fbpx
ಸಮಾಚಾರ

ಸಂವಿಧಾನದ ವಿಧೇಯಕ ಮಂಡನೆಯ ಮಹಿಳಾ ಹಕ್ಕುಗಳು

* ೨೧ನೇ ಶತಮಾನದಲ್ಲಿ ಮೂಲಭೂತ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಅಭಿವ್ಯಕ್ತಿಯ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ಈ ಎಲ್ಲವು ಆಕೆಗೆ ತಿಳಿದಿವೆ. ಸಂವಿಧಾನದಲ್ಲಿ ಮಹಿಳೆಗೆ ಮೀಸಲಾತಿಯೂ ದೊರೆತಿದೆ. ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅಂತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ.

*   ಸಂವಿಧಾನದಲ್ಲೂ ವಿಧೇಯಕ ಮಂಡನೆಗಳು ತಿದ್ದುಪಡಿಯಾಗಿ ಶೇಕಡಾ ೨೨% ರಿಯಾಯಿತಿಯನ್ನು ನೀಡುವ ಕಾನೂನು ಜಾರಿಗೆ ಬಂದಾಗಿದೆ. ನಾಗರಿಕ ಸಮಾಜದಲ್ಲಿ ಮಹತ್ತರ ಬದಲಾವಣೆ ನಡೆಯುತ್ತಿದ್ದರೂ ಹೆಣ್ಣುಮಕ್ಕಳ ಶೋಷಣೆ ತಪ್ಪಿಸಲಾಗಿಲ್ಲ. ಬಲವಾದ ಕಾನೂನುಗಳ ನೆರವಿದ್ದರೂ ಪ್ರಸ್ತುತ ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ.

* ಈ ಹಿನ್ನೆಲೆಯಲ್ಲಿ ಮಹಿಳಾ ಹಕ್ಕುಗಳು ಮತ್ತು ಅಧಿಕಾರಗಳ ರಕ್ಷಣೆಯನ್ನು ಮಾಡುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ದತ್ತವಾಗಬೇಕಿರುವ ಹಕ್ಕು ಅಧಿಕಾರಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಇತ್ತೀಚಿನ ಸಮೀಕ್ಷಾ ವರದಿ­ಯೊಂದರ ಪ್ರಕಾರ, ಭಾರತದಲ್ಲಿ ಚುನಾವಣೆ ಎದುರಿಸುವ ಶೇ 49ರಷ್ಟು ಮಹಿಳಾ ಅಭ್ಯರ್ಥಿ­ಗಳು ಒಂದಲ್ಲ ಒಂದು ವಿಧದಲ್ಲಿ ಬೈಗುಳ, ನಿಂದನೆಗಳನ್ನು ಎದುರಿಸಿದ್ದಾರೆ.

* ಮಹಿಳೆಯನ್ನು ಲೈಂಗಿಕವಾಗಿ ಅಪೇಕ್ಷಿಸುವುದು ಅಥವಾ ಆಕೆಗೆ ಸಾರ್ವಜನಿಕ ಬೆಂಬಲವನ್ನು ಕಡಿಮೆಮಾಡುವ ಉದ್ದೇಶದಿಂದ ಆಕೆಯ ಚಾರಿತ್ರ್ಯ ಹರಣ ಮಾಡುವಂತಹ ಪ್ರಯತ್ನಗಳು ರಾಜಕೀಯದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿವೆ. ಇವು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿನ ರಾಜಕೀಯದಲ್ಲಿ ಮಹಿಳೆ ವಿರುದ್ಧ ನಡೆಯುವ ಹಿಂಸೆಯ ಸ್ವರೂಪ­ಗಳಲ್ಲಿ ಕೆಲವು ಎಂದು ಈ ಸಮೀಕ್ಷೆ ಹೇಳಿದೆ.

* ಸ್ತ್ರೀ ಶಿಕ್ಷಣ, ಸ್ತ್ರೀ ಉದ್ಯೋಗ, ಮಹಿಳಾ ಸಂಘಟನೆ, ಮಹಿಳಾ ಕಾನೂನುಗಳು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ. 1888ರಲ್ಲಿ ಮೈಸೂರಿನಿಂದ ಹೊರಡುತ್ತಿದ್ದ ‘ಕರ್ನಾಟಕ ವಾಣಿ ವಿಲಾಸ ಪತ್ರಿಕೆ’ಯನ್ನು ಮಹಿಳಾ ಪತ್ರಿಕೆಯಾಗಿ ಗುರುತಿಸಲಾಗಿದೆ. ಅಲ್ಲಿಂದ ಮುಂದಕ್ಕೆ ಮಹಿಳೆಯರನ್ನು ಪತ್ರಿಕೆಯ ಓದುಗರಾಗಿ ಹಾಗೂ ಬರಹಗಾರರಾಗಿ ಗುರುತಿಸಿಕೊಂಡ ಕನ್ನಡ ಪತ್ರಿಕೋದ್ಯಮವು ಮಹಿಳಾ ಪತ್ರಿಕೋದ್ಯಮಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿತು.

*ತಮ್ಮ ಪತ್ರಿಕೆಗಳೇ ಮಹಿಳಾ ವಿಷಯಗಳ ಕುರಿತ ಬರಹಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸುತ್ತ, ಮಹಿಳಾ ಅಂಕಣಗಳನ್ನು ಆರಂಭಿಸಿತು. ಅವುಗಳ ನಿರ್ವಹಣಾ ಜವಾಬ್ದಾರಿಯನ್ನು ಮಹಿಳೆಯರಿಗೇ ನೀಡಿತು. ಪರಿಣಾಮವಾಗಿ ತಿರುಮಲಾಂಬ, ಕಲ್ಯಾಣಮ್ಮ, ಶ್ಯಾಮಲಾದೇವಿ, ಜಯಲಕ್ಷ್ಮಮ್ಮ, ಸರಸ್ವತಿ ಬಾಯಿ ರಾಜವಾಡೆ ಮುಂತಾದವರು ಪತ್ರಿಕಾ ಸಂಪಾದಕರಾಗಿ, ಅಂಕಣಕಾರರಾಗಿ ಮುಂಚೂಣಿಗೆ ಬಂದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top