fbpx
ಸಮಾಚಾರ

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಿಳಾ ಪರ ಆಲೋಚನೆ

* ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡನು ಮನೆಯವರು ಮಹಿಳೆಯನ್ನು ಶೋಷಣೆ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಲೋಚನೆ ಹೀಗಿದೆ. “ಗಂಡನು ಹೆಣ್ಣಿಗೆ ಧಾರ್ಮಿಕ ಮನುಷ್ಮ್ರತಿ ವಿಧಿ ಎಂದೂ ಕಾಣುವು ದಾಗಲಿಲ್ಲ. ಬದಲಾಗಿ ಹೆಣ್ಣನ್ನು ಗಂಡಿಗೆ ಕಟ್ಟಿ ಗಂಡನ್ನು ತಡೆಗಟ್ಟುವುದಿಲ್ಲ. ಬದಲಾಗಿ ತನಗಿಷ್ಟವಿಲ್ಲವಾದರೆ ಅವನು ಹೆಂಡತಿಯನ್ನು ಬಿಡುವುದಕ್ಕೆ ಮಾತ್ರವಲ್ಲದೆ ಅವಳನ್ನು ಮಾರಾಟ ಮಾಡುವುದಕ್ಕೆ ಮನು ಅನುಮತಿ ನೀಡುತ್ತಾನೆ.

* ಅದಾಗಿ ಮನುವಿನ ಮೂಲೋದ್ದೇಶವೇನೆಂದರೆ ಮಹಿಳೆ ಹೆಂಡತಿಯಾಗಿರಬೇಕೇ ಹೊರತು ಸಮಾನಳಾಗಿರಲು ಅಗತ್ಯವಿಲ್ಲವೆನ್ನುತ್ತಾರೆ. ಡಾ.ಬಿ.ಆರ್.ಅಂಬೇಡ್ಕರವರು ಮಹಿಳಾ ಮೀಸಲಾತಿಯ ಪರವಾಗಿ, ಅವಳ ಉಜ್ವಲ ಭವಿಷ್ಯವನ್ನು ಕುರಿತು ಸಾಂವಿಧಾನಿಕವಾಗಿ ಚಿಂತಿಸಿದರು. ಅವರು ಚುನಾಯಿತ ಸದಸ್ಯರಾಗಿ ಪಾರ್ಲಿಮೆಂಟಿನಲ್ಲಿ ಹಿಂದು ಕೋಡ್ ಬಿಲ್ ನ್ನು ಮಂಡಿಸುವುದರ ಮೂಲಕ, ಸ್ವತಂತ್ರ ಭಾರತದ ನಾರಿಯ ಬಂಧನವನ್ನು ಮುಕ್ತ ಮಾಡಲು ಪ್ರಯತ್ನಿಸಿದರು.

*   ಮಹಿಳಾ ಪರ ವಿಚಾರಗಳನ್ನು ಮಂಡಿಸುವುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಲವಾರ ಆಧಾರಗಳಿದ್ದವು. ಮಹಿಳಾ ಮೀಸಲಾತಿಯ ಕುರಿತು ಆಕೆಯ ಆಸ್ತಿ ಹಕ್ಕಿನ ಕುರಿತು ಗೌತಮ ಬುದ್ಧ, ಜ್ಯೋತಿಬಾಫುಲೆ, ಮುಂತಾದ ಮಹಾತ್ಮರು ಸಂದರ್ಭಾನುಸಾರವಾಗಿ ಮಾತಾಡಿದ್ದರು.

* ಜೊತೆಗೆ ಬೇರೆ ಬೇರೆ ದೇಶಗಳಲ್ಲಿಯ ಸಮಾಜ ಮುಖಿ ಮಹಿಳಾ ಮುಖಿ ಚಿಂತನೆಗಳನ್ನು ಅಧ್ಯಯನ ಮಾಡಿದ ಡಾ.ಬಾಬಾಸಾಹೇಬರು ಭಾರತದ ಮಹಿಳೆಯ ಹಕ್ಕು ಬಾಧ್ಯತೆಗಳನ್ನು ಕುರಿತು ಮಹತ್ವಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಅವರು ಸಂವಿಧಾನದಲ್ಲಿ ಬರೆದಿಟ್ಟ ಮಹಿಳಾ ಪರ ಚಿಂತೆಗಳು ಪ್ರಸ್ತುತ ಸಂದರ್ಭದಲ್ಲಿ ಕ್ರಮೇಣ ಜಾರಿಗೆ ಬರುತ್ತಿರುವುದು ಭಾರತೀಯರು ಸಂವಿಧಾನಕ್ಕೆ ಕೊಟ್ಟಿರುವ ಗೌರವವೆಂದೇ ತಿಳಿದುಕೊಳ್ಳಬೇಕಾಗುತ್ತದೆ.

*   1986 ರಲ್ಲಿ ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಾಗ, ಸಂವಿಧಾನದ 81ನೇ ತಿದ್ದುಪಡಿ ಮಸೂದೆಯ ಶಾಸನಸಭೆ ಮತ್ತು ಲೋಕಸಭೆಗೆ ಶೇ.25 ಮಹಿಳಾ ಮೀಸಲಾತಿ ಕೊಡಬೇಕೆಂಬ ವಿಷಯವನ್ನು ರೂಪಿಸಲಾಯಿತು. ಮಹಿಳಾ ಮೀಸಲಾತಿ ವಿಧೇಯಕ ನಾಲ್ಕು ಅಂಶಗಳನ್ನು ಒಳಗೊಂಡಿದೆ.

1) ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಲೋಕ ಸಭೆ, ವಿಧಾನ ಸಭೆಗಳ ಒಟ್ಟು ಸ್ಥಾನಗಳ ಮೂರನೆಯ ಒಂದು ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡುವುದು.

2)   ಈ ಮೀಸಲಾತಿಯು ಅನಿರ್ದಿಷ್ಟಾವಧಿ ತನಕ ವಿಸ್ತರಿಸುತ್ತದೆ.

3) ಮಹಿಳಾ ಮೀಸಲು ಕ್ಷೇತ್ರಗಳನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಮೀಸಲಾತಿ ಕ್ಷೇತ್ರವನ್ನು ಬದಲಾಯಿಸಲಾಗುತ್ತದೆ.

4)ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗಾಗಲೇ ಸಂವಿಧಾನದಲ್ಲಿ ಕಲ್ಪಿಸಿರುವ ರಾಜಕೀಯ ಮೀಸಲಾತಿಯಲ್ಲಿ ಮೂರನೆಯ ಒಂದು ಸ್ಥಾನವನ್ನು ಆ ಜಾತಿ, ಪಂಗಡಗಳ ಮಹಿಳೆಯರಿಗೆ ಮೀಸಲಿಡಬೇಕು.

 

ಮಹಿಳಾ ಮೀಸಲಾತಿ ಕುರಿತು ಸ್ಪಷ್ಟವಾಗಿ ಸಂವಿಧಾನದಲ್ಲಿಯೇ ಹೇಳುವುದರಿಂದ ನಾವು ರಾಜಕೀಯ ಮತ್ತು ಚುನಾವಣೆಯ ಸಂದರ್ಭದಲ್ಲಿ ಈ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಕಾರ್ಯಾಚರಣೆಗೆ ತರಬೇಕಾಗುತ್ತದೆ. ಹೀಗಾದಾಗ ಮಾತ್ರ ಮಹಿಳಾ ಮೀಸಲಾತಿ ಯಶಸ್ವಿಯಾಗುತ್ತದೆ. ಇಲ್ಲದಿದ್ದರೆ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top