fbpx
ಆರೋಗ್ಯ

ತಣ್ಣೀರು ಸ್ನಾನದಿಂದ ಯಂಗಾದ ತ್ವಚೆ ನಿಮ್ಮದಾಗಿಸಿಕೊಳ್ಳಿ

ಆರೋಗ್ಯದ ಮೇಲಾಗುವ ಲಾಭಗಳು

*ಬೇಸಿಗೆ ಕಾಲದಲ್ಲಿ ಬಿಸಿ ನೀರಿಗಿಂತ ತಣ್ಣೀರು ಸ್ನಾನ ಮಾಡಿದಾಗ ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಆರಾಮ ಅನಿಸುತ್ತದೆ. ತುಂಬಾ ಸುಸ್ತಾದಾಗ ತಣ್ಣೀರು ಸ್ನಾನ ಮಾಡಿದರೆ ಸುಸ್ತು ಕಡಿಮೆಯಾಗುತ್ತದೆ.

*ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.

*ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.

*ವಿಪರೀತಿ ಬೆವರುತ್ತಿದ್ದರೆ ಬೆವರನ್ನು ತಡೆಗಟ್ಟಲು ಕ್ರೀಮ್ ಹೆಚ್ಚುವ ಬದಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು ಇದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ.

*ತಣ್ಣೀರು ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇರುತ್ತದೆ.

*ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ಬಿಳಿ ರಕ್ತಕಣಗಳು ಹೆಚ್ಚು ಕಾರ್ಯತತ್ಪರವಾಗಿ ವೈರಸ್ ವಿರುದ್ಧ ಹೋರಾಡುತ್ತದೆ.

*ತಣ್ನೀರು ಸ್ನಾನದಿಂದ ದೇಹದ ಒಳಗೆ ತಂಪು ಉಂಟಾಗಿ ಸಾಮಾನ್ಯ ಶೀತದಿಂದ ನಿಮಗೆ ತ್ವರಿತ ಉಪಶಮ ದೊರೆಯುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

*ತಣ್ಣೀರು ದೇಹ ಅಧಿಕ ಕೊಬ್ಬನ್ನು ನಿವಾರಿಸಿ ನಿಮಗೆ ಸುಂದರ ಕಾಯವನ್ನು ನೀತ್ತದೆ ಮತ್ತು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

*ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ಶ್ವಾಸಕೋಶವನ್ನು ತೆರೆದು ಒಂದು ವಿಧದ ವ್ಯಾಯಮವನ್ನು ನೀಡುತ್ತದೆ.

*ತಣ್ಣೀರು ಸ್ನಾನ ಮಾಡುವುದರಿಂದ ಮನಸ್ಸು ಪ್ರಪುಲ್ಲವಾಗುತ್ತದೆ. ಮತ್ತು ಒತ್ತಡ ನಿವಾರಣೆಯಾಗುತ್ತದೆ. ಹಾಗೂ ದೇಹದ ಚಟುವಟಿಕೆಯಿಂದ ಕೂಡಿರುತ್ತದೆ.

*ರಕ್ತ ಪರಿಚಲನೆಯ ತೊಂದರೆ ಇರುವವರು ನಿತ್ಯವು ತಣ್ಣೀರು ಸ್ನಾನ ಮಾಡುವುದು ಒಳ್ಳೆದು, ಆರ್ಗನ್ ಗಳು ಮತ್ತು ತ್ವಚೆಯ ನಡುವೆ ಇರುವ ರಕ್ತ ಪರಿಚಲನೆ ಸಮಸ್ಯೆಯನ್ನು ತಣ್ಣೀರು ಸ್ನಾನ ಮಾಡುವುದರಿಂದ ದೂರಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top