fbpx
ಸಮಾಚಾರ

ಭ್ರಷ್ಟಾಚಾರದಲ್ಲಿ ಭಾರತ ನಂ.1: ಪೊಲೀಸರು, ಧಾರ್ಮಿಕರ ನಾಯಕರು ಅತಿ ಭ್ರಷ್ಟರು: ಸಮೀಕ್ಷೆಯಲ್ಲಿ ಬಹಿರಂಗ

ಏಷ್ಯಾ ಪೆಸಿಫಿಕ್‍ ರಾಷ್ಟ್ರಗಳ ಪೈಕಿ ಭಾರತ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಪಡೆದಿದೆ. ಸರಕಾರಿ ಇಲಾಖೆಗಳ ಪೈಕಿ ಪೊಲೀಸ್‍ ಇಲಾಖೆ ಹಾಗೂ ಧಾರ್ಮಿಕ ನಾಯಕರು ಅತೀ ಹೆಚ್ಚು ಭ್ರಷ್ಟರು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಬರ್ಲಿನ್ ಮೂಲದ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಭಾರತ ಭ್ರಷ್ಟಾಚಾರದಲ್ಲಿ ಚೀನಾ, ವಿಯೆಟ್ನಾಂ, ಜಪಾನ್, ಪಾಕಿಸ್ತಾನವನ್ನು ಹಿಂದಕ್ಕಿದೆ.

ಸರ್ಕಾರಿ ಸೇವೆಗಳನ್ನು ಪಡೆಯಲು ಅತೀ ಹೆಚ್ಚು ಲಂಚ ಪಡೆಯುವುದು ಭಾರತದಲ್ಲಿ ಎಂದು ಶೇ.69 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ವಿಯೆಟ್ನಾಂನಲ್ಲಿ ಶೇ.65, ಪಾಕಿಸ್ತಾನದಲ್ಲಿ ಶೇ.40, ಚೀನಾದಲ್ಲಿ ಶೇ.26 ರಷ್ಟು, ದಕ್ಷಿಣ ಕೊರಿಯಾದಲ್ಲಿ ಶೇ.3 ರಷ್ಟು ಹಾಗೂ ಜಪಾನ್ ನಲ್ಲಿ ಅತ್ಯಂತ ಕಡಿಮೆ ಅಂದರೆ ಶೆ.0.2 ಭ್ರಷ್ಟಾಚಾರ ಇದೆ.

ಏಷ್ಯಾ-ಪೆಸಿಫಿಕ್ ವ್ಯಾಪ್ತಿಯ 16 ರಾಷ್ಟ್ರಗಳಲ್ಲಿ 20,000 ಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, 900 ದಶಲಕ್ಷ ಜನರು ಒಮ್ಮೆಯಾದರೂ ಲಂಚ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸಾರ್ವಜನಿಕ ಇಲಾಖೆಗಳಲ್ಲಿ ಲಂಚ ಪಡೆಯುವವರ ಪಟ್ಟಿಯಲ್ಲಿ ಭಾರತದ ಪೊಲೀಸರು ಮುಂಚೂಣಿಯಲ್ಲಿದ್ದು, ಶೇ.38 ರಷ್ಟು ಅತಿ ಬಡತನದಲ್ಲಿರುವವರು ಲಂಚ ನೀಡಿರುವುದಾಗಿ ಹೇಳಿದ್ದಾರೆ. ದಾಖಲೆಗಳನ್ನು ಪಡೆಯುವುದಕ್ಕೆ, ಕೋರ್ಟ್ ಅಧಿಕಾರಿಗಳಿಗೆ, ಜಡ್ಜ್ ಗಳಿಗೆ, ಪೊಲೀಸರಿಗೆ, ಆಸ್ಪತ್ರೆಯಲ್ಲಿ ಶಿಕ್ಷಕರಿಗೆ ಹೀಗೆ ವಿವಿಧ ಹಂತಗಳಲ್ಲಿ ಸಾಮಾನ್ಯವಾಗಿ ಲಂಚ ನೀಡಲಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಇದೇ ವೇಳೆ ಧಾರ್ಮಿಕ ನಾಯಕರ ಬಗ್ಗೆ ಕೇಳಲಾದ ಪ್ರಶ್ನೆಗೆ ಸರ್ಕಾರಿ ಅಧಿಕಾರಿಗಳಷ್ಟೇ ಧಾರ್ಮಿಕ ನಾಯಕರೂ ಸಹ ಮಹಾ ಭ್ರಷ್ಟರಾಗಿದ್ದಾರೆ ಎಂದಿದ್ದಾರೆ. ಅದರಲ್ಲೂ ಭಾರತದಲ್ಲಿ ಶೇ.71 ರಷ್ಟು ಜನರು ಧಾರ್ಮಿಕ ನಾಯಕರು ಭ್ರಷ್ಟರಾಗಿದ್ದಾರೆ ಎಂಬ ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top