fbpx
Astrology

ಸೋಪ್ ಶಾಂಪೂ ಹಾಕೊಂಡು ಸ್ನಾನ ಮಾಡ್ಬಿಟ್ರೆ ಸಾಕಾಗಲ್ಲ ಶಾಸ್ತ್ರದಲ್ಲಿ ಸ್ನಾನಕ್ಕೆ ವಿಶೇಷ ಮಹತ್ವ ಇದೆ !

ವಿವಿಧ ಸ್ನಾನದ ಪ್ರಕ್ರಿಯೆಗಳು ಹಾಗು ಅವುಗಳಿಂದ ಆಗುವ ಲಾಭಗಳು :

೧. ಬ್ರಹ್ಮಮುಹೂರ್ತದಲ್ಲಿ ಸ್ನಾನ:

ವ್ಯಕ್ತಿ ಧಾರ್ಮಿಕ ಸಂಪ್ರದಾಯಗಳ ಅನುಕರಣೆ ಮಾಡುವುದರಿಂದ ಆಗುವ ಲಾಭಗಳು ಹಲವಾರು
ಬ್ರಹ್ಮಮುಹೂರ್ತದಲ್ಲಿ ಸ್ನಾನ ಮಾಡುವುದರಿಂದ ಬಹಳ ಸಮಸ್ಯೆಗಳಿಂದ ಹೊರ ಬರಲು ಸಹಾಯ ಮಾಡುತ್ತದೆ.
ಬ್ರಹ್ಮಮುಹೂರ್ತ ಸಮಯದಲ್ಲಿ ವ್ಯಕ್ತಿಯ ಮಾನಸಿಕ ದೇಹದ ಸ್ಥಿತಿ ಸ್ಥಿರವಾಗಿರುತ್ತದೆ. ಈ ಅವಧಿಯಲ್ಲಿ ಸಂಸ್ಕಾರಗಳು (ಅಜಾಗೃತ ಪ್ರಜ್ಞೆಗಳು) ನೈತಿಕತೆ, ಮಾನಸಿಕ ಹಾಗು ದೈಹಿಕ ಶುದ್ಧತೆಯನ್ನು ಉಂಟು ಮಾಡುತ್ತವೆ .

ಬ್ರಹ್ಮಮುಹೂರ್ತ ಸಮಯದಲ್ಲಿ ದೈವಿಕ ಶಕ್ತಿ ಅಲೆಗಳು ಇತರ ಸಮಯಕಿಂತ ಹೆಚ್ಚು ಸಕ್ರಿಯವಾಗಿರುತ್ತವೆ.
ನೀರಿನಲ್ಲಿರುವ ಚೈತನ್ಯದ ಅಲೆಗಳು ದೈವೀ ಶಕ್ತಿಯನ್ನು ಹೀರಿಕೊಳ್ಳಲು ಸಹಾಯ ಸಹಾಯ ಮಾಡುತ್ತವೆ.

ನೈತಿಕತೆ,ಧರ್ಮ ಕ್ರಿಯೆಗಳು ಮತ್ತು ಶುದ್ಧತೆ ಈ ಮೂರು ದೈವಿಕ ಶಕ್ತಿಗಳು ವ್ಯಕ್ತಿಯ ಮೂರು ಸಂಕಲ್ಪ ಶಕ್ತಿಗಳಾದ ಸಂಸ್ಕಾರ, ಇಚ್ಚಾ ಮತ್ತು ಕ್ರಿಯಾ ಶಕ್ತಿಗಳನ್ನು ಉತ್ತೇಜಿಸುತ್ತದೆ. ಈ ಮೂರು ಶಕ್ತಿಗಳ ಸಹಾಯದಿಂದ
ಜ್ಞಾನ ಶಕ್ತಿ ಮತ್ತು ದೇವರ ಸಂಪೂರ್ಣ ಚೈತನ್ಯ ಶಕ್ತಿ ಒದಗುತ್ತದೆ.

೨ ಅಭ್ಯಂಗ ಸ್ನಾನ (ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು)

ಈ ಸ್ನಾನದ ಕುರಿತಾದ ಹೆಚ್ಚಿನ ಮಾಹಿತಿ ಈ ಕೆಳಗಿನ ಲೇಖನದಲ್ಲಿ ಲಭ್ಯ .

೩. ಸಾಂದರ್ಭಿಕ ತಲೆ ಸ್ನಾನ:

ಕಡ್ಡಾಯವಾಗಿ ನೀರಿನಲ್ಲಿ ಸ್ನಾನ
ಅಜೀರ್ಣ ,ಬೀದಿ ನಾಯಿಯನ್ನು ಮುಟ್ಟಿದ ನಂತರ , ಕ್ಷೌರ ಮಾಡಿಸಿಕೊಂಡು ಬಂದ ನಂತರ,
ಲೈಂಗಿಕ ಸಂಭೋಗ ಕ್ರಿಯೆಯ ನಂತರ, ಶವ ಮುಟ್ಟಿದ ,ಶವ ಸಂಸ್ಕಾರದ ನಂತರ, ದುಃಸ್ವಪ್ನದ ನಂತರ,


ದುಷ್ಟ ವ್ಯಕ್ತಿಯನ್ನು ಮುಟ್ಟಿದ ನಂತರ, ವಾಂತಿ ಇನ್ನಿತರ ಮೂತ್ರ ಸಮಸ್ಯೆಯ ನಂತರ , ಶವ ವಾಹಕವನ್ನು ಮುಟ್ಟಿದ ನಂತರ.

೪.ಪಾಪಗಳನ್ನು ನಾಶಪಡಿಸಿ ಪುಣ್ಯದ ಫಲಗಳನ್ನು ಪಡೆಯಲು :

ಗುರುವಾರ ಅಶ್ವತ್ಥ ಮರದ ಅಡಿಯಲ್ಲಿ ಸ್ನಾನ ಮಾಡಬೇಕು , ಅಮಾವಾಸ್ಯೆ ದಿನ ನದಿಯಲ್ಲಿ ಸ್ನಾನ ಮಾಡಬೇಕು ಈ ಪವಿತ್ರ ಸ್ನಾನಗಳು ಎಲ್ಲಾ ಪಾಪಗಳನ್ನು ಶುದ್ಧೀಕರಿಸುವುದು.

ನಾವು ಪುಷ್ಯ ನಕ್ಷತ್ರದ ಅವಧಿಯಲ್ಲಿ ನದಿಯಲ್ಲಿ ಸ್ನಾನ ಮಾಡಿದರೆ ಒಳಿತು
ನಮ್ಮ ಜನ್ಮ ನಕ್ಷತ್ರದ ಸಮಯದಲ್ಲಿ ಅಥವಾ ವೈಧೃತಿ -ಯೋಗ (ಸೂರ್ಯೋದಯ ಸಮಯದಲ್ಲಿ ಉಂಟಾಗುವ 27 ಮಂಗಳಕರ ಸಮಯಗಳಲ್ಲಿ ಇದು ಒಂದು), ಇದು ನಮ್ಮ ಎಲ್ಲಾ ಪಾಪಗಳನ್ನು ಶುದ್ಧೀಕರಿಸುವುದು.

೫. ಕಾಮ್ಯಸ್ನಾನ :

ಸಂಪತ್ತನ್ನು ಹೊಂದಲು ಹಾಗು ಇತರ ಕೆಲವು ಆಸೆಯನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಧಾರ್ಮಿಕ ಕೃತ್ಯಗಳ ವಿಧಿವಿದಾನದಲ್ಲಿ ನಡೆಯುವ ಸ್ನಾನ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top