fbpx
ಆರೋಗ್ಯ

ಪೌಷ್ಟಿಕ ಆಹಾರ ಸೇವಿಸಿ ಸ್ಟ್ರೆಸ್ ಓಡಿಸಿ

ನೆಲ್ಲಿಕಾಯಿ:

ಆಯುರ್ವೇದದಲ್ಲಿ ನೆಲ್ಲಿಕಾಯಿ ಅತ್ಯಂತ ಹೆಚ್ಚು ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್’ಸಿ’ ಇದ್ದು, ಅದು ಶರೀರವನ್ನು ಬಳಕುವಂತೆ ಮಾಡುತ್ತದೆ. ಒತ್ತಡ ಒಂದು ಲಕ್ಷಣವೆಂದರೆ ಶರೀರದಲ್ಲಿ ರಕ್ತನಾಳಗಳು ಸಂಕುಚಿತವಾದ ಸಮಸ್ಯಗಳು ಹೆಚ್ಚಾಗುತ್ತವೆ, ಒತ್ತಡದಿಂದ ಪಾರಾಗಲು ದಿನವೂ 2 ನೆಲದಲಿಕಾಯಿ ಸೇವಿಸಬೇಕು, ನೆಲ್ಲಿಕಾಯಿಯ ಗುಣಕಾರಿ ಅಂಶಗಳು ಒಣಗಿದರೂ ಹಾಳಾಗುವುದಿಲ್ಲ. ಅದರ ಲಾಭ ಪಡೆದು ಅದನ್ನು ಚೆನ್ನಾಗಿ ಒಣಗಿಸಿ ಸಂರಕ್ಷಿಸಿ. ಇದಲ್ಲದೆ ಸೀಬೆಹಣ್ಣಿನಲ್ಲೂ ವಿಟಮಿನ್ ‘ಸಿ’ಹೇರಳವಾಗಿ ಸಿಗುತ್ತದೆ.

ಓಟ್ ಮೀಲ್:

ಓಟ್ ನಲ್ಲಿ ಸಾಲ್ಯುಬಲ್ ಫೈಬರ್ ಪ್ರಮಾಣದಲ್ಲಿ ಸಿಗುತ್ತದೆ. ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯಕ್ಕೆ ಸಂಬಂಧಿ ಕಾಯಿಲೆಗಳು ಉಂಟಾಗುವುದನ್ನು ಕ್ಷೀಣಗೊಳಿಸುತ್ತದೆ. ಇದರಲ್ಲಿ ಫೈಟೋ ಕೆಮಿಕಲ್ ಗಳೂ ಇರುತ್ತದೆ ಅವು ಪಚನ ಕ್ರಿಯೆಯನ್ನು ಸುಲಲಿತ ಗೊಳಿಸಲು ಸಹಾಯ ಮಾಡುತ್ತವೆ ಹಾಗೂ ಬ್ಲಡ್ ಶುಗರ್ ಲೆವೆಲನ್ನು ನಿಂತ್ರಣದಲ್ಲಿದ್ದರೆ ಒತ್ತಡವೂ ನಿಂತ್ರಣದಲ್ಲಿರುತ್ತದೆ. ದಿನಕ್ಕೆ 3 ದೊಡ್ಡ ಚಮಚ ಓಟ್ಸ್ ತಿನ್ನಿ, ಇದನ್ನು ಮೊಸರು, ಬೇಳೆ, ಸಲಾಡ್ ನಲ್ಲಿ ಸೇರಿಸಿ ತೆಗೆದುಕೊಳ್ಳಬಹುದು. ಬ್ರೇಕ್ ಫಾಸ್ಟ್ ಗೆ ಓಟ್ಸ್ ಮೀಲ್ ತೆಗೆದುಕೊಳ್ಳುವುದು ಒಳ್ಳೆಯದು ಅಥವಾ ಒಂದು ಹೊತ್ತಿನ ರೋಟಿಯಲ್ಲಿ ಗೋಧಿಹಿಟ್ಟು ಅಥವಾ ಮೈದಾ ಹಿಟ್ಟು ಬದಲು ಓಟ್ ಹಿಟ್ಟು ಬಳಸಬಹುವು ಇದು ಉತ್ತಮ.

ಸೇಬು:

ಸೇಬಿನ ಫಾಸ್ಫರಸ್ ಮತ್ತು ಐರನ್ ಹೆಚ್ಚಿನ ಪ್ರಮಾಣದಲ್ಲಿದೆ. ಅದರಿಂದ ಆಕ್ಸಿಡೇಟಿವ್ ಸ್ಟ್ರೆಸ್ ಅಂದರೆ ಒತ್ತಡ ಕಡಿಮಡಯಾಗುತ್ತದೆ. ಇದರೊಂದಿಗೆ ಶರೀರದ ಕೋಶಗಳ ನಿರ್ಮಾಣವಾಗುತ್ತದೆ, ಅವು ಸಾಮಾನ್ಯವಾಗಿ ಒತ್ತಡದ ಕರಗುತ್ತವೆ. ಒತ್ತಡ ನಮ್ಮ ಮುಖದಲ್ಲಿ ಸ್ಪಷ್ಟವಾಗಿ ಕಂಡುಬರುತ್ತವೆ. ಆಗ ಸೇಬಿನ ಸಹಾಯದಿಂದ ಮುಖ ಮತ್ತು ತ್ವಚೆಯ ಕೋಶಗಳ ನಿರ್ಮಾಣವಾಗುತ್ತವೆ. ಅದರಿಂದ ಒತ್ತಡದಿಂದ ಕೂಡಿದ ಭಾವನೆಗಳಿಲ್ಲದ ಮುಖ ಕಂಡುಬರುವುದಿಲ್ಲ. ದಿನವೂ ಒಂದು ಸೇಬು ಅಗತ್ಯವಾಗಿ ತಿನ್ನಿ, ಇದರಿಂದ ನಮ್ಮ ಶರೀರಕ್ಕೆ ಫೈಬರ್ ಕೂಡ ಸೇರುತ್ತದೆ.

ಬಾಳೇ ಹಣ್ಣು:

ಬಾಳೆಹಣ್ಣು ಪೊಟ್ಯಾಶಿಯಂ ಮತ್ತು ಕಾರ್ಬೊಹೈಡ್ರೇಟ್ ನ ಉತ್ತಮ ಸ್ರೋತವಾಗಿದೆ. ಇದು ನಮ್ಮ ಶರೀರದಲ್ಲಿ ಕಾರ್ಬೋಹೈಡ್ರೇಟ್ ಸೆರೊಟಿನ್ ಹೆಸರಿನ ನ್ಯೂರೋಟ್ರ್ಯಾನ್ಸ್ ಮೀಟರ್ ಉತ್ಪತ್ತಿ ಮಾಡುತ್ತದೆ. ಅದು ಮೆದುಳನ್ನು ಶಾಮತವಾಗಿಡುತ್ತದೆ. ಶರೀರದಲ್ಲಿ ಪೊಟ್ಯಾಶಿಯಂ ಕೊರತೆಯಿಂದ ಉಸಿರಾಟದ ತೊಂದರೆ, ಇನ್’ಸೋಮ್ನಿಯಾ, ಸುಸ್ತು ಮತ್ತು ಬ್ಲಡ್ ಶುಗರ್ ಮಟ್ಟ ಕಡಿಮೆಯಾಗುತ್ತದೆ. ಇವೆಲ್ಲ ತೊಂದರೆಗಳು ಒತ್ತಡದಿಂದ ಉಂಟಾಗುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಅದು ಒತ್ತಡದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಕೂಡಲೇ ಕಡಿಮೆಗೊಳಿಸುತ್ತದೆ.

*ಕೆಮೋಮೈಲ್:

1800ರಲ್ಲಿ ಇದನ್ನು ಹಿಸ್ಟೀರಿಯಾ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತಿತ್ತು. ಈಗ ಇದನ್ನು ಉತ್ತೇಜನವನ್ನು ನಿಯಂತ್ರಿಸಲು ಉಪಯೋಗಿಸಲಾಗುತ್ತದೆ, ರಿಸರ್ಚ್ ಪ್ರಕಾರ ಇದರಲ್ಲಿ ಪಚನಕ್ರಿಯೆ ಸುಧಾರಿಸುವ ಮತ್ತು ನರ್ವಸ್ ಸಿಸ್ಟಂಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ಗುಣಗಳೂ ಇವೆ. ಒತ್ತಡ ಉಂಟಾದಾಗ ಹಾಲಿನ ಟೀ ಬದಲು ಕೆಮೊಮೈಲ್ ಟೀ ಕುಡಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top