fbpx
Astrology

ಶುಭ ಮುಹೂರ್ತಗಳಿಗೆ ನೋಡಬೇಕಾದ ವಿಷಯಗಳು!!

ಶುಭ ಮುಹೂರ್ತಗಳಿಗೆ ನೋಡಬೇಕಾದ ವಿಷಯಗಳು

1. ಶುಭ ವಾರ- ಬುಧವಾರ, ಗುರುವಾರ, ಶುಕ್ರವಾರ ಶುಭ ಸೋಮವಾರ, ಭಾನುವಾರ ಮಧ್ಯಮ.
2. ಶುಭ ನಕ್ಷತ್ರ- ಭರಣಿ, ಆರಿದ್ರ, ಕೃತಿಕ, ಆಶ್ಲೇಷ, ಪುಬ್ಬ, ವಿಶಾಖ, ಜ್ಯೇಷ್ಠ, ಪೂರ್ವಾಭಾರ್ಧ, ಪೂರ್ವಾಷಾಢ, ಈ 9 ನಕ್ಷತ್ರಗಳು ಬಿಟ್ಟು ಬೇರೆ ನಕ್ಷತ್ರಗಳು ಶುಭ.
3. ಶುಭ ಲಗ್ನ- ಮೇಷದಿಂದ ಮೀನದವರೆಗೆ ಶುಭ.
4. ಕಾಲಗಳು- ರಾಹುಕಾಲ, ಗುಳಿಕಕಾಲ, ಯಮಗಂಡಕಾಲಗಳನ್ನು ಬಿಡಬೇಕು.
5. ಶುಭ ತಿಥಿ- ಶುಕ್ಲಪಕ್ಷದಲ್ಲಿ ದ್ವಿತಿಯದಿಂದ ಚರ್ತುದಶಿ ವರೆಗೆ,
ಕೃಷ್ಣ ಪಕ್ಷಗಲ್ಲಿ ದ್ವಿತೀಯದಿಂದ ಸಪ್ತಮಿ ವರೆಗೆ.
6. ಯೋಗ, ಕರಣಗಳು ಶುಭವಾಗಿರಬೇಕು.
7. ತಾರಾಬಲ ಮತ್ತು ಚಂದ್ರ ಬಲ ಅನುಕುಲಕರವಾಗಿರಬೇಕು.
8. ಮುಹೂರ್ತ ಲಗ್ನಕ್ಕೆ ಷಡ್ವರ್ಗ ಬಲವನ್ನು ಹೋಂದಿರಬೇಕು.
9. ಮುಹೂರ್ತ ಲಗ್ನಕ್ಕೆ 7 ಹಾಗೂ 8 ರ ಸ್ಥಾನಗಳಲ್ಲಿ ಕೆಟ್ಟ ಗ್ರಹಗಳು ಇರಬಾರದು.
10. ಉಪರಿ ಬಂದ ನಕ್ಷತ್ರ ಇದ್ದ ದಿನ ಶುಭವಲ್ಲ. ಮುಹೂರ್ತ ಲಗ್ನ ಪಂಚರಹಿತ ಆಗಿರಬೇಕು.

ಮದುವೆಗೆ – ಕಾರ್ತಿಕ, ವೈಶಾಖ, ಜ್ಯೇಷ್ಠಮಾಸಗಳು ಅತ್ಯಂತ ಶುಭವಾಗಿರುತ್ತದೆ.

ಗೃಹಪ್ರವೇಶಕ್ಕೆ– ಅಶುಭ ಮಾಸಗಳಾದ ಆಷಾಢ, ಮಾರ್ಘಶಿರ, ಪುಷ್ಯ, ಧರ್ನುಮಾಸ, ಭಾದ್ರಪದ ಮಾಸದ ಕೃಷ್ಣ ಪಕ್ಷಗಳು ಶುಭವಲ್ಲ.

ಅತ್ಯಂತ ಶುಭ ಮುಹೂರ್ತ ಎಂದರೆ ಯುಗಾದಿ, ಅಕ್ಷಯತೃತಿಯ, ವಿಜಯದಶಮಿ, ಬಲಿಪಾಡ್ಯಮಿಯ ಅರ್ಧದಿನ ಈ ದಿನಗಳಲ್ಲಿ ಯಾವುದೇ ತಿಥಿ, ವಾರ, ನಕ್ಷತ್ರಗಳು ನೋಡದೆ ಶುಭ ಕಾರ್ಯಗಳನ್ನು ಮಾಡುವುದರಿಂದ ಅತ್ಯಂತ ಶುಭವಾಗಿರುತ್ತದೆ.

ಎನ್.ಶರತ್ ಶಾಸ್ತ್ರಿ
ಶೈವಾಗಮ,ಜ್ಯೋತಿಷ್ಯ ಪ್ರವೀಣ
ಚಾಮುಂಡೇಶ್ವರಿ ದೇವಸ್ಥಾನ ಸುಣ್ಣದಕೇರಿ,ಮೈಸೂರು.
9845371416

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top