ನೀವು ಹುಟ್ಟಿದ ವಾರದ ಫಲ
1.ರವಿವಾರ- ಭಾನುವಾರ ಜನಿಸಿದವರು ಶೂರನೂ ಧೀರನೂ ಯುದ್ದದಲ್ಲಿ ಜಯಶಾಲಿಯೂ, ಉತ್ಸಹವುಳ್ಳವನೂ ಸಾಧಾರಣ ರೂಪವಂತನೂ ಆಗುವರು.
2.ಸೋಮವಾರ– ಜನಿಸಿದವರು ಸಕಲರಿಗೂ ಸವಿಮಾತುಗಳನ್ನು ಆಡುವನು, ಚತುರನೂ, ಶಾಂತಚಿತ್ತನೂ, ರಾಜಾಶ್ರಯುಳ್ಳವನೂ, ಸುಖವನು ಅನುಭವಿಸುವವನೂ, ಗಾಯನದಲ್ಲಿ ಪ್ರೇಮವುಳ್ಳವನೂ ಆಗುವರು.
3.ಮಂಗಳವಾರ– ಜನಿಸಿದವರು ಬಲಿಷ್ಟನೂ, ಜಗಳಗಂಟನೂ, ಅವಸರದ ಸ್ವಭಾವಗವನೂ, ಮುಂಗೋಪಿಯೂ, ದಯಾರಹಿತನೂ ಕ್ರೂರ ಸ್ವಭಾವದವನೂ ಯುದ್ದಪ್ರೇಮಿಯೂ, ಸಾಹಸಿಯೂ ಆಗುವರು.
4.ಬುಧವಾರ– ಜನಿಸಿದವರು ಶ್ರೀಮಂತನೂ, ರೂಪವಂತನೂ, ಮಧುರಭಾಷಿ, ವ್ಯಾಪಾರದಲ್ಲಿ ಕುಶಲನೂ, ಕಲೆಗಳಲ್ಲಿ ಪ್ರವೀಣನೂ, ಸಮಾಧನಯೂ, ವಿದ್ಯಾವಂತನೂ, ಸಂಗೀತಪ್ರೇಮಿಯೂ, ದಾನ ಧರ್ಮಗಳಲ್ಲಿ ಆಸಕ್ತನೂ, ಗುರು ಹಿರಿಯರಲ್ಲಿ ಭಕ್ತಿವಂತನೂ ಆಗವರು.
5.ಗುರುವಾರ– ಜನಿಸಿದವರು ಧನವಂತನು, ವಿದ್ಯಾವಂತನೂ, ಸದ್ಗುಣಿಯೂ, ಜನಪ್ರೇಮಿಯೂ, ದಾನಧರ್ಮಾಧಿ ಸತ್ಕಾರ್ಯಗಳಲ್ಲಿ ಆಸಕ್ತನೂ, ವಿವೇಕಿಯೂ ಆಗುವರು.
6.ಶುಕ್ರವಾರ– ಜನಿಸಿದವರು ಸನ್ಮಾರ್ಗಗಾಮಿಯೂ, ವಿನಯವುಳ್ಳವನು, ಶೃಂಗಾರಪ್ರಿಯನೂ, ಸುಗಂಧದ್ರವ್ಯ ಪ್ರೇಮಿಯೂ, ಚಂಚಲಚಿತ್ತನೂ, ಯುಕ್ತಿವಂತನೂ ಆಗುವನು.
7.ಶನಿವಾರ– ಹುಟ್ಟಿದವನು ಕ್ರೂರ ಸ್ವಭಾವದವನೂ ಮಂದಮತಿಯೂ ಆಲಸ್ಯಗಾರನೂಮ, ದುರ್ಬಲನೂ, ಪರದ್ರವ್ಯಾಪಹಾರಿಯೂ ಆಗುವರು.
ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ,ಮೈಸೂರು.
9845371416
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
