fbpx
ಉಪಯುಕ್ತ ಮಾಹಿತಿ

ನಮ್ಮ ಪಾವಗಡದಲ್ಲಿ ಬರುತ್ತಿದೆ ದೇಶದ ಅತಿ ದೊಡ್ಡ ಸೋಲಾರ್ ಪಾರ್ಕ್!!

ಆಂಧ್ರ ರಾಜ್ಯಕ್ಕೆ ಹತ್ತಿಕೊಂಡಿರುವ ಕರ್ನಾಟಕದ ತಾಲೂಕು ಪಾವಗಡ. ಈ ಊರು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ನೀರಿನ ಅಭಾವ ಇಲ್ಲಿನ ಜನರ ನಿದ್ದೆ ಗೆಡಿಸಿದೆ. ೬೦ ವರ್ಷದಲ್ಲಿ ಸುಮಾರು ೫೪ ಬಾರಿ ಬರ ಪೀಡಿತ ತಾಲೂಕ ಎಂಬ ಹಣೆ ಪಟ್ಟಿ ಈ ಊರಿನದ್ದು. ಬೆಟ್ಟ ಗುಡ್ಡಗಳು ಈ ಊರಿನ ಸುತ್ತ ಆವರಿಸಿವೆ. ಮೊದಲೆಲ್ಲ ಈ ಪ್ರದೇಶವನ್ನು ನಿರ್ಲಕ್ಷಿಸಿದವರು.. ಆ ಊರಿನ ಜನಸಾಮನ್ಯರು ಹೆಮ್ಮೆ ಪಡುವಂತಹ ಕಾರ್ಯ ನಡೆಯುತ್ತಿದ್ದ ವಿಶ್ವ ಭೂ ಪಟದಲ್ಲಿ ಪಾವಗಡ ಹೆಮ್ಮರವಾಗಿ ಕಾಣಿಸಿಕೊಳ್ಳುತ್ತಿದೆ.
Image result for pavagada solar park

ಬೆಂಗಳೂರಿನಿಂದ ಸುಮಾರು ೨೦೦ ಕಿ.ಮಿ ದೂರದಲ್ಲಿರುವ ಪಾವಗಡದಲ್ಲಿ ದೇಶದ ಅತಿ ದೊಡ್ಡ ಸೋಲಾರ್ ಪಾರ್ಕ್ ಸ್ಥಾಪನೆಗೆ ಆರಂಭವಾಗಿದೆ. ಸುಮಾರು ೧೨ ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ೧೨ ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಪಾರ್ಕ್‌ನಲ್ಲಿ ಎರಡು ಹಂತದಲ್ಲಿ ವಿದ್ಯುತ್ ಉತ್ಪಾದನೆಗೆ ಚಿಂತನೆ ನಡೆಸಲಾಗಿದೆ.

ಈ ಯೋಜನೆಯಿಂದ ಸ್ಥಳೀಯ ರೈತರಿಗೆ ತೊಂದರೆ ಆಗಿದೆ. ಆದರೆ ಸರ್ಕಾರ ದೊಡ್ಡ ಯೋಜನೆ ಹಾಕಿಕೊಂಡಿದ್ದು, ದೊಡ್ಡ ಲಾಭದ ಕನಸು ಕಾಣುಯತ್ತಿದೆ. ಅಲ್ಲದೆ ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣದ ಯೋಜನೆ ಇದಾಗಿದೆ. ಒಂದು ಅಂದಾಜಿನ ಪ್ರಕಾರ ಸರ್ಕಾರ ೨೦೧೮ರ ಕೊನೆಯ ವರೆಗೂ ಸುಮಾರು ೨೭೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ ಸಹಾಯದಿಂದ ೨೦೨೦ರಲ್ಲಿ ೧೦೦ ಗಿಗಾ ಬೈಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಇನ್ನು ಮೂರ‍್ನಾಲ್ಕು ತಿಂಗಳುಗಳಲ್ಲಿ ಸುಮಾರು ೫೦೦ ಮೆಗಾ ವ್ಯಾಟ್ ಉತ್ಪಾದನೆಯ ಗುರಿ ಹೊಂದಲಾಗಿದೆ.
Image result for pavagada solar park
ವಿದ್ಯುತ್ ಉತ್ಪಾದನೆ ಸಂಬಂಧದ ಎಲ್ಲ ಸಿದ್ಧತೆಗಳು ನಡೆದಿವೆ. ಪಾರ್ಕ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಪ್ರಸರಣ ಜಾಲಕ್ಕೆ ಸೇರ್ಪಡೆಗೊಳಿಸಲು ಪವರ್ ಗ್ರಿಡ್ ಕಾರ್ಪೋರೇಷನ್ ಸುಮಾರು ೮೧೦ ಕೋಟಿ ರೂ. ವೆಚ್ಚದಲ್ಲಿ ಮಾರ್ಗಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ಈ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣ ವಾಗುತ್ತಿದ್ದರಿಂದ ಈ ಭೂಮಿಗೆ ಚಿನ್ನದ ಬೆಲೆ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top