fbpx
Astrology

ನೀವು ಬೇಕಾದ್ರು ಟ್ರೈ ಮಾಡಿ ಇದು ತುಳಸೀದಾಸರ ಲೆಕ್ಕ ಕೊನೆಗೆ ಉಳಿಯೋದು ಬರಿ ಶ್ರೀ ರಾಮ !

ಒಮ್ಮೆ ಭಕ್ತನೊಬ್ಬ ತುಳಸೀದಾಸರನ್ನು ಕೇಳ್ತಾನೆ ಯಾವಾಗ್ಲೂ ರಾಮ ರಾಮ ಅಂತಿರಲ್ಲ ಸ್ವಲ್ಪ ರಾಮನ್ನ ನನಗು ತೋರಿಸಿ ಅಂತ ಅದಕ್ಕೆ
ತುಳಸೀದಾಸರು ಆಯಿತು ಒಂದು ಸುಲಭವಾದ ಸೂತ್ರ ಇದೆ ಆಗ ನೀನು ಈ ಪ್ರಪಂಚದಲ್ಲಿ ಯಾರನ್ನೇ ಕಂಡರು ನಿನಗೆ ರಾಮನೇ ಕಾಣುತ್ತಾನೆ ಅಂತ
ಈ ಸೂತ್ರವನ್ನು ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ ಹೆಸರೇ ಸಿಗುತ್ತೆ ಅಂತ.

ಆಗ ತುಳಸೀದಾಸರು ಹೇಳುತ್ತಾರೆ:

“ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||”

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ, ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು (ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ). ಭಾಗಲಬ್ಧ ಎಷ್ಟೇ ಇರಲಿ, ಶೇಷ ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ “ರಾಮ”!

ಭಕ್ತನಿಗೆ ಆಶ್ಚರ್ಯ! ಮೊದಲು ತನ್ನ ಹೆಸರು “ನಿರಂಜನ” ಎಂದು ನಾಲ್ಕು ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು ಅನ್ವಯಿಸಿದ. 4X4=16; 16+5=21; 21X2=42; 42/8= ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು “ನಿರ್ಮಲಾ” ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
3X4=12;
12+5=17; 17X2=34; 34/8 =
ಭಾಗಲಬ್ಧ(quotient ) 4. ಶೇಷ(Remainder ) 2.

ತನ್ನ ಮಗಳ ಹೆಸರು “ನಿಧಿ” ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 = ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು “ನಿಖಿಲಾನಂದ” ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
= ಭಾಗಲಬ್ಧ 6. ಶೇಷ 2.

ಹೌದಲ್ವಾ! ಹೆಸರು ಯಾವುದೇ ಇದ್ದರೂ,ಎಷ್ಟು ಅಕ್ಷರಗಳೇ ಇದ್ದರೂ ಕೊನೆಯಲ್ಲುಳಿಯುವುದು ಎರಡಕ್ಷರ “ರಾಮ” ಮಾತ್ರ! ಭಕ್ತನಿಗೆ ಬಹಳ ಖುಷಿಯಾಯ್ತು.

ಇವತ್ತು ನನಗೆ ಶ್ರೀರಾಮದರ್ಶನ ಆಯಿತು ಅಂತ ತುಳಸೀದಾಸರ ಕಾಲಿಗೆ ಬಿದ್ದ

ಅಷ್ಟಾಗಿ,

ತುಳಸೀದಾಸರು ಹೇಳಿದ ಸೂತ್ರದಲ್ಲಿನ ಸಂಖ್ಯೆಗಳ ಮತ್ತು ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥ.

ಪಂಚತತ್ತ್ವ = ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚಮಹಾಭೂತ.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ ಕೊನೆಗೂ ಉಳಿಯುವ ಶೇಷ “ರಾಮ” ಮಾತ್ರ!

ನಾನು ಎಂದು ಅಹಂಕರಿಸಲು ನಾನು ಯಾರು ? ಏನಿದೇ ನನ್ನಲ್ಲಿ ? ಚಿಂತಿಸುವವನಿಗೆ ದೃಷ್ಟಾಂತವಿದೆ. ಅಲ್ಲವೇ ?

ಕೃಪೆ : ಪಂಡಿತ ಆರಾಧ್ಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top