fbpx
Health

ಮಲ್ಕೊಳಕಿಂತ ಮುಂಚೆ ಯಾವ ದಿಕ್ಕು ನೋಡ್ಕೊಳ್ಳಿ ಅನ್ನುತ್ತೆ ಪುರಾಣ ! ವೈಜ್ಞಾನಿಕ ಕಾರಣಗಳು

ಮಲಗಲು ಸೂಕ್ತವಾದ ದಿಕ್ಕು ಯಾವುದು ?

ರಕ್ತ-ಸಂಬಂಧಿತ ಸಮಸ್ಯೆಗಳಿದ್ದರೆ ಮೊದಲು ವೈದ್ಯರು ಶಿಫಾರಸು ಮಾಡುವುದು ಅಥವಾ ಟೆಸ್ಟ್ ಗೆ ಒಳಪಡಿಸುವುದು ನಮ್ಮ ದೇಹದಲ್ಲಿನ ಕಬ್ಬಿಣದ ಅಂಶ ಎಷ್ಟಿದೆಯೆಂದು ತಿಳಿಯಲು
ಕಬ್ಬಿಣ ಅಥವಾ ಐರನ್ ರಕ್ತದಲ್ಲಿ ಪ್ರಮುಖ ಅಂಶವಾಗಿದೆ.
ನಮಗೆಲ್ಲವೂ ತಿಳಿದಿರುವ ಹಾಗೆ ಭೂಮಿಯು ಕಾಂತಕ್ಷೇತ್ರ ( ಮ್ಯಾಗ್ನೆಟಿಕ್ ಫೀಲ್ಡ್) ಭೂಮಿಗೆ ಮ್ಯಾಗ್ನೆಟಿಗೆ ಇದ್ದಂತೆ ಉತ್ತರ ಹಾಗು ದಕ್ಷಿಣ ದಿಕ್ಕುಗಳಿವೆ .

ನಮಗೆ ತಿಳಿದಿರುವ ಹಾಗೆ ಮ್ಯಾಗ್ನೆಟ್ ಕಬ್ಬಿಣವನ್ನು ಆಕರ್ಷಿಸುತ್ತದೆ ಅಲ್ಲವೇ , ಅಂತೆಯೇ ಮಾನವ ದೇಹದಲ್ಲೂ ಕಬ್ಬಿಣದ ಅಂಶವಿದೆ, ರಕ್ತದ ಬಹು ಮುಖ್ಯ ಅಂಶ ಕಬ್ಬಿಣ(ಐರನ್).

ನಾವು ಅಡ್ಡಲಾಗಿ ಮಲಗಿದಾಗ ತಕ್ಷಣ ನಮ್ಮ ನಾಡಿ ಬಡಿತದಲ್ಲಿ ಇಳಿತ ಕಂಡು ಬರುತ್ತದೆ.
ಈಗ ನಮ್ಮ ದೇಹವು ಇದಕ್ಕೆ ಹೊಂದಾಣಿಕೆ ಮಾಡಿಕೊಂಡು ರಕ್ತವನ್ನು ಪಂಪ್ ಮಾಡಲು ಶುರು ಮಾಡಿದರೆ ತಲೆಗೆ ಅಗತ್ಯಕ್ಕಿಂತ ಹೆಚ್ಚು ರಕ್ತ ತಲುಪುತ್ತದೆ.

ಈಗ, ನೀವು ಉತ್ತರ ದಿಕ್ಕಿಗೆ ತಲೆ ಇರಿಸಿ 5 ರಿಂದ 6 ಗಂಟೆಗಳ ಕಾಲ ಅದೇ ರೀತಿಯಲ್ಲಿ
ಮಲಗಿದರೆ ಮ್ಯಾಗ್ನೆಟಿಕ್ ಪುಲ್ (ಕಾಂತಕ್ಷೇತ್ರದ ಸೆಳೆತ ) ಹೆಚ್ಚಾಗಿ ನಿಮ್ಮ ಮೆದುಳಿನ ಮೇಲೆ ಒತ್ತಡ ಹಾಕಲು ಶುರು ಮಾಡುತ್ತದೆ.

ಬಹಳ ವಯಸ್ಸಾಗಿದ್ದರೆ ನಿಮ್ಮ ರಕ್ತನಾಳಗಳು ದುರ್ಬಲ ವಾಗಿದ್ದರೆ, ಮೆದುಳಿನ ರಕ್ತಸ್ರಾವ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.

ಹಾಗಾದರೆ ಯಾವುದು ಮಲಗಲು ಸೂಕ್ತ ದಿಕ್ಕು :

ನೀವು ಭೂಮಿಯ ಉತ್ತರ ಗೋಳಾರ್ಧದಲ್ಲಿದ್ದರೆ:

ಪಶ್ಚಿಮ ದಿಕ್ಕು ಪರವಾಗಿಲ್ಲ
ಈಶಾನ್ಯ ದಿಕ್ಕು ಪರವಾಗಿಲ್ಲ ,
ಪೂರ್ವ ದಿಕ್ಕು -ಪರವಾಗಿಲ್ಲ ,
ಉತ್ತರ ದಿಕ್ಕು -ಬೇಡ
ದಕ್ಷಿಣ ದಿಕ್ಕು -ಅತ್ಯುತ್ತಮ

ನೀವು ಭೂಮಿಯ ದಕ್ಷಿಣ ಗೋಳಾರ್ಧದಲ್ಲಿದ್ದರೆ:

ಈಶಾನ್ಯ ದಿಕ್ಕು- ಪರವಾಗಿಲ್ಲ ,
ಪೂರ್ವ ದಿಕ್ಕು -ಪರವಾಗಿಲ್ಲ ,
ಪಶ್ಚಿಮ ದಿಕ್ಕು -ಪರವಾಗಿಲ್ಲ ,
ಉತ್ತರ ದಿಕ್ಕು -ಅತ್ಯುತ್ತಮ
ದಕ್ಷಿಣ ದಿಕ್ಕು -ಬೇಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top