fbpx
ದೇವರು

ಜ್ಯೋತಿಷ್ಯ್ ಶಾಸ್ತ್ರದಲ್ಲಿ ದ್ವಾದಶ ಭಾವಗಳು!!

ದ್ವಾದಶ ಎಂದರೆ 12 ನಮ್ಮ ಜನ್ಮ ಕುಂಡಲಿಯಲ್ಲಿಯೂ 12 ಮನೆಗಳು ಇವೆ ಯಾರ ಜಾತಕದಲ್ಲಿ ಲಗ್ನ ಎಂದು ಗುರುತಿಸಿರುತ್ತಾರೋ ಅದೇ ಪ್ರಥಮ ಭಾವವಾಗುತ್ತದೆ, ಹಾಗೆ ಲಗ್ನವು ಸೇರಿ ಒಟ್ಟು 12 ಭಾವಗಳು ಜನ್ಮ ಕುಂಡಲಿಯಲ್ಲಿ ಇರುತ್ತದೆ. ಲಗ್ನ ಪ್ರಥಮ ಭಾವವಾದರೆ ಅದರ ಮುಂದಿನ ಮನೆ( ಭಾವ)ನೇ ದ್ವಿತೀಯ ಭಾವವಾಗುತ್ತದೆ. ಹೀಗೆ 12 ಭಾವಗಳ ವಿಶ್ಲೇಷಣೆ ಮಾಡಲಾಗಿದೆ.

ಪ್ರಥಮ ಸ್ಥಾನ(ಭಾವ) –
ಪ್ರಥಮ ಸ್ಥಾನಕ್ಕೆ ತನು ಸ್ಥಾನ ಎಂದು ಕರೆಯುತ್ತಾರೆ, ಶರೀರ ಸುಖ, ಆರೋಗ್ಯ, ವರ್ಣ, ಆಚರಣೆ, ಆಯುಷ್ಯ, ಸ್ವಭಾವ, ಗುಣ, ಧರ್ಮ, ಮನದ ಸ್ಥಿರತೆ ಇದು ಪ್ರಥಮ ಭಾವದ ಲಕ್ಷಣ.

ದ್ವಿತೀಯ ಸ್ಥಾನ(ಭಾವ)
ದ್ವಿತೀಯ ಸ್ಥಾನದಿಂದ ಮನುಷ್ಯನ ಸಾಂಪತ್ತಿಕ ಸ್ಥಿತಿ, ದ್ರವ್ಯ, ನೇತ್ರ, ಮುಖ, ವಾಕ್ ಸಿದ್ದಿ, ಸಾಂಪತ್ತಿಕ ಏಳಿಗೆ ಇದು ದ್ವಿತೀಯ ಭಾವದ ಲಕ್ಷಣ.

ಸಹಜ ಸ್ಥಾನ(ಭಾವ)
ತೃತೀಯ ಸ್ಥಾನವನ್ನು ಸಹಜ ಸ್ಥಾನ ಎನ್ನುವರು ಪರಾಕ್ರಮವನ್ನು ಈ ಸ್ಥಾನದಿಂದ ಅರಿಯಬಹುದು, ಹಾಗೂ ಜಾತುಕನ ಸಹೋದರ ಮತ್ತು ಸಹೋದರಿಯ ವಿಚಾರ ಇದು ತೃತೀಯ ಭಾವದ ಲಕ್ಷಣ.

ನಾಲ್ಕನೇ ಸ್ಥಾನ(ಭಾವ)
ನಾಲ್ಕನೇ ಸ್ಥಾನವನ್ನು ಸುಖ ಸ್ಥಾನ ಎಂದು ಕರೆಯುತ್ತಾರೆ. ಮನೆ,ಹೊಲ, ವಾಹನ, ತಾಯಿಯ ಸ್ವಭಾವ, ವಿದ್ಯೆ, ಆಯುಷ್ಯ ವಿಚಾರ ಇದು ನಾಲ್ಕನೇ ಭಾವದ ಲಕ್ಷಣ.

ಐದನೇ ಸ್ಥಾನ(ಭಾವ)
ಐದನೇ ಸ್ಥಾನವನ್ನು ಸುತಸ್ಥಾನವೆಂದು ಕರೆಯುತ್ತಾರೆ. ಸಂತತಿಯ ಸೌಖ್ಯದ ಬಗ್ಗೆ, ವಿದ್ಯೆ, ಬುದ್ದಿ, ಆತನ ಧೋರಣೆ, ಚಾತುರ್ಯ ವಿಚಾರ ಇದು ಐದನೇ ಭಾವದ ಲಕ್ಷಣ.

ಆರನೆಯ ಸ್ಥಾನ(ಭಾವ)
ಆರನೆಯ ಸ್ಥಾನವನ್ನು ರಿಪು ಸ್ಥಾನವೆಂದು ಕರೆಯುತ್ತಾರೆ. ಜಾತಕನಿಗೆ ಬಂದೊದಗುವ ನಾನಾ ಬಗೆಯ ರೋಗಗಳು, ಶತೃಗಳಿಂದ ಉಂಟಾಗುವ
ಪೀಡೆ, ಭಯ, ಸಂಕಟ, ಕಷ್ಟ, ಅಪಮಾನ, ಧಕ್ಕೆ, ವಿಚಾರ ಇದು ಆರನೆ ಭಾವದ ಲಕ್ಷಣ.

ಏಳನೇ ಸ್ಥಾನ (ಭಾವ)
ಏಳನೇ ಸ್ಥಾನವನ್ನು ಜಾಯಾಸ್ಥಾನ ಎಂದು ಕರೆಯುತ್ತಾರೆ. ವಿವಾಹ ಮತ್ತು ಸ್ರ್ರೀ ಸೌಖ್ಯ, ಪತಿ ಪತ್ನಿರಲ್ಲಿ ಪ್ರೇಮ, ವ್ಯಾಪಾರ, ಹೆಂಡತಿಯ ಸ್ವಭಾವ, ರೂಪ, ಲಾವಣ್ಯ, ವರ್ತನೆ, ಅಭಿಮಾನ, ಗರ್ವ, ಪ್ರವಾಸ, ಗರ್ಭಾಶಯ, ವಿಚಾರ ಇದು ಏಳನೇ ಭಾವದ ಲಕ್ಷಣ.

ಎಂಟನೇ ಸ್ಥಾನ(ಭಾವ)
ಎಂಟನೇ ಸ್ಥಾನವನ್ನು ಮೃತ್ಯುಸ್ಥಾನ ಎಂದು ಕರೆಯುತ್ತಾರೆ. ಮರಣ ಸ್ಥತಿ, ಆಕಸ್ಮಿಕವಾಗಿ ದ್ರವ್ಯವ್ಯಾಪ್ತಿ, ವಿಷಜಂತುಗಳ ಭಯ, ಶತೃ, ಅಪಮೃತ್ಯು,ಆತ್ಮಹತ್ಯೆ, ಅಪಘಾತ,ವಿಚಾರ ಇದು ಎಂಟನೇ ಭಾವದ ಲಕ್ಷಣ.

ಒಂಭತ್ತನೇ ಸ್ಥಾನ (ಭಾವ)
ಒಂಭತ್ತನೇ ಸ್ಥಾನವನ್ನು ಧರ್ಮಸ್ಥಾನ
ಎಂದು ಕರೆಯುತ್ತಾರೆ‌. ತೀರ್ಥಯಾತ್ರೆ, ಪ್ರವಾಸ, ಭಾಗ್ಯೋದಯ, ಕರ್ಮಫಲ, ಧರ್ಮಾಚರಣೆ, ದೇವರ ದರ್ಶನ ಸೇವೆ
ವಿಚಾರ ಇದು ಒಂಭತ್ತನೇ ಭಾವದ ಲಕ್ಷಣ.

ಹತ್ತನೇ ಸ್ಥಾನ (ಭಾವ)
ಹತ್ತನೇ ಸ್ಥಾನವನ್ನು ಕರ್ಮಸ್ಥಾನವೆಂದು
ಕರೆಯುತ್ತಾರೆ. ಪಿತೃಸುಖ, ತಂದೆಯ ಸ್ವಭಾವ, ಗುಣ, ರೂಪ, ಉದ್ಯೋಗ, ಸಾಧನೆ, ಕೀರ್ತಿ,ವಿಚಾರ ಇದು ಹತ್ತನೇ ಭಾವದ ಲಕ್ಷಣ.

ಹನ್ನೋಂದನೇ ಸ್ಥಾನ (ಭಾವ)
ಹನ್ನೋಂದನೇ ಸ್ಥಾನವನ್ನು ಲಾಭ ಸ್ಥಾನ ಎಂದು ಕರೆಯುತ್ತಾರೆ. ದ್ರವ್ಯ, ಸಂಪಾದನೆ, ಗೆಳೆಯರ ಸುಖ, ಆಪ್ತ, ಪರಿವಾರದವರ ಸುಖ, ವಿಚಾರ ಇದು ಹನ್ನೋಂದನೇ ಭಾವದ ಲಕ್ಷಣ.

ಹನ್ನೆರಡನೇ ಸ್ಥಾನ (ಭಾವ)
ಹನ್ನೆರಡನೇ ಸ್ಥಾನವನ್ನು ವ್ಯಯಸ್ಥಾನ ಎಂದು ಕರೆಯುತ್ತಾರೆ. ಶತೃ ಭಯ, ಮಾನಹಾನಿ, ಕ್ಲೇಶ, ಶಾರೀರಿಕ ಆಪತ್ತು, ಕಷ್ಟಮಯ ಜೀವನ, ಅಪಘಾತ, ಬಂಧನ, ಗೆಳೆಯನ ಸಲುವಾಗಿ ದ್ರವ್ಯನಾಶ ವಿಚಾರ ಇದು ಹನ್ನೆರಡನೇ ಭಾವದ ಲಕ್ಷಣ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top