fbpx
ಉಪಯುಕ್ತ ಮಾಹಿತಿ

3 ವಾರದಲ್ಲಿ 108 ಕೆಜಿ ಇಳಿಸಿಕೊಂಡ ವಿಶ್ವದ ಅತೀ ತೂಕದ ಮಹಿಳೆ

ಮುಂಬೈಗೆ ಚಿಕಿತ್ಸೆ ಆಗಮಿಸಿರುವ ವಿಶ್ವದ ಅತೀ ತೂಕದ ಮಹಿಳೆ ಎಮನ್‍ ಅಹ್ಮದ್ ಮೂರೇ ವಾರದಲ್ಲಿ 108 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

380 ಕೆಜಿ ತೂಕದ ಎಮನ್‍ ಅಹ್ಮದ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ವೇಗವಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ 25 ವರ್ಷಗಳ ನಂತರ ಮೊದಲ ಬಾರಿ ಯಾರ ಸಹಾಯವಿಲ್ಲದೇ ಎದ್ದು ಕೂತಿದ್ದಾರೆ. ಮತ್ತೊಂದು ಶಸ್ತ್ರಚಿಕಿತ್ಸೆಗೆ ಸಜ್ಜಾಗುತ್ತಿದ್ದು, ಶೀಘ್ರದಲ್ಲೇ ಸ್ವಂತ ಕಾಲ ಮೇಲೆ ನಿಂತು ಓಡಾಡುವ ಸ್ಥಿತಿಗೆ ಬರಲಿದ್ದಾರೆ.

ಈಜಿಪ್ಟ್‍ನ ಅಲೆಗ್ಸಾಂಡ್ರಿಯಾದಿಂದ ವಿಮಾನದಲ್ಲಿ ಬಂದ ಈ ದೈತ್ಯ ಮಹಿಳೆಯನ್ನು ಕ್ರೇನ್ ಮೂಲಕ ಇಳಿಸಿಕೊಳ್ಳಲಾಗಿತ್ತು.

ಚಿಕಿತ್ಸೆಗೂ ಮುನ್ನ ವೈದ್ಯರು 25 ದಿನದಲ್ಲಿ 50 ಕೆಜಿ ಇಳಿಸುವ ಗುರಿ ಹೊಂದಿದ್ದರು. ಆದರೆ 18 ದಿನದಲ್ಲಿ 108 ಕೆಜಿ ಇಳಿದಿದೆ. ದೈತ್ಯ ಮಹಿಳೆಗೆ ಕೇವಲ ದ್ರವ ಆಹಾರ ಮತ್ತು ಫಿಜಿಯೋಥೆರಪಿ ಮಾಡಲಾಗುತ್ತಿದ್ದು, ನಿರೀಕ್ಷೆಗಿಂತ ವೇಗವಾಗಿ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top