fbpx
Awareness

ಚಾಣಕ್ಯನ ಸಿಂಪಲ್ ಸೂತ್ರ ಫಾಲೋ ಮಾಡಿ ಜೀವನದಲ್ಲಿ ಮುಂದೆ ಬರ್ತೀರಾ !

ಜೀವನದಲ್ಲಿ ಮುಂದೆ ಬರುವುದಕ್ಕೆ ಚಾಣಕ್ಯರು ಹೇಳಿರೋ ಸರಳ ನೀತಿ ಸೂತ್ರಗಳು

1.ಯಾವ್ದಾರ್ದ್ರು ಕೆಲಸ ಶುರು ಮಾಡಿದ್ ಮೇಲೆ ಸಕ್ಸಸ್ ಆಗುತ್ತೋ ಇಲ್ವೋ ಅಂತ ಯೋಚ್ನೆ ಮಾಡ್ದೆ ಕೆಲಸ ಮಾಡಿ , ನಿಯತ್ತಾಗಿ ದುಡಿಯೋರ್ಗೆ ಫಲ ಇದೆ.

2.ಚಾಣಕ್ಯ ಪ್ರಕಾರ ಯಶಸ್ಸು, ಕೀರ್ತಿ ಮತ್ತು ಗೌರವ ಬೆಣ್ಣೆ ಮೇಲೆ ನಡೆಯೋ ಹಾಗೆ ಯಾರಿಗೆ ನಡೆಯೋ ತಂತ್ರ ಗೊತ್ತಿರುತ್ತೋ ಅವರಿಗೆ ಯಶಸ್ಸು ಸಿಗುತ್ತೆ .

3.ನೀವು ಮಾಡುವ ಪ್ರತಿಯೊಂದು ಕೆಲಸಗಳಿಗೆ ಅಥವಾ ಕೇಳುವ ಮಾತುಗಳಿಗೆ ನೋಡುವ ನೋಟಗಳಿಗೆ ತನ್ನದೇ ಆದ ದೃಷ್ಟಿಕೋನ ಇರುತ್ತದೆ ,ಎದುರಾಳಿಯ ದೃಷ್ಟಿಕೋನದಿಂದ ಮತ್ತು ಹೊರ ಜಗತ್ತಿನ ದೃಷಿಕೋನದಿಂದ ನಾವು ಕೆಲವು ವಿಚಾರಗಳನ್ನು ಆಲೋಚಿಸಬೇಕು.

4.ತುಂಬ ನಿಯತ್ತಾಗಿದ್ರೆ ಒಳ್ಳೇದಲ್ಲ , ನಿಯತ್ತಾಗಿರೋ ಮನುಷರನ್ನ ಆಟ ಆಡಿಸುತ್ತೆ ಪ್ರಪಂಚ.

5.ನೀವು ಶೀಘ್ರ ಯಶಸ್ಸು ಪಡೆಯಲು ಬಯಸಿದರೆ ನಿಮ್ಮ ಸುತ್ತ ಸಂಪತ್ತು ಇದೆ ಎಂಬ ಭ್ರಮೆಯನ್ನು ರಚಿಸಿಕೊಳ್ಳಬೇಕು ,ಏಕೆಂದರೆ ಜನರು ದುಡ್ಡಿಗೆ ಹಾಗು ದುಡ್ಡಿರುವ ಮನುಷರಿಗೆ ಕೊಡುವ ಬೆಲೆ ಬೇರೆ ಯಾರಿಗೂ ಕೊಡುವುದಿಲ್ಲ
ವಿಶ್ವ ಕುರುಡಾಗಿ ಗೌರವಿಸುವುದು ದುಡ್ಡನ್ನ ಮತ್ತು ಶ್ರೀಮಂತ ಜನ್ರನ್ನ.

6.ಅಡುಗೆ ಮಾಡುವಾಗ ನಾವು ಬೆಂಕಿಯ ಮುಂದೆ ಇರುತ್ತೇವೆಯೇ ಹೊರತು ಬೆಂಕಿಯ ಮೇಲಲ್ಲ ಹಾಗೆಯೇ ನಮ್ಮ ಉದ್ಧಾರಕ್ಕೆ ಕಾರಣವಾದವರನ್ನ ಹಾಗೆ ನಮ್ಮ ಉದ್ಧಾರದ ಮೂಲವನ್ನು ಅಷ್ಟು ದೂರವಲ್ಲದ ಅಷ್ಟು ಹತ್ತಿರವೂ ಅಲ್ಲದ ಹಾಗೆ ನಿಯಂತ್ರಿಸಿಕೊಂಡಿರಬೇಕು.

7.ಯಶಸ್ವಿ ವ್ಯಕ್ತಿ ಯಾವುದೇ ಕಳೆದುಹೋದ ಕ್ಷಣ ,ತೀರ್ಮಾನಗಳನ್ನು ನೆನೆದು ಕಾಲಹರಣ ಮಾಡಿ ವ್ಯಥೆಪಡುವುದಿಲ್ಲ.

ನೀವು ಹಿಂದೆ ತಪ್ಪು ಮಾಡಿದನ್ನು ಜೀವನದಲ್ಲಿ ಅಧ್ಯಯನ ಎಂದು ಭಾವಿಸಬೇಕು.

8.ನಿಮ್ಮ ಮೌಲ್ಯಗಳು ಮತ್ತು ತತ್ವಗಳನ್ನು ಮಾರಿಕೊಂಡು , ಇತರರನ್ನು ಮೋಸ ಮಾಡಿ ಸಂಪಾದಿಸಿದ ಹಣ ವಿಷಕ್ಕೆ ಸಮಾನ .
9.ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ 3 ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು
ಏನು ಮಾಡಬೇಕು ?
ಹೀಗೆ ಮಾಡಿದರೆ ಮುಂದೆ ಆಗುವ ಪರಿಣಾಮಗಳು ಏನು?
ಇದನ್ನು ಮಾಡಿವುದು ಸರಿಯೇ ,ಫಲ ಸಿಗುವುದೇ ?
ನಮ್ಮ ಬಗ್ಗೆ ಹಾಗು ಇತರರ ಬಗ್ಗೆ ಯೋಚಿಸಬೇಕು

10.ವಿಷಯುಕ್ತ ಹಾವು ಕೂಡ ಮೊದಲು ತನ್ನಲ್ಲಿ ವಿಷವಿದೆ ಎಂದು ಬಹಿರಂಗಪಡಿಸುವುದಿಲ್ಲ ಆದರೆ ತಾನು ಅಪಾಯದಲ್ಲಿರುವ ಮುನ್ಸೂಚನೆ ತಿಳಿದ ಕೂಡಲೇ ಎರಗುವುದು
ಹಾಗೆ ಮನುಷ್ಯನು ತನ್ನ ಶಕ್ತಿಯನ್ನು ಬೇಕಾದಾಗ ಉಪಯೋಗಿಸಬೇಕು.

11.ನೀವು ಎಷ್ಟೇ ವೈಯಕ್ತಿಕ ಜೀವನದಲ್ಲಿ ಬಳಲಿದ್ದರು ಸಹ ಅದನ್ನು ನಿಮ್ಮ ಮುಖದಲ್ಲಿ ತೋರಿಸಬಾರದು.

12.ಯಾರ ಪ್ರಶಂಸೆಯನ್ನು ಹುಡುಕಬಾರದು ಪ್ರಶಂಸೆ ತಾನಾಗಿಯೇ ಹುಡಿಕಿಕೊಂಡು ಬರಬೇಕು.ಜನರು ನಿಮ್ಮ ಬಗ್ಗೆ ಅಸೂಯೆ ಪಡುತ್ತಿದ್ದಾರೆ ಎಂದರೆ ನೀವು ಅವರಿಗಿಂತ ಎತ್ತರದಲ್ಲಿದ್ದೀರಾ ಎಂದು.

13.ಸ್ನೇಹಿತರನ್ನು ಹತ್ತಿರ ಇಟ್ಟುಕೊಳ್ಳಿ ಆದರೆ ನಿಮ್ಮ ಶತ್ರುಗಳನ್ನು ಇನ್ನು ಹತ್ತಿರದಿಂದ ಗಮನಿಸಿ

14.ದುರ್ಬಲ ವ್ಯಕ್ತಿಯನ್ನು ಗಮನಿಸಿ ನಿರ್ಲಕ್ಷಿಸ ಬೇಡಿ ಏಕೆಂದರೆ ಅವರು ಎಲ್ಲರಿಗಿಂತ ಅತಿ ಹೆಚ್ಚು ಸೇಡಿನ ಮನೋಭಾವನೆ ಹೊಂದಿರುತ್ತಾರೆ ಮತ್ತು ಅದಕ್ಕಾಗಿಯೇ ಅವಣಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top