fbpx
ಕಥೆ

ಜಗದೋದ್ಧಾರಕ ಶ್ರೀಕೃಷ್ಣನ ಪರಮಭಕ್ತ ಜಯದೇವ

ಪ್ರಸಿದ್ಧ ಭಕ್ತಕವಿ ಜಯದೇವರ ಜನ್ಮವು ಸುಮಾರು ಐನೂರು ವರ್ಷಗಳ ಹಿಂದೆ ಪೂರ್ವ ಬಂಗಾಲದ ವೀರಭೂಮಿ ಜಿಲ್ಲೆಯ ಕೆಂದುಬಿಲ್ವ ಎಂಬ ಗ್ರಾಮದಲ್ಲಿ ಆಯಿತು. ತಂದೆಯ ಹೆಸರು ಭೋಜದೇವ. ತಾಯಿ ವಾಮಾದೇವಿ ಬಂಗಾಲದ ಬ್ರಾಹ್ಮಣರ ಭಾರದ್ವಾಜ ಗೋತ್ರದ ವಂಶಜರಾಗಿದ್ದರು.

ಜಯದೇವನು ಬಾಲ್ಯದಲ್ಲಿಯೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದನು. ಬಾಲ್ಯದಿಂದಲೇ ಜಯದೇವನು ಭಗವಾನ್ ಶ್ರೀಕೃಷ್ಣನ ಅನನ್ಯ ಭಕ್ತನಾಗಿದ್ದನು. ಜಯದೇವರ ತಂದೆ ತಮ್ಮ ಜೀವಿತ ಕಾಲದಲ್ಲಿ ನಿರಂಜನನೆಂಬುವವನಿಂದ ಸಾಲದ ರೂಪದಲ್ಲಿ ಸ್ವಲ್ಪ ಹಣ ಪಡೆದಿದ್ದರು. ನಿರಂಜನ ಜಯದೇವನ ಕಡೆಯಿಂದ ಅವನ ಮನೆಯನ್ನು ಬರೆಯಿಸಿಕೊಂಡ.

Image result for bhakta jayadeva

ಅಷ್ಟರಲ್ಲಿಯೇ ನಿರಂಜನ ಮನೆಗೆ ಬೆಂಕಿ ಹತ್ತಿ ಉರಿಯಲಾರಂಭಿಸಿದಾಗ, ಜಯದೇವನು ಬೆಂಕಿ ಆರಿಸಲು ಮನೆಯ ಒಳಗಡೆ ಹೋದಾಕ್ಷಣ, ಬೆಂಕಿ ಶಾಂತವಾಯಿತು. ಜಯದೇವರ ಈ ಅಲೌಕಿಕ ಶಕ್ತಿ ಮಹಿಮೆ ಕಂಡು, ನಿರಂಜನನು ಜಯದೇವರ ಕಾಲಿಗೆ ಬಿದ್ದು, ಹೊರಳಾಡಿ ಮಹಾತ್ಮರೆ ನನ್ನದು ತಪ್ಪಾಯಿತು. ಕ್ಷಮಿಸಿರಿ. ನೀವಿಂದು ಇರದಿದ್ದರೆ ನಾನು ಸುಟ್ಟು ಭಸ್ಮವಾಗುತ್ತಿದ್ದೆ.

Image result for bhakta jayadeva

ನಾನು ತಮಗೆ ಮೋಸ ಮಾಡಿ ತಮ್ಮ ಮನೆಯನ್ನು ಕಸಿದುಕೊಂಡೆ. ನನ್ನಿಂದ ಮಹಾ ಅಪರಾಧವಾಯಿತೆಂದು ಜಯದೇವರಲ್ಲಿ ಕ್ಷಮೆಯಾಚಿಸಿದನು. ಈ ಘಟನೆಯಿಂದ ನಿರಂಜನನ ಹೃದಯ ಪರಿಶುದ್ಧವಾಗಿ ಜಯದೇವರ ಜೊತೆ ಅವನೂ ಶ್ರೀ ಹರಿಯ ನಾಮವ ಭಜಿಸತೊಡಗಿದ. ಪ್ರತಿವರ್ಷ ಮಾಘ ಮಾಸದ ಸಂಕ್ರಾಂತಿಯಂದು ಇಂದಿಗೂ ದೊಡ್ಡ ಉತ್ಸವ ನಡೆಯುತ್ತದೆ. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನ ಅಲ್ಲಿ ಸೇರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top