fbpx
Awareness

ಹಿಂದು ಧಾರ್ಮಿಕ ನಂಬಿಕೆ ಧಕ್ಕೆ ಮಾಡಿದ ಅಮೆರಿಕ ಅಂರ್ತಜಾಲ!!

ಯಾವುದೇ ಧರ್ಮಕ್ಕೂ ದಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯು ದೇಶದ ಪ್ರತಿಯೊಬ್ಬ ಪ್ರಜೇಯ ಕರ್ತವ್ಯವಾಗಿರುತ್ತದೆ. ಆದರೆ ಜನರ ಭಾವನೆಗಳ ಜೊತೆ ಆಟವಾಡಿ ದುಡ್ಡ ಮಾಡಬಹುದು ಎಂಬ ನಂಬಿಕೆಯನ್ನು ಹೊಂದಿರುವ ಎರಡು ಕಂಪನಿಗಳು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಮನುಷ್ಯನ ಧಾರ್ಮಿಕ ಭಾವನೆಗೆ ಧಕ್ಕೆಯನ್ನು ಉಂಟುಮಾಡಿದರೆ ಆ ಕಂಪಮಿಗಳ ವಿರುದ್ಧ ಹರಿಹಾಯುತ್ತಾನೆ.

Image result for yeswevibe

ಕೆಲವು ದಿನಗಳ ಹಿಂದೆ ದೇವರ ಫೋಟೋಗಳನ್ನು ಬೇರೆ ಬೇರೆ ವಸ್ತುಗಳ ಮೇಲೆ ಬಳಸಿ ಉಗಿಸಿಕೊಂಡ ಕಂಪನಿಗಳ ಸಾಲಿಗೆ ಅಮೆರಿಕ ಮೂಲದ ಎರಡು ಕಂಪನಿಗಳು ಮತ್ತೆ ಸೇರುತ್ತವೆ. ಈ ಕಂಪನಿಗಳು ಮಾಡಿದ್ದು ಏನಪ್ಪ ಅಂದ್ರೆ, ಪ್ರಥಮ ಪೂಜಿತ ಗಣೇಶನನ್ನು ಬೀರ್ ಬಾಟಲ್ ಮೇಲೆ ಹಾಗೂ ಓಂ ಚಿಹ್ನೆಯನ್ನು ಶೂ ಮೇಲೆ ಮಾರಾಟಕ್ಕಿಟ್ಟು ಮೂಲಕ ಧಾರ್ಮಿಕ ಭಾನವೆಗೆ ಧಂಕೆ ತಂದಿವೆ. ಆ ಕಂಪನಿಗಳೆಂದರೆ yeswevibe.com ಮತ್ತು lostcost.com ಕಂಪನಿಗಳ ವಿರುದ್ಧ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ನರೇಶ್ ಕಾಡ್ಯನ್ ದೂರು ನೀಡಿದ್ದಾರೆ.

Image result for yeswevibe

ಇದಕ್ಕೂ ಮೊದಲು 2016ರ ಜೂನ್ ನಲ್ಲಿ ಆನ್ ಲೈನ್ ನಲ್ಲಿ ದೊಡ್ಡ ಹೆಸರು ಮಾಡಿರುವ ಅಮೆಝಾನ್ ಸಹ ಇಂತಹದ್ದೇ ಒಂದು ವಿವಾದವನ್ನು ಮೈಮೇಲೆ ಹಾಕಿಕೊಂಡಿತ್ತು. ಇದರ ವಿರುದ್ಧ ಜನ ತಿರುಗಿ ಬಿದ್ದದ್ದರು ಅಲ್ಲದೆ ಈ ಕಂಪನಿ ವಿರುದ್ಧ ಸಮರ ಸಾರಿದ್ದರು.

ಈಗ ನರೇಶ್ ಸಹ ಇದೇ ತರಹನಾದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವಿಷಯವನ್ನು ಅವರು ವಿದೇಶಾಂಗ ಸಚಿವಾಲಯದ ಗಮನಕ್ಕೆ ಪತ್ರದ ಮೂಲಕದ ತಿಳಿಸಿದ್ದಾರೆ. ಅಲ್ಲದೆ ಈ ಕಂಪನಿಗಳ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಬೇಕೆಂದು ಕೇಳಿಕೊಂಡಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕಂಪನಿಗಳ ವಿರುದ್ಧ ಧ್ವನಿ ದೇಶವಸಿಗಳು ಧ್ವನಿ ಎತ್ತಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top