fbpx
ದೇವರು

ತಿರುಪತಿ ಲಡ್ಡುನಿಂದ ತಿಮ್ಮಪ್ಪನಿಗೆ ವರ್ಷಕ್ಕೆ 140 ಕೋಟಿ ನಷ್ಟ!

ತಿಮ್ಮಪ್ಪನಷ್ಟೇ ಜಗದ್ವಿಖ್ಯಾತಿ ಪಡೆದ `ತಿರುಪತಿ ಲಡ್ಡು’ ಇದೀಗ ಮೊದಲ ಬಾರಿ ನಷ್ಟದಿಂದ ಸುದ್ದಿ ಮಾಡುತ್ತಿದೆ.

ತಿರುಪತಿಯ ವೆಂಕಟೇಶ್ವರ ಶ್ರೀಮಂತಿಗೆ ಹೆಸರುವಾಸಿ. ಆದರೆ ಭಕ್ತರಿಗೆ ಕಡಿಮೆ ದರದಲ್ಲಿ ಲಡ್ಡುಗಳನ್ನುಪ್ರಸಾದ ರೂಪದಲ್ಲಿ ನೀಡುತ್ತಿರುವುದರಿಂದ ಆಡಳಿತ ಮಂಡಳಿಗೆ ವರ್ಷಕ್ಕೆ 140 ಕೋಟಿ ರೂ. ನಷ್ಟವಾಗುತ್ತಿದೆಯಂತೆ!

ತಿರುಮಲ ತಿರುಪತಿ ದೇವಸ್ಥಾನ (ಟಿಡಿಡಿ) ಭಕ್ತರಿಗೆ ನೀಡುವ ಪ್ರತಿ ಲಡ್ಡುಗೆ 32.50 ರೂ. ವೆಚ್ಚವಾಗುತ್ತಿದೆ. ಆದರೆ ಕಳೆದ 11 ವರ್ಷಗಳಿಂದ 25 ರೂ. ವಿನಾಯಿತಿ ನೀಡುತ್ತಿದೆ.

ಆರಂಭದಲ್ಲಿ ಬೊಗಸೆಯಲ್ಲಿ ಹಿಡಿಯುವಷ್ಟು ದೊಡ್ಡದಾದ ಲಡ್ಡುಗಳನ್ನು ಉಚಿತವಾಗಿ ಭಕ್ತರಿಗೆ ನೀಡಲಾಗುತಿತ್ತು. ನಂತರ ಅದರ ಗಾತ್ರ ಇಳಿಸಲಾಯಿತು. ಆದರೂ ಭಕ್ತರ ಬೇಡಿಕೆ ಕುಂದಲಿಲ್ಲ. 2016ರ ವೇಳೆಗೆ ವರ್ಷಕ್ಕೆ 10 ಕೋಟಿ ಲಡ್ಡುಗಳ ಮಾರಾಟವಾಗುತ್ತಿದೆ.

ಆರಂಭದಲ್ಲಿ ಉಚಿತ ದರ್ಶನ ಪಡೆದವರಿಗೆ 10 ರೂ.ಗೆ ಲಡ್ಡು ವಿತರಿಸಲಾಗುತ್ತಿತ್ತು. ಇದರಿಂದ ಜನರು ಭಾರೀ ಸಂಖ್ಯೆಯಲ್ಲಿ ಲಡ್ಡು ಪಡೆಯಲು ಸರತಿ ನಿಲ್ಲುವಂತೆ ಆಯಿತು. ಅಲ್ಲದೇ 23 ಕೋಟಿ ನಷ್ಟವೂ ಆಯಿತು. ಆಡಳಿತ ಮಂಡಳಿ ಒಂದು ಲಡ್ಡು ಪಡೆದವರಿಗೆ ಒಂದು ಉಚಿತ ನೀಡುವ ಯೋಜನೆ ಪ್ರಾರಂಭಿಸಿತು. ಇದರಿಂದ ನಷ್ಟದ ಪ್ರಮಾಣ 22.7 ಕೋಟಿಗೆ ಇಳಿಯಿತು.

2013ರಿಂದೀಚಿಗೆ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ಸರಾಸರಿ 70 ಲಕ್ಷಕ್ಕೇರಿತು. ವಿಶೇಷ ಪ್ರವೇಶ ಪಡೆದ ಭಕ್ತರಿಗೆ 300 ರೂ. ಶುಲ್ಕ ವಿಧಿಸಲಾಗುತ್ತಿದೆ. ವಿಐಪಿ ದರ್ಶನ ಪಡೆಯುವವರಿಗೆ 500 ರೂ. ಶುಲ್ಕ ವಿಧಿಸಲಾಗುತ್ತಿದೆ. ಇಬ್ಬರಿಗೂ ತಲಾ 2 ಉಚಿತ ಲಡ್ಡು ನೀಡಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top