fbpx
Astrology

ತೀರ್ಥ ಹೇಗೆ ಸ್ವೀಕರಿಸಬೇಕು?? ಮೂರು ಬಾರಿ ಯಾಕೆ ಸ್ವೀಕರಿಸಬೇಕು ಗೊತ್ತೇ?

ತೀರ್ಥ ಹೇಗೆ ಸ್ವೀಕರಿಸಬೇಕು?? ಮೂರು ಬಾರಿ ಯಾಕೆ ಸ್ವೀಕರಿಸಬೇಕು ಗೊತ್ತೇ?

ಮನೆಯಲ್ಲಿ ಪೂಜೆಗಳನ್ನು ಮಾಡಿದಾಗ, ದೇವಸ್ಥಾನದಲ್ಲೋ ಅಥವಾ ಇನ್ನೆಲ್ಲಾದರೂ ದೇವರ ದರ್ಶನ ಪಡೆದ ಬಳಿಕ ತೀರ್ಥ ಸ್ವೀಕರಿಸುತ್ತೇವೆ. ತೀರ್ಥದ ಪ್ರಾಮುಖ್ಯತೆಯನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತೀರ್ಥ ಸ್ವೀಕರುಸುವಾಗ ಮೂರು ಬಾರಿ ಕೊಡಲಾಗುತ್ತದೆ. ಆದರೆ ತೀರ್ಥವನ್ನು ಮೂರು ಬಾರಿ ಯಾಕೆ ಸ್ವೀಕರಿಸಬೇಕು ಎಂದು ಎಂದಾದದ್ರೂ ಯೋಚಿಸಿದ್ದೀರಾ?

ಮೂರು ಬಾರಿ ಯಾಕೆ ಸ್ವೀಕರಿಸಬೇಕು ಅಂತ ಗೊತ್ತಾ?

ನಮ್ಮ ಪುರಾಣಗಳ ಪ್ರಕಾರ ತೀರ್ಥ ಎಂದರೆ ಮೋಕ್ಷ ಕೊಡುವುದು ಎಂದರ್ಥ. ಇದನ್ನು ಮೂರು ಬಾರಿ ಸ್ವೀಕರಿಸಿದರೆ…ಭೋಜನ ಮಾಡಿದಷ್ಟು ಶಕ್ತಿ ಬರುತ್ತದೆ ಎನ್ನುತ್ತಾರೆ. ತೀರ್ಥ ಸ್ವೀಕರಿಸುವಾಗ ಆರೋಗ್ಯಕರವಾದ ಭಾವದೊಂದಿಗೆ ಸ್ವೀಕರಿಸಬೇಕು. ಈ ತೀರ್ಥ ನನಗೆ ಒಳ್ಳೆಯದು ಮಾಡುತ್ತದೆ, ನನ್ನ ಆರೋಗ್ಯಕ್ಕೆ ಮತ್ತು ನನ್ನ ಆಧ್ಯಾತ್ಮಿಕ ಬೆಳವಣಿಗೆಗೆ ಶಕ್ತಿ ಕೊಡುತ್ತದೆ ಎಂಬ ಸದ್ಭಾವನೆಯಿಂದ ತೆಗೆದುಕೊಳ್ಳಬೇಕು. ದೇವರಿಗೆ ಪೂಜೆ ಮಾಡಿದ ಬಳಿಕ ಸ್ವೀಕರಿಸುವ ತೀರ್ಥದಲ್ಲಿ ಪಂಚಾಮೃತ, ತುಳಸಿ ದಳ, ಸುಗಂಧ ದ್ರವ್ಯಗಳು, ಮಂತ್ರಶಕ್ತಿಗಳಿಂದ ತುಂಬಿರುತ್ತವೆ. ಇದರಿಂದ ಆ ತೀರ್ಥ ಅತ್ಯಂತ ಪವಿತ್ರವಾಗಿ ಬದಲಾಗುತ್ತದೆ. ತೀರ್ಥ ಸ್ವೀಕರಿಸುವುದರಿಂದ ನಮ್ಮ ಆರೋಗ್ಯ, ಆಧ್ಯಾತ್ಮಿಕತೆ ಉತ್ತಮಗೊಳ್ಳುತ್ತದೆ.

ಮೊದಲ ಬಾರಿ ತೀರ್ಥ ಸ್ವೀಕರಿಸಿದರೆ ಶಾರೀರಿಕ, ಮಾನಸಿಕ ಶುದ್ಧಿ ನಡೆಯುತ್ತದೆ.
ಎರಡನೇ ಸಲ ತೀರ್ಥ ಸ್ವೀಕರಿಸಿದರೆ ನ್ಯಾಯ, ಧರ್ಮದ ನಡವಳಿಕೆ ಉತ್ತಮಗೊಳ್ಳುತ್ತದೆ.
ಇನ್ನು ಮೂರನೆಯದು ದೇವರೇ ಪರಮ ಪದ ಎಂದು ಸ್ವೀಕರಿಸಬೇಕು.

ತೀರ್ಥ ಹೇಗೆ ಸ್ವೀಕರಿಸಬೇಕು??

ಇದು ತಪ್ಪು 

ಮೂರು ಬಾರಿ ಸಹ ಬಲಗೈ ಕೆಳಗೆ ಎಡಗೈ ಇಟ್ಟು ತೀರ್ಥ ಸ್ವೀಕರಿಸಬೇಕು. ಬಲಗೈನ ತೋರು ಬೆರಳು ಮಧ್ಯಕ್ಕೆ ಹೆಬ್ಬೆರಳನ್ನು ಮಡಚಿದರೆ ಗೋಮುಖ ಎಂಬ ಮುದ್ರ ಬರುತ್ತದೆ. ಈ ಮುದ್ರೆಯಲ್ಲಿ ತೀರ್ಥವನ್ನು ಸ್ವೀಕರಿಸಬೇಕು. ತೀರ್ಥವನ್ನು ಸ್ವೀಕರಿಸಿದ ಬಳಿಕ ತಲೆಗೆ ಒರೆಸಿಕೊಳ್ಳುತ್ತಾರೆ. ಆದರೆ ಆ ರೀತಿ ಮಾಡಬಾರದು. ತಲೆಯ ಮೇಲೆ ಬ್ರಹ್ಮ ದೇವರು ಇರುತ್ತಾರೆ. ನಮ್ಮ ಎಂಜಲನ್ನು ಬ್ರಹ್ಮನಿಗೆ ಅರ್ಪಣೆ ಮಾಡಿದವರಾಗುತ್ತೇವೆ.

ಆದ್ದರಿಂದ ಕಣ್ಣಿಗೆ ಒತ್ತಿಕೊಳ್ಳುವುದು ಉತ್ತಮ.
ಮನೆಯಲ್ಲಿ ತೀರ್ಥ ಸ್ವೀಕರಿಸುವಾಗ ಕೆಳಗೆ ಕೂತು ಸ್ವೀಕರಿಸಬೇಕು. ದೇವಸ್ಥಾನದಲ್ಲಾದರೆ ನಿಂತುಕೊಂಡು ಸ್ವೀಕರಿಸಬಹುದು.

ಕೃಪೆ :
ಪಂಡಿತ ಆರಾಧ್ಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top