fbpx
News

ಕೋಚ್ ಕುಂಬ್ಳೆಗೆ ಡೈರಡಕ್ಟರ್ ಹುದ್ದೆ? ದ್ರಾವಿಡ್’ಗೆ ತರಬೇತು ದಾರ ಸ್ಥಾನ ನಿರೀಕ್ಷೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾ ಸಿಬ್ಬಂದಿ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುವ ಸೂಚನೆ ಸಿಕ್ಕಿದೆ. ಇನ್ನು ಕುಂಬ್ಳೆ ನಿರ್ದೇಶಕನಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯೇ ಅನಿಲ್ ಪಾಲಿಗೆ ಕೊನೆಯದಾಗಲಿದ್ದು ಏಪ್ರಿಲ್ 14ರ ಬಳಿಕ ಟೀಂ ಡೈರೆಕ್ಟರ್ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ.

ಇನ್ನು 19 ವಯೋಮಿತಿ ಮತ್ತು ಟೀಂ ಇಂಡಿಯಾ ಎ ತಂಡಕ್ಕೆ ಕೋಚಿಂಗ್ ನೀಡುತ್ತಿರುವ ರಾಹುಲ್ ದ್ರಾವಿಡ್ ಗೆ ರಾಷ್ಟ್ರೀಯ ತಂಡದ ಕೋಚಿಂಗ್ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ. ಕುಂಬ್ಳೆ ನಿರ್ದೇಶಕನ ಈ ಹುದ್ದೆ ವಹಿಸಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ.

ನಿಶ್ಚಿತ ಮೂಲಗಳ ವರದಿಯ ಪ್ರಕಾರ, ಕ್ರಿಕೆಟ್ ಮಂಡಳಿ ಇಂಗ್ಲೇಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ರೀತಿಯಲ್ಲಿಯೇ ಕಾರ್ಯನಿರ್ವಹಿಸಲು ಮುಂದಾಗಿದೆ. ಇದರಿಂದಾಗಿ ಸಿಒಎ, ಟೀಮ್ ಡೈರೆಕ್ಟ್ ಹುದ್ದೆಯ ಕುರಿತಾಗಿ ಅಂತಿಮ ನಿರ್ಧಾರವನ್ನು ಕುಂಬ್ಳೆಗೆ ಬಿಟ್ಟಿದೆ. ಪ್ರಸ್ತುತ ರಾಷ್ಟ್ರೀಯ ತಂಡ ಕೋಚ್’ಗೆ ನೀಡುತ್ತಿರುವುದಕಿಂತ ಹೆಚ್ಚಿನ ಸಮಯವನ್ನು ಡೈರೆಕ್ಟರ್ ಹುದ್ದೆಗೆ ನೀಡಬೇಕಿರುವುದು ಇದಕ್ಕೆ ಕಾರಣ. ರವಿಶಾಸ್ತ್ರಿ ನಿರ್ಗಮನದ ನಂತರದಲ್ಲಿ ಟೀಮ್ ಇಂಡಿಯಾ ಡೈರೆಕ್ಟರ್ ಹುದ್ದೆ ಖಾಲಿ ಉಳಿದಿದೆ.

ಕುಂಬ್ಳೆಗೆ ಡೈರೆಕ್ಟರ್ ಹುದ್ದೆ ನೀಡಿದಲ್ಲಿ ಭಾರತ ತಂಡದ ಕೋಚ್ ರಾರಾಗಲಿದ್ದಾರೆ ಎನ್ನುವ ಕುತೂಹಲವೂ ಹುಟ್ಟಿಕೊಂಡಿದೆ. ಈ ನಡುವೆ 19 ವಯೋಮಿತಿ ಮತ್ತು ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಗೆ ರಾಷ್ರ್ಟೀಯ ತಂಡದ ಕೋಚಿಂಗ್ ನೀಡುವ ಕುರಿತು ಮಾತುಕತೆ ನಡೆಯುತ್ತಿದೆ.

‘ಕುಂಬ್ಳೆ ಈ ಹುದ್ದೆ ವಹಿಸಿಕೊಳ್ಳುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಕೋಚ್ ಆಗುವದರೊಂದಿಗೆ ಟೀಮ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸುವುದು ಸವಾಲಿನ ಕೆಲಸ. ತಂಡಕ್ಕಾಗಿಯೇ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ನಿಬಿಡ ವೇಳಾಪಟ್ಟಿಯ ಕಾರಣ ಅವರಿಗೆ ವಿಶ್ರಾಂತಿಯೂ ಇಲ್ಲದಂತಾಗುತ್ತದೆ. ತಂಡಕ್ಕೆ ಯಾವುದೇ ಸಮಸ್ಯೆ ಆಗದ ರೀತಿ ಮೀಸಲು ಸಿಬ್ಬಂದಿಯನ್ನು ನೀಡಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ. ಆದರೆ, ದ್ರಾವಿಡ್’ಗೆ ಕುಂಬ್ಳೆಗೂ ಮುನ್ನವೇ ಟೀಮ್ ಇಂಡಿಯಾ ಕೋಚ್ ಹುದ್ದೆಯ ಆಫರ್’ಅನ್ನು ಹಿಂದಿನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ನೀಡಿದ್ದರು, ಆಗ ಇದನ್ನು ನಿರಾಕರಿಸಿದ್ದ ದ್ರಾವಿಡ್ ಈ ಬಾರಿ ಒಪ್ಪಿ ಕೊಳ್ಳುವರೇ ಎಂಬುದು ಕುತೂಹಲ ಎಂಬುದು ಕುತೂಹಲ ಸೃಷ್ಟಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top