ಇತರೆ

‘ಕಳೆದುಹೋಗಿದ್ದ’ ಇಸ್ರೊದ ಚಂದ್ರಯಾನ-1 ಉಪಗ್ರಹ ಪತ್ತೆಹಚ್ಚಿದ ನಾಸಾ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕಳೆದುಹೋಗಿದೆ ಎಂದು ಭಾವಿಸಲಾಗಿದ್ದ ಭಾರತದ ಮೊದಲ `ಚಂದ್ರಯಾನ1` ಉಪಗ್ರಹವನ್ನು ಅಮೆರಿಕದ ನಾಸಾ ಪತ್ತೆಹಚ್ಚಿದೆ.

79 ದಶಲಕ್ಷ ಡಾಲರ್‍ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಂದ್ರಯಾನ-1 ಉಪಗ್ರಹವನ್ನು 2008ರಲ್ಲಿ ಉಡಾವಣೆ ಮಾಡಲಾಗಿತ್ತು. ಜಗತ್ತಿನಲ್ಲೇ ಅತೀ ಕಡಿಮೆ ವೆಚ್ಚದ ಯಶಸ್ವಿ ಯೋಜನೆ ಎಂಬ ಹೆಗ್ಗಳಿಕೆಗೆ ಈ ಯೋಜನೆಗೆ ಮನ್ನಣೆ ಲಭಿಸಿತ್ತು.

ಎರಡು ವರ್ಷಗಳ ಕಾರ್ಯಾಚರಣೆಯಾಗಿದ್ದ ಚಂದ್ರಯಾನ ನಂತರ ಸಂಪರ್ಕ ಕಡಿದುಕೊಂಡಿತ್ತು. ಕಳೆದುಹೋಗಿದೆ ಎಂದು ಅದರ ವಿಷಯವನ್ನೇ ಇಸ್ರೊ ಮರೆತುಬಿಟ್ಟಿತ್ತು. ಇದೀಗ ಅಮೆರಿಕದ ಬಾಹ್ಯಕಾಶ ಸಂಸ್ಥೆ ನಾಸಾ, ಭಾರತದ ಚಂದ್ರಯಾನ ನೌಕೆಯನ್ನು ಪತ್ತೆಹಚ್ಚಿದ್ದು, ಚಂದ್ರನ ಮೇಲಿನ ಲೂನಾರ್‍ ಕಕ್ಷೆಯಿಂದ 200 ಕಿ.ಮೀ. ಎತ್ತರದಲ್ಲಿ ಚಂದ್ರನ ಸುತ್ತ ಇನ್ನೂ ಸುತ್ತುತ್ತಲೇ ಇದೆ ಎಂದು ತಿಳಿಸಿದೆ.

2009 ಆಗಸ್ಟ್ 29ರಂದು ನೌಕೆ ಸಂಪರ್ಕ ಕಡಿದುಕೊಂಡಿತ್ತು. ಈ ನೌಕೆ ಅತ್ಯಂತ ಚಿಕ್ಕದಾಗಿದ್ದು, 1.5 ಮೀ. ಕ್ಯೂಬ್‍ ಇದಾಗಿದ್ದು, ಮಾರುತಿ ಕಾರಿನ ಗಾತ್ರದಲ್ಲಿದೆ ಎಂದು ಕ್ಯಾಲಿಪೊರ್ನಿಯಾದಲ್ಲಿನ ರಾಡರ್ ವಿಜ್ಞಾನಿ ಮರಿನಾ ಬ್ರೊಜೊವಿಕ್‍ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top