fbpx
Awareness

ಮಹಾಭಾರತದ ಕಾಲಾವಧಿಯಲ್ಲಿ ಗಗನಯಾನ ಸರ್ವೇ-ಸಾಮಾನ್ಯವಾಗಿತ್ತ??

ಮಹಾಭಾರತದಲ್ಲೇ ಇತ್ತಾ ಟೈಮ್ ಟ್ರಾವೆಲ್ಲಿಂಗ್ ನ ಉಲೇಖ??

ಟೈಮ್ ಟ್ರಾವೆಲ್ಲಿಂಗ್ ಎನ್ನುವುದರ ಅರ್ಥ ನಾವು ಎರಡು ಬೇರೆ ಬೇರೆ ಸಮಯದ ನಡುವೆ ಪ್ರವಾಸಿಸುವುದು . ಉದಾಹರಣೆಗೆ ಗಗನಯಾತ್ರಿಗಳು ಗಗನಕ್ಕೆ ಹೋದಾಗ ಅವರಿಗೆ ಅಲ್ಲಿ ಅವರು ಇದ್ದಿದ್ದು ಸ್ವಲ್ಪ ದಿನಗಳು ಎಂದು ಅನ್ನಿಸಿದರೂ ಸಹ , ಅವರು ತಿರುಗಿ ಭೂಮಿಗೆ ಬಂದಾಗ ಎಷ್ಟೋ ವರ್ಷಗಳೇ ಕಳೆದಿರುತ್ತದೆ . ಕೇಳಲು ವಿಚಿತ್ರವೆನ್ನಿಸಿದರು , ಇದು ಸತ್ಯ . ಈ ವಿದ್ಯಮಾನವನ್ನು ಮೊದಲು ಉಲೇಖಿಸಿದವರ ಬಗ್ಗೆ ಇವತ್ತಿಗೂ ಚರ್ಚೆಗಳು ನಡೆಯುತ್ತಿವೆ , ಆದರೆ ಸಾಕಷ್ಟು ಜನ ನಂಬುವ ಪ್ರಕಾರ ಈ ವಿದ್ಯಾಮಾನದ ಮೊದಲು ಉಲೇಖಿಸಿದ್ದು ಮಹಾಭಾರತ !!

 

Image result for mahabharata time travel

ಕ್ರಿಸ್ತಪೂರ್ವ ೩೦೦ ರಲ್ಲಿ ರಚಿಸಲಾದ ಮಹಾಭಾರತದಲ್ಲಿ ರೇವಾಯಿತಾ ಎಂಬ ರಾಜನ ಕಥೆಯಿದೆ . ಅವನು ಒಂದು ಬಾರಿ ದೇವತೆಗಳನ್ನು , ಅದರಲ್ಲೂ ಸೃಷ್ಟಿಕರ್ತ ಬ್ರಹ್ಮನ ನೋಡುವ ಇಚ್ಛೆಯಿಂದ ಆಕಾಶಕ್ಕೆ ಹೋಗುತ್ತಾನೆ . ಅವನು ಅಲ್ಲಿ ಸ್ವಲ್ಪ ಕಾಲ ಇದ್ದು ನಂತರ ಭೂಮಿಗೆ ವಾಪಸ್ಸಾಗುತ್ತಾನೆ . ಆಗ ಭೂಮಿಯಲ್ಲಿ ನೂರಾರು ವರ್ಷಗಳೇ ಕಳೆದು ಹೋಗಿರುತ್ತದೆ . ಅದು ಹೀಗೆ ಎನ್ನುತೀರಾ ? ಅದೇ ಟೈಮ್ ಟ್ರಾವೆಲ್ .

Image result for mahabharata time travel

ಅಲ್ಲಿದೆ ನೋಡಿ ಮೊದಲ ಟೈಮ್ ಟ್ರಾವೆಲ್ನ ಉಲೇಖ . ನಮ್ಮ ಪೂರ್ವಜರಿಗೆ ಕ್ರಿಸ್ತಶಕ ೩೦೦ ರಲ್ಲೇ ಇದರ ಬಗ್ಗೆ ತಿಳಿದಿತ್ತಾ ? ಹಾಗಾದರೆ ಪುರಾತನ ಗ್ರಂಥಗಳಲ್ಲಿ ಇನ್ನೆಷ್ಟು ಇಂಥ ವಿದ್ಯಮಾನಗಳ ಬಗ್ಗೆ ಸುಳಿಹುಗಳಿವೆ ? ಆ ಕಾಲದಲ್ಲೇ ಭಾರತದ ವಿಜ್ಞಾನ ಕ್ಷೇತ್ರ  ಅಷ್ಟು ಮುಂದುವರಿದಿತ್ತಾ ?

ಇದ್ಯಾವುದಕ್ಕೂ ನಮ್ಮ ಬಳಿ ಉತ್ತರಗಳಿಲ್ಲ . ನಮ್ಮ ಪುರಾತನ ಗ್ರಂಥಗಳಲ್ಲಿ , ವೇದ ಉಪನಿಷದ್ ಗಳಲ್ಲಿ ನಮ್ಮ ಪ್ರತಿ ಪ್ರಶ್ನೆಗಳಿಗೂ ಉತ್ತರಗಳಿವೆ , ಆದರೆ ನಾವು ಅದನ್ನು ಪ್ರಶ್ನೆ ಮಾಡಲು ಕಲಿತ್ತಿಲ್ಲ , ಎಷ್ಟೋ ವರ್ಷಗಳಿಂದ ಅವುಗಳನ್ನು ನಿರ್ಲಕ್ಷಿಸುತ್ತಲೇ ಇದ್ದೇವೆ .

ಏನೇ ಆಗಲಿ , ಭಾರತವು ಮಾತ್ರ ರಹಸ್ಯಗಳ , ವಿಜ್ಞಾನದ , ನಿಗೂಢತೆಗಳ  ಕಣಜ ಎಂದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top