fbpx
Breaking News

ಶಶಿಕಲಾದು ಬೇಡಿಕೆ ಅತಿಯಾಯ್ತು: ಮುದ್ದೆ ಸಾಕಯ್ತು, ಪೋಂಗಲ್ ಬೇಕಾಯ್ತು

ಸಿ.ಎಂ ಗಾದಿಯ ಮೇಲೆ ಕಣ್ಣಿಟ್ಟಿದ ಶಶಿಕಲಾ ಅವರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿ ಆದೇಶ ನೀಡಿತ್ತು. ಇದರ ಬೆನ್ನಲ್ಲೆ ಅವರುಪರಪ್ಪನ್ನ ಅಗ್ರಹಾರದ ಅತಿಥೀಯಾಗಿದ್ದಾರೆ. ಕರ್ನಾಟಕದ ಮುದ್ದೆ ಶಶಿಕಲಾ ಅವರಿಗೆ ಒಗ್ಗುತ್ತಿಲ್ಲ ಎಂದು ಕಾಣುತ್ತೆ ಅದಕ್ಕೆಅವರು, ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾರೆ.

Image result for shashikala

ಎಸ್. ತಾವು ಮುಖ್ಯಮಂತ್ರಿ ಆಗದಿದ್ದರೇ ಏನಂತೆ ತನ್ನ ಬೆಂಬಲಿಗ ಆ ಕುರ್ಚಿಯಲ್ಲಿ ಕುಳಿತಿದ್ದಾನಲ್ಲ ಇದರ ಸಂಪೂರ್ಣ ಲಾಭಪಡೆಯಲು ಶಶಿಕಲಾ ಅವರು ಯೋಜನೆಯನ್ನು ರೂಪಿಸಿಕೊಂಡಿದ್ದಾರೆ. ಶಶಿಕಲಾ ಎಲ್ಲಾ ತಾವೊಂದುಕೊಂಡಂತೆ ಆದರೆಶಶಿಕಲಾ ತಮಿಳುನಾಡು ಜೈಲಿನಲ್ಲಿ ಪೋಂಗಲ್ ಸವಿಯಬಹುದು.

Image result for shashikala jail

Credits: Uttarpradesh.org

ಇಂತಹ ಒಂದು ರೂಪುರೇಷೆಗೆ ತಮಿಳುನಾಡು ಸರ್ಕಾರ ಯೋಜನೆ ರೂಪಿಸಿಕೊಳ್ಳುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿಸಮಾನ್ಯ ಕೈದಿಯಂತೆ ಇರುವ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯಗಳಿಲ್ಲ. ಹೀಗಾಗಿ ಅವರು ಬೇರೆ ಜೈಲಿಗೆ ವರ್ಗಾಯಿಸುವಂತೆಇಬ್ಬರು ವಕೀಲರೊಂದಿಗೆ ಮಾತುಕತೆ ನಡೆಸಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಅನುಸಾರ ಶಶಿಕಲಾ ಅವರ ಪರವಾಗಿ ಕರ್ನಾಟಕಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನೀಲ ನಕ್ಷೆ ಸಿದ್ಧವಾಗುತ್ತಿದೆ. ಮಧುಮೇಹ ಹಾಗೂ ಆರೋಗ್ಯದ ಕಾರಣ ನೀಡಿ ಶಶಿಕಲಾಅವರನ್ನು ಚೆನ್ನೈ ಅಥವಾ ವೇಲೂರು ಜೈಲಿಗೆ ಶಿಫ್ಟ್ ಮಾಡುವಂತೆ ಮನವಿಗೆ ತೀರ್ಮಾನಿಸಲಾಗಿದೆ.

ಯಾರೋ ಹೆಣೆದ ರೂಪುರೇಷೆಗಳಿಗೆ ಬಣ್ಣ ತುಂಬುವ ಕಾರ್ಯ ಸೋಮವಾರದಿಂದ ನಡೆಯುತ್ತಿದೆ. ಮುದ್ದೆ ಬಪ್ಪುಸಾರು, ಬಿಳಿ ಸಿರಿಮನೆ ಊಟದ ಮುಕ್ತಿಗೆ ಶಶಿಕಲಾ ಅವರು ಹಾಕಿಕೊಂಡ ಪ್ಲಾನ್ ಫಲಿಸುತ್ತದೋ ಇಲ್ಲವೋ ಕಾದುನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top