fbpx
Astrology

ಜ್ಯೋತಿಷ್ಯ ಶಾಸ್ತ್ರ: ಗ್ರಹ ಶಾಂತಿ ಮಾಡುವುದ್ದಕ್ಕೆ ಸುಲಭೋಪಾಯಗಳು!!

ಸೂರ್ಯ(ರವಿ) ಗ್ರಹದ ಕಾರಕತ್ವಗಳು ಮತ್ತು ಗ್ರಹ ಶಾಂತಿ ಪರಿಹಾರ

ರವಿಯು ಸಕಲ ಜೀವ ಜಂತುಗಳಿಗೆ ಶಾಖ ಮತ್ತು ಬೆಳಕು ನೀಡಿ ಅದರಲ್ಲಿ ‌ಶಕ್ತಿ, ಚೇತನ, ತೇಜಸ್ಸು ತುಂಬುವವನು.
ರವಿ ನಮ್ಮ ಸೌರಮಾನ ಅಧಿಪತಿ, ಸೃಷ್ಟಿ ಕರ್ತ, ಈ ಜಗತ್ತಿನ ಸಕಲ ಪ್ರಾಣಿ ಸಸ್ಯಗಳ ವಸ್ತುಗಳ ಸೃಷ್ಟಿ ಕರ್ತ. ರವಿಯು ಸಕಲ ಗ್ರಹಗಳ ಅದಿಪತಿ.

ಪಿತೃಕಾರಕ, ಆತ್ಮಕಾರಕ, ಆರೋಗ್ಯದಾಯಕ, ರಾಜಕಾರಕ, ರಾಜ್ಯ ಕಾರಕ, ಶರೀರ ಸುಖ, ವೈದ್ಯ ಶಾಸ್ತ್ರ, ರಾಜವಿದ್ಯೆ, ಮಾನ ಸಮ್ಮಾನ, ಶ್ರೇಷ್ಠತರಹದ ಅಧಿಕಾರ, ರಾಜಕೀಯ ವಿಧ್ಯೇಗಳು, ದಿಟ್ಟತನ, ಪಿತ್ರಾಜಿತ ಆಸ್ತಿ, ಸ್ಪರ್ಧಾತ್ಮಕ ಪರಿಕ್ಷೇಗಳು, ಹೃದಯ, ಕಣ್ಣು, ಮಿದುಳು, ಬೇನ್ನುಹುರಿ, ಅಧಿಕ ರಕ್ತ ಒತ್ತಡ, ಪಿತ್ತ, ರಕ್ತ, ಸಂಚಾರ, ತೀವ್ರ ಜ್ವರ, ದಾಹ, ಮೂರ್ಚೆ, ಪೋಲಿಯೋ, ದೇಹ ಕಾರಕಗಳು
Image result for astrology
ರವಿಯು ಉಚ್ಚಕ್ಷೇತ್ರ, ಸ್ವಕ್ಷೇತ್ರ ಶುಭ ಸ್ಥಾನದಲ್ಲಿ ಇದ್ದರೆ ಮೇಲೆ ಹೇಳಿರುವ ಕಾರಕದ ಸಂಭಂದಪಟ್ಟಂತೆ ಯಾವುದೇ ತೋಂದರೆಗಳು ಆಗುವುದಿಲ್ಲ. ಆದರೆ ರವಿಯು ನೀಚಕ್ಷೇತ್ರ, ಶತೃ ಮನೆಯಲ್ಲಿ ಇದ್ದರೆ ರವಿ ದೆಶೆಯಲ್ಲಿ ಕಾರಕದ ಸಂಭಂದಪಟ್ಟಂತೆ ತೋಂದರೆಗಳು ಕಾಣಬರುತ್ತದೆ.

Image result for astrology

ರವಿಗೆ ಸಂಭಂದಪಟ್ಟಂತೆ ಸುಲಭ ಪರಿಹಾರಗಳು

1. “ಓಂ ಸೂರ್ಯಾಯ ನಮಃ” ಎಂದು ಪ್ರತಿದಿನ 1008 ಸರಿ ನಾಮ ಜಪ ಮಾಡಬೇಕು.
2.ಆದಿತ್ಯ ಪಠನ ಮತ್ತು ಸೂರ್ಯ ನಮಸ್ಕಾರವನ್ನು ದಿನನಿತ್ಯ ಮಾಡಬೇಕು.
3. ರವಿವಾರ ಮತ್ತು ಸೋಮವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ ಮಾಡಿಸಬೇಕು.
4.ರವಿವಾರ ಮತ್ತು ಸೋಮವಾರ ಶಿವ ದೇವಾಲಯಗಳಲ್ಲಿ ಅನ್ನದಾನ ಮತ್ತು ಪ್ರಸಾದವನ್ನು ಹಂಚಬೇಕು.
5.ಬಡವರಿಗೆ ಗೋಧಿಯಿಂದ ಮಾಡಿದ ಪದಾರ್ಥವನ್ನು ಕೊಡಬೇಕು.
6.ಕೆಂಪು ತಾವರೆ ಹೂಗಳನ್ನು ಸೂರ್ಯ ದೇವನಿಗೆ ಅರ್ಪಿಸಬೇಕು.
7.ಸೂರ್ಯನ ರತ್ನವಾದ ಮಾಣಿಕ್ಯ(ಕೆಂಪು) ವನ್ನು ಧರಿಸಿದರೆ ಒಳ್ಳೆಯದು.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ,ಮೈಸೂರು.
9845371416

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top