fbpx
ದೇವರು

ದ್ವಾದಶ ಜ್ಯೋತಿರ್ಲಿಂಗ ದರ್ಶನದ ಫಲಗಳು

ಹನ್ನೆರಡು ಜ್ಯೋತಿರ್ಲಿಂಗಗಳನ್ನು ನೋಡಿದರೂ ಸ್ಫರ್ಶಿಸಿದರೂ ಪೂಜಿಸಿದರೂ ಮಾನವರು ಇಹಪರ ಸುಖಗಳನ್ನು ಹೊಂದುತ್ತಾರೆ.

*ಸೌರಾಷ್ಟ್ರ ದೇಶದಲ್ಲಿ ಚಂದ್ರ ನಿರ್ಮಿತವಾಗಿ ಅವನ ಹೆರಿನಿಂದ ಪ್ರಕಾಶಿಸುತ್ತಿರುವ ಕುಂಡದಲ್ಲಿ ಸ್ನಾನ ಮಾಡಿ, ಅಲ್ಲಿಯ ಸೋಮನಾಥ ಜ್ಯೋತಿರ್ಲಿಂಗವನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸುವವರ ಕಷ್ಟ. ಅಪಸ್ಮಾರ, ಕ್ಷಯ ಮೊದಲಾದ ರೋಗದಿಂದ ಮುಕ್ತರಾಗಿ ಆಯುರಾರೋಗ್ಯದಿಂದ ಭೋಗ ಭಾಗ್ಯದಿಂದ ಬದುಕುತ್ತಾರೆ.

*ಆಂಧ್ರಪ್ರದೇಶದ ಶ್ರೀಶೈಲದ ಮಲ್ಲಿಕಾರ್ಜುನನೊಂದಿಗೆ ನೆಲೆಸಿದ ಶಿವನ ಜ್ಯೋತಿರ್ಲಿಂಗದ ಆರಾಧನೆಯಿಂದ ಸರ್ವ ವಿಧವಾದ ದರಿದ್ರಗಳು ನಾಶವಾಗಿ, ಸತ್, ಶುಭಗಳುಂಟಾಗಿ, ಆನಂತರ ಮೋಕ್ಷವು ದೊರೆಯುತ್ತದೆ.

*ಉಜ್ಜಯನಿಯ “ಮಹಾಕಾಲ”ನಾಮದ ಜ್ಯೋತಿರ್ಲಿಂಗದಿಂದ ನಿರ್ಭಯತೆ, ವಿದ್ಯಾಭ್ಯಾಸ, ಭೋಗ ಭಾಗ್ಯಗಳು ಲಭಿಸಿ ಎಲ್ಲದರಲ್ಲೂ ಯಶಸ್ಸು ದೊರೆಯುತ್ತದೆ,

*ಅಮರೇಶ್ವರ ಪರಮೇಶ್ವರ, ಓಂಕಾರರೇಶ್ವರಾದಿ ಸಾರ್ಥಕ ನಾಮಧೇಯಗಳಿಂದ ಓಂಕಾರೇಶ್ವರದಲ್ಲಿ ನೆಲೆಸಿರುವ ಶಿವನ ಜ್ಯೋತಿರ್ಲಿಂಗವನ್ನು ಪೂಜಿಸುವುದರಿಂದ ಇಹಪರಗಳೆರಡರಲ್ಲಿಯೂ ಕೃತಾರ್ಥರಾಗುತ್ತಾರೆ.

*ಶ್ರೀಹರಿ ಎರಡು ಅಂಶಗಳಾದ ನರ ನಾರಾಣಯರ ಪ್ರಾರ್ಥನೆಯೊಂದಿಗೆ ಆವಿರ್ಭವಿಸಿದ ಜ್ಯೋತಿರ್ಲಿಂಗ ಹಿಮ ಪರ್ವತದ ಮೇಲಿದೆ. ಕೇದಾರನೆಶ್ವರನೆಂದು ಖ್ಯಾತಿ ಹೊಂದಿರುವ ಇಲ್ಲಿ ಲಿಂಗಾಧರನೆ ಮಾಡಿದರೆ ಸರ್ವ ಅಭಿಷ್ಟೆಯು ನೆರವೇರುತ್ತದೆ. ಇಲ್ಲಿಯ ರೇತಃ ಕುಂಡಲದಲ್ಲಿಯ ನೀರಿನಲ್ಲಿ ಮೂರು ಸಲ ಆಚಮನ ಮಾಡಿದರೆ ಮುಕ್ತಿ ಗಳಿಸಬಹುದೆಂಬುದು ಮುನಿಗಳ ನಂಬಿಕೆಯಾಗಿದೆ.

*ಢಾಕಿನಿ ಎಂಬ ಪ್ರದೇಶದಲ್ಲಿರುವ ಜ್ಯೋತಿರ್ಲಿಂಗದ ಹೆಸರು ಭೀಮ ಶಂಕರ ಲಿಂಗ, ಪ್ರಾಣಾವಸಾನನಾದ ಭಕ್ತನ ರಕ್ಷಣೆಗಾಗಿ ನೆಲೆಸಿದ ಈ ಲಿಂಗರಾಧನೆಯಿಂದ ಎಲ್ಲ ವಿಧವಾದ ಭಯಗಳು ನಾಶವಾಗಿ, ಶತ್ರು ಜಯ ಉಂಟಾಗುತ್ತದೆ, ಅಕಾಲ ಮೃತ್ಯುವು ಸಹ ತಪ್ಪುತ್ತದೆ.

*ಸರ್ಪ ಪ್ರಪಂಚದ ಕೈಗಳಿಂದ ಸೇವೆ ಮಾಡಲ್ಪಡುತ್ತಿರುವ ವಿಶ್ವೇಶ್ವರ ಲಿಂಗವು ಕಾಶಿಯಲ್ಲಿದೆ. ಈ ಪುಣ್ಯ ಕ್ಷೇತ್ರದಲ್ಲಿ ದರ್ಶನ ಮಾತ್ರದಿಂದಲೇ ಸಮಸ್ತ ಕರ್ಮಬಂಧಗಳಿಂದ ಮುಕ್ತಿ ದೊರೆಯುತ್ತದೆ. ಇಲ್ಲಿ ಕೆಲವು ದಿನಗಳ ಕಾಲ ವಾಸಿಸಿದರೂ ಅಥವಾ ಇಲ್ಲಿಯೇ ಕಾಲವಾಗಿ ದೇಹ ವ್ಯಸನವಾದರೂ ಮೋಕ್ಷವನ್ನೇ ಪಡೆಯುತ್ತಾರೆ.

*ಮಹಾರಾಷ್ಟ್ರದ ನಾಸಿಕದಲ್ಲಿರುವ ಜ್ಯೋತಿರ್ಲಿಂಗ ವೈದ್ಯನಾಥ ಲಿಂಗ. ಈ ಲಿಗಾರಾಧನೆಯಿಂದ ಭುಕ್ತಿ, ಮುಕ್ತಿಗಳಷ್ಟೇ ಅಲ್ಲದೆ ಅನೇಕ ಬಗೆಯ ರೋಗಗಳನ್ನು ಪರಿಹಾರವಾಗುತ್ತದೆಯೆಂಬ ನಂಬಿಕೆಯಿದೆ.

*ನಾಗೇಶ್ವರ ಜ್ಯೋತಿರ್ಲಿಂಗ ದರ್ಶನದಿಂದ ಸಮಸ್ತ ಭವಭಯಗಳಲ್ಲದೆ, ಮಹಾಪಾತಕಗಳು ಉಪಪಾತಕಗಳು ನಾಶವಾಗುತ್ತವೆ.

*ಶ್ರೀರಾಮನ ಕೋರಿಕೆ ಮೇರೆಗೆ ರಾಮೇಶ್ವರದಲ್ಲಿ ಜ್ಯೋತಿರ್ಲಿಂಗವಾಗಿ ನೆಲೆಸಿದ ಶಿವನು ರಾಮೇಶ್ವರನೆಂಬ ಹೆಸರಿನಿಂದ ಶೋಭಿಸುತ್ತಾನೆ. ಕಾಶಿಯಿಂದ ಗಂಗಾ ಜಲ ತಂದು ಇಲ್ಲಿ ಜಲಾಭಿಷೇಕ ಮಾಡಿದವರು ಮುಕ್ತಿಯನ್ನು ಪಡೆಯವರೆಂಬ ನಂಬಿಕೆಯಿದೆ.

*ಘೃಷ್ಣೇಶ್ವರ ಶಿವಾಲಯದ ಪೂಜೆಯಲ್ಲಿ ಭಕ್ತರು ರಕ್ಷಣೆಗಾಗಿ ಉದ್ಭವಿಸಿದ ಈ ಸ್ವಯಂಭು ಲಿಗವು ಭಕ್ತರಿಗೆ ಇಹಪರ ಮುಕ್ತಿಯನ್ನು ನೀಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top