fbpx
Astrology

ಜೀವನದಲ್ಲಿ ಕೆಲವು ವಿಷಯಗಳನ್ನ ಬೇರೆಯವರ ಜೊತೆ ಹೇಳ್ಕೊಬಾರ್ದು ಅಂತ ಶಾಸ್ತ್ರ ಹೇಳುತ್ತೆ !

ಶುಕ್ರಾಚಾರ್ಯರು ಬರೆದಿರುವ ಶುಕ್ರ ನೀತಿಯ ಪ್ರಕಾರ ಜೀವನದಲ್ಲಿ ಕೆಲವು ವಿಷಯಗಳನ್ನ ನಮ್ಮಲ್ಲೇ ಇಟ್ಕೋಬೇಕು

ನಿಮ್ಮನ್ನ ಇತರರು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಅದು ತುಂಬ ಒಳ್ಳೆದು
ಆದರೆ ಅದನ್ನ ಇತರರ ಮುಂದೆ ತೋರಿಸಿಕೊಳ್ಳುವ ಅವಶ್ಯಕತೆಯಿಲ್ಲ ಹಾಗೆ ಮಾಡಿದ್ರೆ ಇತರರ ದೃಷ್ಟಿಯಲ್ಲಿ ನಿಮ್ಮ ಗೌರವ ಕಡಿಮೆಯಾಗುತ್ತೆ.

ನೀವು ದೈನಂದಿನ ಜೀವನದಲ್ಲಿ ದೇವರಿಗೆ ಪ್ರಾರ್ಥನೆ ಮಂತ್ರ ಪಠಣವನ್ನು ಮಾಡುತ್ತೀರಾ ಒಂದು ವೇಳೆ ನಿಮ್ಮ ಪೂಜೆ ರಹಸ್ಯ ಮಂತ್ರಗಳನ್ನ ಹೊಂದಿದ್ದರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಎಲ್ಲರ ಮುಂದೆ ಹೇಳಿದರೆ , ನಿಮ್ಮ ಇಚ್ಛೆಗೆ ಪೂರ್ಣ ಫಲ ದೊರೆಯುವುದಿಲ್ಲ.

ಹಾಗೆಯೇ, ನಿಮ್ಮ ಜೀವನದಲ್ಲಿ ಯಾವುದೇ ಹಂತದಲ್ಲಿ ಅವಮಾನ ಎದುರಿಸಬೇಕಾಗುತ್ತದೆ ಆ ವೇಳೆ ಅದನ್ನು ಸಹ ಬೇರೆಯವರ ಹತ್ತಿರ ಹೇಳಿಕೊಳ್ಳಬಾರದು ಯಾಕಂದ್ರೆ ಮುಂದೆ ಒಂದು ದಿನ ಅವರೇ ಈ ವಿಷಯ ಇಟ್ಕೊಂಡು ನಿಮಗೆ ಅವಮಾನ ಮಾಡಬಹುದು.

ನೀವು ಎಷ್ಟು ಹಣವನ್ನು ಹೊಂದಿದ್ದೀರಿ ಎಂಬ ಮಾಹಿತಿಯನ್ನು ಕಟ್ಟುನಿಟ್ಟಾಗಿ ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕು. ನಿಮ್ಮ ಹಣ ಕಳ್ಳತನವಾಗಬಹುದು ಅಥವಾ ಕೆಟ್ಟನ್ನ ಕಣ್ಣುಗಳ ಅಸೂಯೆಗೆ ಒಳಗಾಗಬಹುದು .

ವ್ಯಕ್ತಿಯ ಸಾಮರ್ಥ್ಯಕ್ಕು ವಯಸ್ಸಿಗೂ ಯಾವುದೇ ಸಂಬಂಧ ಇಲ್ಲ ನಿಮ್ಮ ವಯಸ್ಸಿನ ಮಾಹಿತಿ ಯಾರು ಕೇಳಿದರು ಕೊಡಬೇಡಿ.

ನೀವು ಜೀವನದಲ್ಲಿ ಗೃಹ ದೋಷಗಳಿಂದ ಬಳಲುತ್ತಿದ್ದರೆ ನಿಮ್ಮ ಸಮಸ್ಯೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು ಗ್ರಹ ದೋಷಗಳ ಮಾಹಿತಿ ನಿಮ್ಮ ಶತ್ರು ಗಳಿಗೆ ತಿಳಿದರೆ ಇದರ ಲಾಭವನ್ನು ಪಡೆದುಕೊಂಡು ನಿಮಗೆ ಕೇಡು ಮಾಡಬಹುದು.

ನಿಮ್ಮ ವೈದ್ಯರ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕು , ನೀವು ಆಳವಾದ ತೊಂದರೆಯಲ್ಲಿ ಸಿಲುಕಿದ್ದರೆ ನಿಮ್ಮ ಶತ್ರುಗಳು ಇದರ ಲಾಭವನ್ನು ಪಡೆದುಕೊಂಡು ನಿಮಗೆ ಕೇಡು ಮಾಡಬಹುದು.

ನಿಮ್ಮ ಪ್ರೇಮ ಜೀವನ ಬಹಳ ವೈಯಕ್ತಿಕ ಸಂಬಂಧ ಮತ್ತು ನೀವು ಮತ್ತು ನಿಮ್ಮ ಸಂಗಾತಿ ಬಗ್ಗೆ ನಿಕಟ ವಿವರಗಳನ್ನು ಯಾರಿಗೂ ಹೇಳಬಾರದು.

ನಿಮ್ಮ ದಾನ ಧರ್ಮ ಇತರ ಮಾಹಿತಿಗಳನ್ನು ಇತರರೊಡನೆ ಹಂಚಿಕೊಳ್ಳುವುದು ಸರಿಯಲ್ಲ .

ಉತ್ತಮ ಕ್ರಮಗಳು ಉತ್ತಮ ಫಲಿತಾಂಶ ನೀಡುತ್ತವೆ ಮತ್ತು ಕೆಟ್ಟ ಕೆಲಸಗಳು ಕೆಟ್ಟ ಫಲಿತಾಂಶಗಳನ್ನು ನೀಡುತ್ತವೆ
ಆದ್ದರಿಂದ ಯಾವಾಗಲೂ ಉತ್ತಮ ಕೆಲಸಗಳನ್ನು ಮಾಡಬೇಕು .

ಜೀವನದಲ್ಲಿ ಕೆಲವೊಮ್ಮೆ ನಾವು ಎಷ್ಟೇ ಒಳ್ಳೆ ಕೆಲಸಗಳನ್ನು ಮಾಡಿದರು ಫಲ ಸಿಗುವುದಿಲ್ಲ ಆದರೆ ಇವೆಲ್ಲ ನಮ್ಮ ಪೂರ್ವಜನ್ಮದ ಪಾಪ ಫಲಗಳು.ಕರ್ಮವು ಎಲ್ಲವನ್ನು ಬದಲಿಸುತ್ತದೆ ಆದ್ದರಿಂದ ಒಳ್ಳೆಯ ಕೆಲಸಗಳನ್ನು ಮಾಡಿ .

ಕೆಲವೋಮ್ಮೆ ಮನಸು ಹೇಳಿದ ಹಾಗೆ ಕೇಳುವ ಬದಲು ನಮ್ಮ ಆಲೋಚನೆಗೆ ಹಾಗು ಮೆದುಳಿಗೆ ನಿರ್ಧಾರ ತೆಗೆದುಕೊಳ್ಳಲು ಬಿಡಬೇಕು , ಹೃದಯ ಕೆಲವೊಮ್ಮೆ ನಮಗೆ ತಪ್ಪು ನಿರ್ಧಾರಗಳನ್ನು ನೀಡಬಹುದು ಆದ್ದರಿಂದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top