fbpx
ಆರೋಗ್ಯ

ಸಾಸಿವೆ ಕೇವಲ ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು!!

ಸಾಸಿವೆಯ ಆರೋಗ್ಯಕಾರಿ ಅಂಶಗಳು

ಸುಂದರ ತ್ವಚೆಗಾಗಿ ಸಾಸಿವೆ ಪ್ಯಾಕ್ :

ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುತ್ತಾ ಇದ್ದರು,
ಕಲೆಗಳನ್ನು ನಿವಾರಿಸಲು ಸಾಸಿವೆ ಎಣ್ಣೆಯನ್ನು ಕಡಲೆ ಹಿಟ್ಟು, ಮೊಸರು ಮತ್ತು ಲಿಂಬೆರಸದೊಂದಿಗೆ ಸೇರಿಸಿಕೊಂಡು ದೇಹದ ಪ್ಯಾಕ್ ಆಗಿ ಬಳಸಿಕೊಳ್ಳಬಹುದು.

ಹಲ್ಲಿನ ಸಮಸ್ಯೆಗಳಿಗೆ:

ಸಾಸಿವೆಯೆಣ್ಣೆಯನ್ನು 5 ನಿಮಿಷ ಬಾಯಲ್ಲಿ ಮುಕ್ಕಳಿಸೋದ್ರಿಂದ ಹಲ್ಲು ಗಟ್ಟಿಯಾಗಿ , ಹುಳುಕು ಕಡಿಮೆಯಾಗುತ್ತದೆ, ಬಾಯಿಯ ವಾಸನೆ ಕಡಿಮೆಯಾಗುತ್ತದೆ.

ತಲೆನೋವಿಗೆ ಪರಿಹಾರ:

ಸಾಸಿವೆ ಪೇಸ್ಟ್ ತಲೆಗೆ ಪಟ್ಟು ಹಾಕಿ 10 ನಿಮಿಷದ ನಂತರ ತೊಳೆಯಬೇಕು

ಚರ್ಮ ಒಡೆಯುವುದಕ್ಕೆ :

ಚಳಿಗಾಲದಲ್ಲಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ, ಚರ್ಮವು ನೆರಿಗೆ ಬಿದ್ದು ವಯಸ್ಸಾದವರಂತೆ ಕಾಣುತ್ತದೆ ಸಾಸಿವೆ ಎಣ್ಣೆ ಹಚ್ಚಿ 10 ನಿಮಿಷ ಬಿಟ್ಟು ಸ್ನಾನ ಮಾಡಿದರೆ ಚರ್ಮ ಕಾಂತಿಯುತವಾಗುತ್ತದೆ.

ಕೂದಲು ಉದರುವುದಕ್ಕೆ:
ಚಳಿಗಾಲದಲ್ಲಿ ಕೂದಲು ಸಿಕ್ಕಾಪಟ್ಟೆ ಡ್ರೈ ಆಗಿ ಉದುರಲು ಶುರುಮಾಡುತ್ತದೆ ಸಾಸಿವೆ ಎಣ್ಣೆ ಮಸಾಜಿನಿಂದ ಇದನ್ನು ತಡೆಯಬಹುದು.

ಹೃದಯ ಸಂಬಂಧಿ ಕಾಯಿಲೆ:
ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಣಗಳನ್ನು ನಿವಾರಿಸಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರ ಪ್ರಮಾಣದಲ್ಲಿರಿಸುವ ಮೂಲಕ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳದಂತೆ ಸಹಕರಿಸುತ್ತದೆ
ತೂಕ ಕಡಿಮೆ ಮಾಡುವ ಗುಣಗಳು ಈ ಎಣ್ಣೆಯಲ್ಲಿವೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ:
ಜೀರ್ಣಕ್ರಿಯೆಯನ್ನು ಚುರುಕಾಗಿಸುವುದರಿಂದ ಕರುಳುಗಳು ಆಹಾರದಿಂದ ಪೋಷಕಾಂಶಗಳು ಸುಲಭವಾಗಿ ಹೀರಲು ಸಾಧ್ಯವಾಗುತ್ತದೆ.

ರೋಗಾಣುಗಳ ವಿರುದ್ಧ ಹೋರಾಡುತ್ತದೆ:

ಶೀತ, ಕೆಮ್ಮು, ಕಫ, ತಲೆನೋವು, ತಲೆಸಿಡಿತ ಇಂತಹ ಕಾಯಿಲೆಗಳಿಗೆ ಮದ್ದು ,ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ.

ನೋವು ನಿವಾರಣೆಗೆ:
ನೋವಿರುವ ಸ್ಥಳದಲ್ಲಿ ನಯವಾಗಿ ದಿನಕ್ಕೆ ಎರಡು ಬಾರಿ ಮಸಾಜ್ ಮಾಡಬೇಕು,ಸಂಧಿನೋವು, ಆರ್ಥ್ರೈಟಿಸ್, ಸಂಧಿವಾತ ಮುಂತಾದ ಖಾಯಿಲೆಗೆ ರಾಮಬಾಣ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top