fbpx
ಉದ್ಯೋಗ

ನೀವು ಕೆಲಸದ ಹುಡುಕಾಟದಲ್ಲಿದ್ದರೆ, Resume ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಮಾಹಿತಿ!!

ರೆಸ್ಯೂಮೆ ಮಾಡಬೇಕಾದರೆ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿರಿಸಿ:

ಇದು ಉದ್ಯೋಗ ನೇಮಕಾತಿಯ ಸಮಯ , ಕಾಲೇಜ್ ಗಳಿಗೆ ಕಂಪನೀಗಳು ಬಂದು ಅಭ್ಯರ್ಥಿಗಳನ್ನು ಆರಿಸುವ ಸಮಯ . ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು ನಮ್ಮ ರೆಸ್ಯೂಮೆ . ರೆಸ್ಯೂಮೆ ಅಂದರೆ ನಮ್ಮ ಶಿಕ್ಷಣಿಕ ಹಾಗೂ ಉದ್ಯೋಗಕ್ಕೆ ಸಂಬಂಧ ಪಡುವ ವಿಷ್ಯಗಳ ಸಂಗ್ರಹ. ಅಭ್ಯರ್ಥಿಗಳನ್ನು ಆರಿಸುವ ನಿರ್ಧಾರ ಎಷ್ಟೋ ಬಾರಿ ಅವರ ರೆಸ್ಯೂಮೆ ಯ ಮೇಲೆ ಅವಲಂಬಿತ ವಾಗಿರುತ್ತದೆ . ಎಷ್ಟೋ ಬಾರಿ ಅಭ್ಯರ್ಥಿಗಳಿಗೆ ಏನನ್ನು ಸೇರಿಸಬೇಕು , ಏನನ್ನು ಬಿಡಬೇಕು ಎಂಬುದೇ ತಿಳಿದಿರುವುದಿಲ್ಲ .

ಇಲ್ಲಿದೆ ನೋಡಿ ರೆಸ್ಯೂಮೆ ಯಲ್ಲಿ ಇರಲೇ ಬೇಕಾದ 5 ಅವಶ್ಯ ವಿಷಯಗಳು –

  1. ಆಬ್ಜೆಕ್ಟಿವ್ : ಇದು ಬಹಳ ಸ್ಪಷ್ಟವಾಗಿರಬೇಕು . ಆಬ್ಜೆಕ್ಟಿವ್ ಅಂದರೆ ನಿಮ್ಮ ಉದ್ಯೋಗ ಜೀವನದಿಂದ ನೀವು ಏನನ್ನು ಬಯಸುತ್ತೀರೀ ಎಂದು . ಇದನ್ನು ನೀವು ಹೋಗುತಿರುವ ಕಂಪನೀ ಗೆ ಅನುಗುಣವಾಗಿ ಬದಲಿಸಬಹುದು .
  2. ನಿಮ್ಮನ್ನು ಸಂಪರ್ಕಿಸಲು ಬೇಕಾದ ಮಾಹಿತಿ :ನಿಮ್ಮ ರೆಸ್ಯೂಮೆಯಲ್ಲಿ ನಿಮ್ಮ ಈಗಿನ ವಿಳಾಸ ಹಾಗೂ ಫೋನ್ ನಂ ಇರಬೇಕು . ಈಮೇಲ್ ಐಡಿಯನ್ನು ಸಹ ಸೇರಿಸಬೇಕು . ನೀವು ಸೇರಿಸುವ ಈಮೇಲ್ ಐಡಿ ಬಾಲಿಶವಾಗಿ ಇರಬಾರದು ಬದಲಾಗಿ ವೃತಿಪರವಾಗಿರಬೇಕು.Image result for job india
  1. ನಿಮ್ಮ ಶೈಕ್ಷಣಿಕ ಮಾಹಿತಿ: ನಿಮ್ಮ ಎಲ್ಲ ಪದವಿಯ ಬಗ್ಗೆಗಿನ ಮಾಹಿತಿ ಹಾಗೂ ಅದರಲ್ಲಿ ಪಡೆದಿರುವ ಅಂಕವನ್ನು ಸೇರಿಸಬೇಕು . ಇದು ಬಹಳ ಮುಖ್ಯ
  2. ನಿಮ್ಮ ಮುಂಚಿನ ಉದ್ಯೋಗದ ಬಗ್ಗೆ ಮಾಹಿತಿ: ನೀವು ಈ ಕೆಳಗೆ ಬೇರೆ ಕಡೆ ಕೆಲಸ ಮಾಡಿದ್ದಾರೆ , ಅದರ ಬಗ್ಗೆ , ಅಲ್ಲಿ ಮಾಡಿದ ಕೆಲಸದ ಬಗೆಯ ಬಗ್ಗೆ ಮಾಹಿತಿಯನ್ನು ಸೇರಿಸಬೇಕು. ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವವರು ಇದನ್ನೆಲ್ಲ ಗಮನಿಸುತ್ತಾರೆ
  1. ಕೀ ವರ್ಡ್ ಗಳನ್ನು ಸೇರಿಸಿ : ನೀವು ಕೆಲಸಕ್ಕೆ ಇಂಟರ್‌ವ್ಯೂ ಗೆ ಹೋಗುವ ಕಂಪನೀ ಯ ಉದ್ಯೋಗಾವಕಾಶದ ಅಡ್ವೆರ್ಟಿಸೆಮೆಂಟ್‌ನಲ್ಲಿ ಇರುವ ಕೆಲವೊಂದು ಕೀವರ್ಡ್ಸ್ ಅನ್ನು ನಿಮ್ಮ ರೇಸುಮೆಯಲ್ಲಿ ಸೇರಿಸಿದರೆ ನಿಮ್ಮನ್ನು ಆಯ್ಕೆಮಾಡುವ ಸಾದ್ಯತೆ ಹೆಚ್ಚು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top