ಕನ್ನಡದಲ್ಲಿ ಎಲಚಿ ಹಣ್ಣು, ಬೋರೆ ಹಣ್ಣು, ಬಾರೆ ಹಣ್ಣು ಎಂದು ಕರೆಯಲ್ಪಡುವ ಇದು ಕರ್ನಾಟಕದ ಎಲ್ಲ ಜಾಗಗಳಲ್ಲಿಯೂ ಬೆಳೆಯಲಾಗುತ್ತದೆ.ರಾಮಾಯಣದಲ್ಲಿ ಎಲಚಿಗೆ ವಿಶಿಷ್ಟ ಸ್ಥಾನವಿದೆ. ಕಚ್ಚಿದ ಎಲಚಿ ಹಣ್ಣುಗಳನ್ನು ರುಚಿ ನೋಡಿ ಶಬರಿ ರಾಮನಿಗೆ ಕೊಟ್ಟಿದ್ದು ಒಂದು ದಂತಕತೆ. ಎಲಚಿ ಹಣ್ಣು ಪೋಷಕಾಂಶಗಳ ಆಗರವಾಗಿದೆ. ಬೇರು, ಎಲೆ, ಕಾಂಡದ ತೊಗಟೆ, ಹಣ್ಣು, ಬೀಜ, ಬೀಜದ ತಿರುಳು ಎಲ್ಲವೂ ಔಷಧೀಯ ಗುಣ ಹೊಂದಿವೆ.
ಔಷಧೀಯ ಗುಣಗಳು:
೧) ವಾಂತಿಯಾಗುತ್ತಿದ್ದಲ್ಲಿ ಎಲಚಿ ಹಣ್ಣು, ಕಾಳು ಮೆಣಸು ಸೇರಿಸಿ ಕಷಾಯ ತಯಾರಿಸಿ ಕಲ್ಲು ಸಕ್ಕರೆ ಬೆರೆಸಿ ಕುಡಿಯಬೇಕು.
೨) ನರಗಳ ದೌರ್ಬಲ್ಯವಿರುವವರಿಗೆ ಎಲಚಿ ಹಣ್ಣು ಉತ್ತಮವಾದದು.
೩) ಮೊಡವೆಗಳಿರುವವರು ಎಲಚಿ ಬೀಜದ ತಿರುಳನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಸೇರಿಸಿ ಹಚ್ಚಿಕೊಳ್ಳಬೇಕು.
೪) ಹಣ್ಣುಗಳ ಸೇವನೆ ರಕ್ತ ಶುದ್ಧಿ ಮಾಡುತ್ತದೆ.
೫) ದೇಹದ ಯಾವುದೇ ಭಾಗಗಳಲ್ಲಿ ಊಟವಿದ್ದಲ್ಲಿ ಎಲೆಗಳನ್ನು ಜಜ್ಜಿ ಚಟ್ನಿ ಮಾಡಿ ಲೇಪಿಸಬೇಕು.
೬) ತಲೆಕೂದಲು ಉದುರುತ್ತಿದ್ದಲ್ಲಿ ಎಲಚಿ ಎಳೆಗಳ ರಸವನ್ನು ಹಚ್ಚಿಕೊಂಡು ತಲೆ ತೊಳೆದುಕೊಳ್ಳಬೇಕು.
೭) ಜ್ವರವಿರುವಾಗ ಎಲಚಿ ಬೇರಿನ ಪುಡಿಯನ್ನು ಜೇನುತುಪ್ಪ ಇಲ್ಲವೇ ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು.
೮) ಭೇದಿಯಾಗುತ್ತಿದ್ದಲ್ಲಿ ತೊಗಟೆಯ ಪುಡಿ ಇಲ್ಲವೇ ಕಷಾಯದ ಸೇವನೆ ಒಳ್ಳೆಯದು.
೯) ಮಲಬದ್ಧತೆ ಇರುವವರು ಎಲಚಿ ಹಣ್ಣುಗಳನ್ನು ತಿಂದರೆ ಮಲವಿಸರ್ಜನೆ ಸರಾಗವಾಗುತ್ತದೆ.
೧೦) ಚರ್ಮರೋಗಗಳಲ್ಲಿ ತೊಗಟೆಯ ಕಷಾಯ ಸೇವನೆ ಒಳ್ಳೆಯದು.
೧೧) ಎಳಚಿ ಹಣ್ಣಿನ ಸೇವನೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
೧೨) ಹೃದ್ರೋಗದಿಂದ ಬಳಲುತ್ತಿರುವವರಿಗೆ ಎಲಚಿ ಹಣ್ಣು ಉತ್ತಮ ಟಾನಿಕ್.
ವಿ ಸೂ: ಮೇಲೆ ನೀಡಿರುವ ಮಾಹಿತಿ ಸಾಮಾನ್ಯ ಖಾಯಿಲೆಗಳಿಗೆ ಮಾತ್ರ. ಪದೇ ಪದೇ ಈ ಸಮಸ್ಯೆಗಳು ಕಂಡು ಬಂದಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
