fbpx
ಆರೋಗ್ಯ

ಶುಂಠಿ ಔಷಧೀಯ ಉಪಯೋಗಗಳು

*ಶುಂಠಿಯ ರಸವನ್ನು ಹಾಲಿನೊಂದಿಗೆ ಸೇವಿಸುವುದರಿಂದ ನೆಗಡಿ ಕಡಿಮಯಾಗುತ್ತದೆ.

*ಶುಂಠಿಯ ರಸವನ್ನು ಮೂಗಿಗೆ ಬಿಡುವುದರಿಂದ ಮೂರ್ಛೆ ರೋಗಕ್ಕೆ ಒಳ್ಳೆಯದು.

*ಶುಂಠಿ ರಸಕ್ಕೆ ಸೈಂಧವ ಲವಣ ಬೆರೆಸಿ ಭೋಜನದ ಮೊದಲು ಸೇವಿಸಿದರೆ ಅಗ್ನಿ ವೃದ್ಧಿಯಾಗಿ ನಾಲಿಗೆಯ ರುಚಿ ಹೆಚ್ಚುತ್ತದೆ.

*ಶುಂಠಿಯ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿಕೊಟ್ಟರೆ ಜ್ವರದಿಂದ ಬಳಲುತ್ತಿರುವವರಿಗೆ ಒಳ್ಳೆಯದು.

*ಶುಂಠಿ ಪುಡಿಗೆ ನಿಂಬೆರಸ ಮತ್ತು ಸೈಂಧವ ಲವಣ ಸೇರಿಸಿ ಸೇವಿಸುವುದರಿಂದ ಅರುಚಿಗೆ ಒಳ್ಳೆಯದು.

*ಶುಂಠಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ, ಕುದಿಸಿ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಬಲಹೀನತೆ ದೂರವಾಗುತ್ತದೆ.

*ಶುಂಠಿಯ ರಸಕ್ಕೆ ಹರಳೆಣ್ಣೆ ಸೇರಿಸಿ ಸೇವಿಸಿದರೆ ಆಮದು ತೊಂದರೆಗೆ ಓಳ್ಳೆಯದು.

*ಹಸಿ ಶುಂಠಿ ರಸಕ್ಕೆ ಚಿಟಿಕೆ ಸೈಂಧವ ಬೆರೆಸಿ, ಬಿಸಿ ಮಾಡಿ ಸೋಸಿ ಕಿವಿಗೆ ನಾಲ್ಕಾರು ಹನಿಗಳನ್ನು ಬಿಡುವುದರಿಂದ ಉದರರೋಗ ಕಡಿಮಡಯಾಗುತ್ತದೆ,

*ಶುಂಠಿಯ ಲೇಪನವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ಕಫ ಮತ್ತು ಆಮದು ಅತಿಸಾರಕ್ಕೆ ಒಳ್ಳೆಯದು.

*40 ಮಿ.ಲೀ. ಶುಂಠಿ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಮಂದಾಗ್ನಿ, ಹಸಿವಿಲ್ಲದಿರುವಿಕೆ, ದಮ್ಮು, ಉದರ ರೋಗಕ್ಕೆ ಒಳ್ಳೆಯದು, ಭೋಜನದ ಮೊದಲು ಸೇವಿಸುವುದರಿಂದ ಆಮ್ಲ, ಅಜೀರ್ಣ, ಮೂಲವ್ಯಾಧಿ, ಮಲಬದ್ಧತೆಗೆ ಒಳ್ಳೆಯದು.

*ಶುಂಠಿ ಪುಡಿ ಮತ್ತು ಅಣಿಲೆಕಾಯಿ ಪುಡಿಯನ್ನು ಬೆಲ್ಲದೊಂದಿಗೆ ಬೆರೆಸಿ ಸೇವಿಸುವುದರಿಂದ ಹಸಿವಿಲ್ಲದಿರುವಿಕೆಗೆ ಒಳ್ಳೆಯದು.

*ಎಚ್ಚರಿಕೆ: ಶುಂಠಿಯ ರಸವನ್ನು ಬೇಸಿಗೆ ಕಾಲದಲ್ಲಿ, ಪಿತ್ತದ ಜ್ವರ, ಚರ್ಮವ್ಯಾಧಿಗಳಲ್ಲಿ ಬಳಲುತ್ತಿರುವವರು ಸೇವಿಸಬಾರದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top