fbpx
ಸಮಾಚಾರ

ಭಾರತದ ಮೊದಲ ಮಹಿಳಾ ಮಣಿಯರ ಸಾಧನೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಮಾರ್ಚ್ ೮ ರಂದು ಆಚರಿಸಲ್ಪಡುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಬಂಡವಾಳಶಾಹಿ ಶೋಷಣೆಯ ವಿರುದ್ಧ ಮಹಿಳಾ ವಿಮೋಚನೆಗಾಗಿ ನಡೆದ ಸಮಾಜವಾದಿ ಹೋರಾಟದ ಪರಂಪರೆ ಎನ್ನುವುದನ್ನು ಮರೆಯ ಬಾರದು.

ಮದರ್‌ ತೆರೇಸಾ

ಸಮಾಜ ಸೇವೆಗೆ ಮತ್ತೂಂದು ಹೆಸರು. ದೀನರು, ಬಡ ಮಕ್ಕಳು, ರೋಗಿಗಳ ಆರೈಕೆಯಲ್ಲಿ ವಿಶ್ವಕ್ಕೇ ಹೆಸರಾದವರು. ದೇಶದಲ್ಲಿ ಹಲವು ಮಿಷನರಿಗಳ ಮೂಲಕ ಸಮಾಜ ಸೇವಾ ಕೈಂಕರ್ಯವನ್ನು ನಡೆಸಿದರು. ಅವರ ನಿಧನಾ ನಂತರವೂ ತೆರೇಸಾ ಹೆಸರಲ್ಲಿ ಈ ಕೆಲಸಗಳು ಮುಂದುವರಿಯುತ್ತಿವೆ.

ಇಂದಿರಾ ಗಾಂಧಿ

ದೇಶದ ಮೊದಲ ಮಹಿಳಾ ಪ್ರಧಾನಿ. ಅತಿ ಪ್ರಭಾವಿಯೂ ಹೌದು. ಸುಮಾರು 20 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದವರು. ಬಾಂಗ್ಲಾ ವಿಮೋಚನೆಯಲ್ಲಿ ದಿಟ್ಟತನ ಪ್ರದರ್ಶಿಸಿದವರು. ಧೈರ್ಯ, ಛಲಕ್ಕೆ ಇಂದಿರಾ ಹೆಸರಾಗಿದ್ದಾರೆ. ಬಿಬಿಸಿಯ ಶತಮಾನದ ಮಹಿಳೆ ಎಂಬ ಬಿರುದಿಗೆ ಪಾತ್ರವಾಗಿದ್ದರು.

ಕಿರಣ್‌ ಬೇಡಿ

ಭಾರತದ ಮೊತ್ತ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ. ದೇಶದ ಹಲವಾರು ಮಹಿಳಾ ಅಧಿಕಾರಿಗಳಿಗೆ ಸ್ಫೂರ್ತಿಯಾದವರು. ತಿಹಾರ್‌ ಜೈಲಿನ ಜೈಲಧಿಕಾರಿಯಾಗಿ ಹಲವು ಬದಲಾವಣೆಗೆ ಕಾರಣವಾದವರು. ದಿಟ್ಟ ಪೊಲೀಸ್‌ ಅಧಿಕಾರಿ ಎಂದೇ ಪ್ರಸಿದ್ಧರಾದ ಬೇಡಿ, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಭಾಗಿಯಾಗಿದ್ದರು.

ಪ್ರತಿಭಾ ಪಾಟೀಲ್‌

ದೇಶದ 12ನೇ ರಾಷ್ಟ್ರಪತಿಯಾಗಿ 2007ರಿಂದ 2012ರವರೆಗೆ ಹುದ್ದೆಯಲ್ಲಿದ್ದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಆಡಳಿತ ವೇಳೆ ಹಲವು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದರು. ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2004ರಿಂದ 2007ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿಯೂ ಇದ್ದರು.

ಮೇರಿ ಕೋಮ್‌

ಅಪ್ರತಿಮ ಬಾಕ್ಸರ್‌. ಓರ್ವ ತಾಯಿಯಾಗಿ ಐದು ಬಾರಿ ವಿಶ್ವ ಅಮೆಚೂÂರ್‌ ಬಾಕ್ಸಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಪದಕ ಮುಡಿಗೇರಿಸಿಕೊಂಡವರು. 2012 ಲಂಡನ್‌ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟವರು. ದೇಶದ ಮಹಿಳಾ ಕ್ರೀಡಾಪಟುಗಳಿಗೆ ಮಣಿಪುರದ ಮೇರಿ ಕೋಮ್‌ ಸ್ಫೂರ್ತಿಯಾಗಿದ್ದಾರೆ.

ನ್ಯಾ.ಫಾತಿಮಾ ಬೀವಿ

ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ. ಅಲ್ಪಸಂಖ್ಯಾತ ಸಮುದಾಯದಿಂದ ಅತ್ಯುನ್ನತ ಹುದ್ದೆಗೇರಿದ ಮೊದಲ ಮಹಿಳೆಯೂ ಹೌದು. 1989ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ನೇಮಕವಾಗಿದ್ದರು. 1984ರಿಂದ 1980ರವರೆಗೆ ಕೇರಳ ಹೈಕೋರ್ಟ್‌ ನ್ಯಾಯಾಧೀಶೆಯಾಗಿಯೂ ಸೇವೆ ಸಲ್ಲಿಸಿದ್ದರು.

ಮೇ.ಪ್ರಿಯಾ ಝಿಂಗಮ್‌

ಭಾರತೀಯ ಭೂ ಸೇನೆಯಲ್ಲಿ ಮೊದಲ ಮಹಿಳಾ ಅಧಿಕಾರಿ. 1992ರಲ್ಲಿ ಮಹಿಳೆಯರನ್ನೂ ಸೇನೆಗೆ ಸೇರಿ ಇಕೊಳ್ಳುವಂತೆ ಅವರು ಸೇನಾಮುಖ್ಯಸ್ಥರಿಗೆ ಪತ್ರ ಬರೆದು ಪ್ರಸಿದ್ಧವಾಗಿದ್ದರು. ಬಳಿಕ 24 ಮಹಿಳೆಯರನ್ನು ನಿಯೋಜಿಸಲಾಗಿತ್ತು. ಮೇಜರ್‌ ಹುದ್ದೆಯಲ್ಲಿ ಪ್ರಿಯಾ ಅವರು ಸೇವೆ ಸಲ್ಲಿಸಿದ್ದರು.

 

ಯಶಸ್ವೀ ಮಹಿಳೆಯರು

 

* ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಝಾನ್ಸಿರಾಣಿ ಲಷ್ಮೀಬಾಯಿ ಮುಂತಾದವರನ್ನು ಉದಾಹರಿಸಬಹುದು. ಅವರೆಲ್ಲ ತಾವೇ ಸ್ವತ: ಜನೋಪಯೋಗಿ ಕೆಲಸಗಳಲ್ಲಿ ತೊಡಗಿ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಆದರೆ ಈ ಮೇಲಿನ ಉದಾಹರಣೆಗಳು ಅಪತ್ಕಾಲದಲ್ಲಿ ಮಹಿಳೆ ರಾಜ್ಯದ ಅಧಿಕಾರವನ್ನು ಹಿಡಿದು ರಾಜ ಸೂತ್ರವನ್ನು ನಡೆಸಿದವಳೆಂಬುದನ್ನು ಮರೆಯುವಂತಿಲ್ಲ.

* ಭಾರತೀಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿರುವ ಮಹಿಳೆ ಇಂದಿರಾಗಾಂಧಿ. ಇವರೊಬ್ಬ ಯಶಸ್ವೀ ರಾಜಕಾರಣಿಯಾಗಿದ್ದಲ್ಲಿ, ಇವರು ಹತ್ತು ವರ್ಷಗಳಿಗೂ ಮಿಕ್ಕು ಸುದೀರ್ಘ ಕಾಲ ರಾಷ್ಟ್ರವನ್ನು ಆಳಿದ್ದಲ್ಲಿ, “ಸಂಸತ್ತಿನಲ್ಲಿರುವ ಏಕೈಕ ಗಂಡಸು ಇಂದಿರಾಗಾಂಧಿ” ಎಂದು ಕರೆಸಿಕೊಂಡಿದ್ದರೆ ಅದಕ್ಕೆ ಮೀಸಲಾತಿ ಕಾರಣವಲ್ಲ. ಇಂದಿರಾಗಾಂಧಿ ಪಡೆದಿದ್ದ ಶಿಕ್ಷಣ ಮತ್ತು ರಾಜಕೀಯ ಕುಟುಂಬದಲ್ಲಿ ಹುಟ್ಟಿಬೆಳೆದು ಅವರು ನಿಕಟವಾಗಿ ರಾಜಕೀಯದ ಒಳಹೊರಗುಗಳನ್ನು ಬಲ್ಲವರಾಗಿದ್ದಿದು ಇದಕ್ಕೆ ಕಾರಣ.

*ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಆಂಗ್ ಸಾನ್ ಸೂಕಿ ಅಥವಾ ಪಾಕಿಸ್ತಾನದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಇಲ್ಲವೇ, ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಅಗ್ಗಳಿಕೆಯ ಪ್ರತಿಭಾ ಪಾಟೀಲ್- ಇವರೆಲ್ಲ ಹೊಂದಿರುವ ಶಿಕ್ಷಣ ಮತ್ತು ಅನುಭವಗಳು ಅವರನ್ನು ಯಶಸ್ವೀ ಮಹಿಳೆಯರ ಸ್ಥಾನದಲ್ಲಿ ನಿಲ್ಲಿಸಿದೆ.

*ಬಾಹ್ಯಾಕಾಶ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ ಅತ್ಯಂತ ಸಣ್ಣವಯಸ್ಸಿನಲ್ಲಿ ಅಂತರಿಕ್ಷದಲ್ಲೇ ಭಸ್ಮವಾದ ಮಹಿಳೆ ಕಲ್ಪನಾ ಚಾವ್ಲ. ಈಕೆ ಅಂತಹಾ ಸಿರಿವಂತ ಕುಟುಂಬದಿಂದ ಬಂದವರಲ್ಲ. ಚಿಕ್ಕಬಾಲಕಿಯಾಗಿದ್ದಾಗ ಆವರು ಕಂಡ ಕನಸು, ಅವರೊಳಗಿನ ಮಹತ್ವಾಕಾಂಕ್ಷೆಯ ತುಡಿತ, ಗುರಿಸಾಧನೆಯ ಹಠ ಮತ್ತು ಅದಕ್ಕೆ ನೀರೆರೆದ ಅವರ ಸುತ್ತಮುತ್ತಲ ಮಂದಿ ಅವರ ಕನಸು ಸಾಕಾರವಾಗಲು ಕಾರಣ.

* ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಮಾಯಾವತಿ ಯಶಸ್ವಿರಾಜಕಾರಣಿ. ಆದರೆ ಇದಕ್ಕೆ ಅವರ ಜಾತಿ ಅಥವಾ ಮೀಸಲಾತಿ ಮಾತ್ರ ಕಾರಣವಲ್ಲ. ಅವರು ಪಡೆದಿರುವ ಉತ್ತಮ ಶಿಕ್ಷಣವೂ ಕಾರಣ. ಐಎಎಸ್ ಅಧಿಕಾರಿಣಿಯಾಗಬೇಕೆಂದು ಬಯಸಿದ್ದ ಅವರು ರಾಜಕೀಯಕ್ಕೆ ಇಳಿದದ್ದು ಕಾಕತಾಳೀಯ. ಸುಶಿಕ್ಷಿತ ಮಹಿಳಾ ರಾಜಕಾರಣಿಗಳು ಮತ್ತು ಇತರ ರಾಜಕಾರಣಿಗಳ ಕಾರ್ಯವೈಖರಿಯನ್ನು ಗಮನಿಸಿದಾಗ ಮೀಸಲಾತಿ ಬರಿಯ ಸ್ಥಾನವನ್ನು ಗಿಟ್ಟಿಸಲು ಮಾತ್ರ ಸಹಾಯಕವಾಗುತ್ತದೆ ಎಂಬ ಅಂಶ ವೇದ್ಯವಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top