ಇತರೆ

ಟಾಪ್ 10 ಶ್ರಿಮಂತ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ ಮೂರನೇ ಸ್ಥಾನ

ಭಾರತದ ಟಾಪ್ 10 ಶ್ರಿಮಂತ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ ಮೂರನೇ ಸ್ಥಾನ

ಭಾರತದ ಆರ್ಥಿಕ ರಾಜಧಾನಿ ಮುಂಬೈ ಭಾರತದ ಶ್ರಿಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದ ರಾಜಧಾನಿ ನಮ್ಮ ಬೆಂಗಳೂರು ಶ್ರಿಮಂತ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಸೇರಿಕೊಂಡಿದೆ.

ಭಾರತದ ಆರ್ಥಿಕ ರಾಜಧಾನಿ ಮುಂಬೈ ಭಾರತದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಗರದಲ್ಲಿ 46 ಸಾವಿರ ಲಕ್ಷಾಧಿಪತಿಗಳು ಹಾಗೂ 28 ಜನ ಕೋಟ್ಯಧಿಪತಿಗಳು ನೆಲೆಸಿದ್ದಾರೆ. ಮುಂಬೈನಲ್ಲಿರುವ ಸಂಪತ್ತಿನ ಒಟ್ಟು ಪ್ರಮಾಣ 820 ಬಿಲಿಯನ್ ಡಾಲರ್ (54.94 ಕೋಟಿ) ಎಂದು ನ್ಯೂ ವರ್ಲ್ಡ್ ವೆಲ್ತ್ ವರದಿ ಮಾಡಿದೆ.

ಹಾಗೆಯೇ ಬಿಲಿಯನ್ ಡಾಲರ್(30.15 ಕೋಟಿ) ಶ್ರೀಮಂತಿಕೆ ಹೊಂದಿದೆ. ಇನ್ನು ನಮ್ಮ ಬೆಂಗಳೂರಿನಲ್ಲಿ 7,700 ಲಕ್ಷಾಧಿಪತಿಗಳು ಮತ್ತು 8 ಕೋಟ್ಯಧಿಪತಿಗಳು ನೆಲೆಸಿದ್ದಾರೆ. 320 ಬಿಲಿಯನ್ ಡಾಲರ್(21.44 ಕೋಟಿ) ಸಂಪತ್ತು ಹೊಂದಿದ್ದು ಮೂರನೇ ಸ್ಥಾನದಲ್ಲಿದೆ.

ಇನ್ನು ಬೆಂಗಳೂರಿನಲ್ಲಿ 7,700 ಲಕ್ಷಾಧಿಪತಿಗಳು ಮತ್ತು 8 ಕೋಟ್ಯಧಿಪತಿಗಳು ನೆಲೆಸಿದ್ದಾರೆ. 320 ಬಿಲಿಯನ್‌ ಡಾಲರ್‌ (₹ 21.44 ಕೋಟಿ) ಸಂಪತ್ತು ಹೊಂದಿರುವ ಪ್ರದೇಶವಾಗಿದೆ.

ನಂತರ ಹೈದರಾಬಾದ್‌ 310 ಬಿಲಿಯನ್‌ ಡಾಲರ್‌ (₹20.77 ಕೋಟಿ), ಕೋಲ್ಕತ 290 ಬಿಲಿಯನ್‌ ಡಾಲರ್‌ (₹19.43ಕೋಟಿ), ಪುಣೆ 180 ಬಿಲಿಯನ್‌ ಡಾಲರ್‌(₹12.06ಕೋಟಿ), ಚೆನ್ನೈ 150 ಬಿಲಿಯನ್‌ ಡಾಲರ್‌(₹10.05ಕೋಟಿ), ಗುರುಗ್ರಾಮ 110 ಬಿಲಿಯನ್‌ ಡಾಲರ್‌ (₹7.37ಕೋಟಿ)ಶ್ರೀಮಂತಿಗೆ ತಮ್ಮದಾಗಿಸಿಕೊಂಡಿವೆ.

ಮುಂಬರುವ ಒಂದು ದಶಕದಲ್ಲಿ ಸ್ಥಳೀಯ ವಾಣಿಜ್ಯ ವ್ಯವಹಾರ ಸೇವೆಗಳಲ್ಲಿ ಭಾರತ ಪಾರುಪತ್ಯ ಸಾಧಿಸಲಿದೆ. ಮಾಹಿತಿ ಮತ್ತು ತಂತ್ರಜ್ಞಾನ, ರಿಯಲ್‌ ಎಸ್ಟೇಟ್‌, ಆರೋಗ್ಯ, ಮಾಧ್ಯಮ, ವಿಮೆ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲಿದೆ. ಬೆಂಗಳೂರು, ಹೈದರಾಬಾದ್‌, ಪುಣೆ ನಗರಗಳು ತ್ವರಿತ ಶ್ರೀಮಂತಿಕೆ ಗಳಿಸುವ ನಗರಗಳು ಎಂದು ವರದಿ ತಿಳಿಸಿದೆ.

ವ್ಯಕ್ತಿಯೊಬ್ಬರ ತಲಾ ಆದಾಯ, ಹಣ, ವ್ಯಾಪಾರ, ಸ್ಥಿರಾಸ್ತಿಗಳ ಆಧಾರದ ಮೇಲೆ ನ್ಯೂ ವರ್ಲ್ಡ್‌ ವೆಲ್ತ್‌ ವರದಿ ಸಿದ್ಧಪಡಿಸುತ್ತದೆ. ವಾರ್ಷಿಕ ಆಯಾ ಪ್ರದೇಶದ ಸುಮಾರು 800 ಜನರನ್ನು ಸಮೀಕ್ಷೆಗೆ ಒಳಪಡಿಸಿ ಪಟ್ಟಿ ಸಿದ್ಧಗೊಳಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top