನಡೆಯಲು ಸಾಕಷ್ಟು ಸಂಶೋಧನೆಯ ಅವಶ್ಯಕತೆ ಇದೆ , ಹಾಗು ನಿಖರತೆಯ ಅವಶ್ಯಕತೆಯಿದೆ .

ಅದಕ್ಕೆ ಹೇಳಿದ್ದು ಅಜಂತಾ ಶಿಲ್ಪಕಲೆಯ ಅದ್ಬುತ ಎಂದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top