fbpx
ಸಮಾಚಾರ

ಸಾವಿತ್ರಿ ಬಾಪೂಲೆ ಮೊಟ್ಟಮೊದಲ ಮಹಿಳಾ ಶಿಕ್ಷಕಿ

ಮಹಾತ್ಮ ಜ್ಯೋತಿ ಬಾಪೂಲೆ

*ಇವರು ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು. ೧೮೪೮ ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ಸಾವಿತ್ರಿ ಬಾಪೂಲೆ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ಸಾವಿತ್ರಿ ಬಾಪೂಲೆ ಮೊಟ್ಟಮೊದಲ ಮಹಿಳಾ ಶಿಕ್ಷಕಿ, ವಿದ್ಯೆ ಕೊಟ್ಟ ಸರಸ್ವತಿ.

* ಮಹಿಳಾ ಶಿಕ್ಷಣದ ಬಗ್ಗೆ ಮೊಟ್ಟಮೊದಲಿಗೆ ರೂಢಿಗತ, ಸಾಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸ್ತ್ರೀಯರಿಗೆ ಶಾಲೆ ತೆರೆದು ಶಿಕ್ಷಣ ನೀಡಿದ್ದಷ್ಟೇ ಅಲ್ಲ ವಿಧವಾ ವಿವಾಹವನ್ನು ಎತ್ತಿ ಹಿಡಿಯುತ್ತ ಬಹುಪತ್ನಿತ್ವದ ಬಗ್ಗೆ ಖಂಡಿಸುತ್ತ, ಸಾಮಾಜಿಕ ಅನಿಷ್ಟಗಳಿಗೆ ವೈಚಾರಿಕ ಪರ್ಯಾಯಗಳನ್ನು ವಾಸ್ತವದಲ್ಲಿ ತಂದ ಧೀಮಂತ ವ್ಯಕ್ತಿತ್ವ ಜ್ಯೋತಿಬಾ ಅವರದು.

*   ದೇಶದಲ್ಲಿದ್ದ ಅಸ್ಪೃಶ್ಯತಾ ಆಚರಣೆಯ ನಡುವೆ ಜ್ಯೋತಿ ಬಾಪುಲೆ ಮತ್ತು ಅವರ ಪತ್ನಿ ಸಾವಿತ್ರಿ ಬಾಪುಲೆ[೧೯] ತಳ ಸಮುದಾಯದವರಿಗೆ ಶಿಕ್ಷಣ ನೀಡುವ ಕೆಲಸಕ್ಕೆ ಮುಂದಾದರು. ಮಹಾತ್ಮ ಜ್ಯೋತಿ ಬಾಪೂಲೆ ಮತ್ತು ಸಾವಿತ್ರಿ ಬಾಪೂಲೆ ಅವರು ದೇಶದಲ್ಲೇ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ಹಲವಾರು ಶಾಲೆಗಳನ್ನು ತೆರೆದರು. ಅದರಲ್ಲಿ ಯಶಸ್ವೀಯೂ ಆದರು.

*   ಹಾಗಾಗಿ ಇಂದಿನ ಮಹಿಳೆಯರಾರು ಶಿಕ್ಷಣ ವಿಷಯದಲ್ಲಿ ಇವರಿಬ್ಬರನ್ನು ಮರೆಯುವಂತೆಯೇ ಇಲ್ಲ. ೧೮೭೬ರಲ್ಲಿ ಅವರು ಪ್ರಾರಂಭಿಸಿದ “ವಿಕ್ಟೋರಿಯ ಅನಾಥಾಲಯ” ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಅನೇಕ ವಿಧವೆಯರಿಗೆ ಆಶ್ರಯ ನೀಡಿ ಅನೇಕ ವಿಧವೆಯರ ಮಕ್ಕಳು ಶಿಕ್ಷಣ ಮತ್ತು ಪಡೆಯಲು ಸಹಾಯ ಮಾಡಿತು.

* ಪುಣೆಯಲ್ಲಿ ತನ್ನದೇ ಜಾತಿಯ ವಂಚಕನೊಬ್ಬನ ಬಲಿಗೆ ಬಿದ್ದ ಬ್ರಾಹ್ಮಣ ವಿಧವೆಯೊಬ್ಬಳಿಗೆ ಅಲ್ಲಿನ ಬ್ರಾಹ್ಮಣ ಸಮಾಜ ಸಾಯಿಸಲು ಹವಣಿಸುತ್ತಿತ್ತು. ಫುಲೆ ದಂಪತಿ ಆಕೆಗೆ ತಮ್ಮ ಮನೆಯಲ್ಲಿ ರಕ್ಷಣೆ ನೀಡಿ ಅವಳಿಗೆ ಜನಿಸಿದ ಯಶವಂತನೆಂಬ ಬಾಲಕನನ್ನು ದತ್ತು ಪಡೆದು ಸಾಕಿ ಸಲಹಿ ವೈದ್ಯನನ್ನಾಗಿ ಮಾಡುತ್ತಾರೆ.

* ಸಾವಿತ್ರಿ, ವಿಶ್ವದ ಪ್ರಥಮ ಮಹಿಳಾ ಚಳುವಳಿಗಾರ್ತಿ ಎಂದು ವಿಶ್ವ ವಿಖ್ಯಾತ ಚಿಂತಕಿ ಟಿಫಾನಿ ವೇಯ್ನ್ ತಮ್ಮ “Feminist Writings from Ancient Times to the Modern World: A Global Sourcebook and History.” ಪುಸ್ತಕದಲ್ಲಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top