fbpx
Astrology

ಕೆಲವು ಜನರಿಗೆ ಸಹಾಯ ಮಾಡಿದ್ರೆ ನಿಮ್ಮ ಮರ್ಯಾದೆ ನೀವೇ ಕಳ್ಕೋತೀರಾ ! ಅನ್ನುತ್ತೆ ಚಾಣುಕ್ಯ ನೀತಿ

ಪ್ರಾಚೀನ ಭಾರತೀಯ ಇತಿಹಾಸದಲ್ಲಿ ಚಾಣಕ್ಯನ ಕುರಿತಾಗಿ ಹೇಳದಿದ್ದರೆ ಅಪೂರ್ಣ ಭಾರತೀಯ ಶಿಕ್ಷಕ, ಅರ್ಥಶಾಸ್ತ್ರಜ್ಞ, ನ್ಯಾಯವಾದಿ ರಾಜಮನೆತನದ ಸಲಹೆಗಾರ ಮತ್ತು ತತ್ವಜ್ಞಾನಿ. ಕೌಟಿಲ್ಯ ,
ವಿಷ್ಣುಗುಪ್ತಾ ಎಂದು ಸಹ ಕರೆಯಲಾಗುತ್ತಿತ್ತು.

ಭಾರತೀಯ ಅರ್ಥಶಾಸ್ತ್ರ ಪ್ರವೀಣ , ಅದೆಂದರೆ ಭಾರತದ ರಾಜಕೀಯ ಗ್ರಂಥವಾದ ಅರ್ಥಶಾಸ್ತ್ರವನ್ನು ರಚಿಸಿರುವ ಹೆಗ್ಗಳಿಕೆ ಇವರದ್ದು .ಭಾರತದ ರಾಜಕೀಯ ವಿಜ್ಞಾನ ಮತ್ತು ಅರ್ಥಶಾಸ್ತ್ರ ಪ್ರವರ್ತಕ ಸಹ ಆಗಿದ್ದರು.

ತನ್ನ ತತ್ವಶಾಸ್ತ್ರದ ಬರಹಗಳಲ್ಲಿಯೂ, ಚಾಣಕ್ಯ ಕೆಲ ಜನರಿಗೆ ಯಾವ ರೀತಿಯಲ್ಲೂ ಸಹಾಯ ಮಾಡಬಾರದು ಸಹಾಯ ಮಾಡಿದ್ರೆ ಅವರು ತುಂಬ ಅತೃಪ್ತಿ ಮತ್ತು ಇತರರಿಗೆ ತೊಂದರೆ ಉಂಟುಮಾಡುವ
ಮನೋಭಾವನೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.
ಆ ತರದ ಜನರಲ್ಲಿ ಮೂರು ವಿಧ

ಚರಿತ್ರ ಹೀನ ಹೆಣ್ಣು :

ಜನರು ತೊಂದರೆಯಲ್ಲಿರುವ ಹೆಣ್ಣನ್ನು ನೋಡಿದಾಗ ಸಾಮಾನ್ಯವಾಗಿ ಭಾವನಾತ್ಮಕ ಹತೋಟಿಯದು ಕೊಳ್ಳುತ್ತಾರೆ ಆದರೂ ಸಹ ಮಹಿಳೆಯ ಪೂರ್ಣ ವಿವರ ಗೊತಿಲ್ಲದೆ ಸಹಾಯ ಮಾಡಬಾರದು.

ಇಂತಹ ಮಹಿಳೆ ಯಾವುದೇ ಒಂದು ವ್ಯಕ್ತಿಗೆ ತನ್ನ ನಿಜವಾದ ಮುಖ ತೋರಿಸಲು ಇಚ್ಛಿಸುವುದಿಲ್ಲ ಸಹಾಯ ಮಾಡಿದವರಿಗೆ ನೋವು ಕೊಡುವುದೇ ಇವರ ಕೆಟ್ಟ ಸ್ವಭಾವ.
ಅಂದರೆ ಸ್ವಾರ್ಥಿ ಕಾರಣಗಳಿಗಾಗಿ ಸಹಾಯ ಮಾಡುವ ಜನರನ್ನು ಉಪಯೋಗಿಸುತ್ತಾರೆ ಇದರಿಂದ ಸಹಾಯ ಮಾಡಿದವರ ಸಾಮಾಜಿಕ ಮತ್ತು ವೈಯಕ್ತಿಕ ಜೀವನ ಪತನವಾಗಬಹುದು.

ನಿರಂತರವಾಗಿ ರೋಧಿಸುತ್ತಿರುವವರು: 

ಅಕ್ಷರಶಃ ಯಾವುದೇ ಕಾರಣಕ್ಕಾಗಿಯು ಇಂತವರಿಗೆ ಸಹಾಯ ಮಾಡಬಾರದು ಇಂತಹ ಜನರಿಂದ ದೂರ ಉಳಿಯಲು ಪ್ರಯತ್ನ ಮಾಡಬೇಕು . ಯಾವುದರಲ್ಲೂ ತೃಪ್ತಿಯಿರುವುದಿಲ್ಲ ಯಾವಾಗಲೂ ರೋಧಿಸಿರುತ್ತಾನೆ, ಒಂಟಿಯಾಗಿ ಇರಲು ಬಯಸುತ್ತಾರೆ.
ಇತರರನ್ನು ಕಂಡರೆ ಹೊಟ್ಟೆ ಕಿಚ್ಚಿನ ಸ್ವಭಾವ ಇವರದ್ದು.

ಜನರನ್ನು ಶಪಿಸುವುದು , ಯಾವುದೇ ಕಾರಣವಿಲ್ಲದೆ ಇರೋ ಮೋಸ ಮಾಡಿಬಿಟ್ಟರು ಎನ್ನುವ ಮನೋಭಾವ, ಇಂತವರು ಮಾನಸಿಕ ಶಾಂತಿಯನ್ನು ಹಾಳುಮಾಡುತ್ತಾರೆ ಇವರನ್ನು ದೂರ ಇಡುವುದು ಉತ್ತಮ.

ಮೂರ್ಖರಿಗೆ ಸಹಾಯ ಮಾಡಬೇಡಿ :

ಅವಿವೇಕಿ ಜನರಿಗೆ ಸಲಹೆ ಮಾಡಬೇಡಿ ನೀವು ಅವರನ್ನು ಸರಿಪಡಿಸಲು ಸಹಾಯ ಮಾಡುತ್ತೇನೆ ಅಂದು ಕೊಂಡರೆ ಅದು ನಿಮ್ಮ ಮೂರ್ಖತನ .

ಜೀವನದಲ್ಲಿ ಸೂಕ್ತ ವಿಷಯಗಳನ್ನು ತಿಳಿಯುವ ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಅವರು ಸಂಪೂರ್ಣವಾಗಿ ಕ್ಷುಲ್ಲಕ ವಿಷಯಗಳ ಬಗ್ಗೆ ವಾದ ಆರಂಭಿಸಲು ನಿಮ್ಮ ಸಮಯ ಮತ್ತು ಶ್ರಮ ವ್ಯರ್ಥ ಮಾಡುತ್ತಾರೆ ಕೊನೆಗೆ ಸಹಾಯ ಮಾಡಿದ ತಪ್ಪಿಗೆ ನಿಮ್ಮನ್ನ ಕೀಳಾಗಿ ಕಾಣುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

I want read some books related to kautillya.

Could please suggest me on this.

To Top