fbpx
Astrology

ಜ್ಯೋತಿಷ್ಯ ಶಾಸ್ತ್ರ: ಚಂದ್ರ ಬಲ ಮತ್ತು ಗ್ರಹದ ಬಲಗಳ ಬಗ್ಗೆ ತಿಳಿದುಕೊಳ್ಳಿ!!!

ತಾರಾಬಲ ಮತ್ತು ಚಂದ್ರ ಬಲ !!

ತಾರಾಬಲ ಮತ್ತು ಚಂದ್ರ ಬಲವನ್ನು ಸಮಾನ್ಯವಾಗಿ ವಿವಾಹ, ಗೃಹ ಪ್ರವೇಶ, ಪ್ರಯಾಣ ಇನ್ನೂ ಮುಂತಾದ ಶುಭ ಕಾರ್ಯಗಳಿಗೆ ತಾರಾಬಲ ಮತ್ತು ಚಂದ್ರ ಬಲವನ್ನು ನೋಡುವ ಪದ್ದತಿಯಲ್ಲಿದೆ.

ಪ್ರತಿ ಶುಭ ಕಾರ್ಯ ಮಾಡುವ ಮೊದಲು ತಾರಾಬಲವನ್ನು ನೋಡಿಕೊಂಡು ಆ ಕಾರ್ಯವನ್ನು ಮಾಡುವುದು ಶ್ರೇಯಸ್ಕರ ಎಂಬುದು ನಂಬಿಕೆ. 27 ನಕ್ಷತ್ರಗಳನ್ನು 9 ವಿಧವಾಗಿ ವಿಭಾಗಿಸಲ್ಪಟ್ಟಿವೆ ಇವುಗಳನ್ನೇ ತಾರೆಗಳೆಂದು ಕರೆಯುತ್ತಾರೆ.

ತಾರಾಬಲ-

ಜನ್ಮನಕ್ಷತ್ರ ಮೊದಲು ಇಷ್ಟಕಾಲದ ನಕ್ಷತ್ರದವರೆಗೆ (ಯಾವ ದಿನ ಶುಭ ಕಾರ್ಯ ಮಾಡಬೇಕೆಂದುಕೊಂಡಿರುತ್ತೀರೊ ಆ ದಿನದ ನಕ್ಷತ್ರ) ಎರಡು ಸೇರಿ ಲೆಕ್ಕಮಾಡಿ
ಒಂಭತ್ತರಿಂದ ಭಾಗಿಸಿ ಬಂದ ಶೇಷವು
1 ಬಂದರೆ ಜನ್ಮತಾರೆ (ಇದು ಒಳ್ಳೆಯದಲ್ಲ ದೇಹಕ್ಕೆ ತೊಂದರೆಗಳು)
2 ಬಂದರೆ ಸಂಪತ್ತಾರೆ (ಸಂಪತ್ತು ಕೊಡುವುದು)
3 ಬಂದರೆ ವಿಪತ್ತಾರೆ (ಕಾರ್ಯನಾಶ ಮಾಡುವುದು)
4 ಬಂದರೆ ಕ್ಷೇಮತಾರೆ (ಕ್ಷೇಮವನ್ನು ಮಾಡುವುದು)
5 ಬಂದರೆ ಪ್ರತ್ಯಕ್ತಾರೆ (ಸರ್ವವೂ ವಿರುದ ಪಲಗಳನ್ನು ನೀಡುವುದು)
6 ಬಂದರೆ ಸಾಧನತಾರೆ (ಕಾರ್ಯ ಸಾಧನೆಯಾಗುವುದು)
7 ಬಂದರೆ ವಧತಾರೆ (ಆರೋಗ್ಯಕ್ಕೆ ತೊಂದರೆಯಾಗ ಬಹುದು)
8 ಬಂದರೆ ಮಿತ್ರತಾರೆ (ಸುಖವನ್ನು ಕೊಡುವುದು)
9 ಮತ್ತು 0 ಬಂದರೆ ಪರಮಮೈತ್ರತಾರೆ (ಸುಖ, ಸೌಭಾಗ್ಯ ಕೊಡುವುದು)
2-4-6-8-9 ಶೇಷ ಬಂದರೆ ಒಳ್ಳೆಯದು.

ಚಂದ್ರ ಬಲ-

ಜನ್ಮ ರಾಶಿ ಮೊದಲು ಚಂದ್ರನಿದ್ದ ರಾಶಿಯವರಿಗೆ ಲೆಕ್ಕಿಸಿದರೆ,12 ರಾಶಿಗಳಲ್ಲಿ ಚಂದ್ರ ಬಲವನ್ನು ನಿರ್ಣಯಿಸಬಹುದು. ಜನ್ಮ ರಾಶಿ ಬದಲು ಚಂದ್ರನಿದ್ದ ರಾಶಿಗೆ ಲೆಕ್ಕ ಮಾಡಿ ಚಂದ್ರನು ಒಂದನೆ ಮನೆಯಲ್ಲಿದ್ದರೆ
1 ದೇಹಸೌಖ್ಯ, 2 ಕಲಹ, 3 ದ್ರವ್ಯಲಾಭ, 4 ರೋಗಭಯ, 5 ಕಾರ್ಯವಿಕಲ್ಪ, 6 ಶತ್ರುನಾಶ, 7 ಸೌಖ್ಯ ವೃದ್ದಿ, 8 ಆರೋಗ್ಯವೃದ್ದಿ, 9 ಕಾರ್ಯತಾಮಸ, 10 ಉದ್ಯೋಗವೃದ್ದಿ, 11 ಇಷ್ಟಾರ್ಥಸಿದ್ದಿ 12 ಧನ ವ್ಯಯ.
ಈ ಸ್ಥಾನಗಳಲ್ಲಿ ಚಂದ್ರನಿದ್ದರೆ ಶುಭನೆಂದು ತಿಳಿದು ಕೊಳ್ಳಬೇಕ.ಮೇಲೆ
ಹೇಳಿದಂತೆ ತಾರಬಲ ಮತ್ತು ಚಂದ್ರ ಬಲವನ್ನು ಶುಭ ಸ್ಥಾನಗಳಲ್ಲಿ ಇದ್ದರೆ ತಾಯಿ ಮಗನನ್ನು ಕಾಪಾಡಿದಂತೆ ಕಾಪಾಡುತ್ತದೆ.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ,ಮೈಸೂರು.
9845371416

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top