fbpx
Astrology

ಹಬ್ಬಹರಿ ದಿನಗಳಲ್ಲಿ ಎಣ್ಣೆ ಸ್ನಾನ ಮಾಡ್ಬೇಕು ಅಂತ ಹೇಳ್ತಾರೆ ಏಕೆ ? ವೈಜ್ಞಾನಿಕ ಕಾರಣಗಳು

ಅಭ್ಯಂಗಸ್ನಾನ (ಎಣ್ಣೆ ಹಚ್ಚಿಕೊಂಡು ನಂತರ ಸ್ನಾನ ಮಾಡುವುದು)

ಅರ್ಥ:

ಅಭ್ಯಂಗಸ್ನಾನ ಎಂದರೆ ಎಣ್ಣೆಯಿಂದ ನೆತ್ತಿ ಮತ್ತು ದೇಹದ ಇತರ ಭಾಗಗಳಿಗೆ ಚೆನ್ನಾಗಿ ಮಸಾಜ್ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ,ತನ್ನ ಶ್ರೇಯೋಭಿಲಾಷೆಗೆ ಅವರೇ ಮಾಡುವ ಸ್ನಾನದ ವಿಧಿ.

ಅಭ್ಯಂಗಸ್ನಾನದ ಪ್ರಾಮುಖ್ಯತೆ:

ಸ್ನಾನದ ಮೊದಲು ದೇಹಕ್ಕೆ ತೈಲದಿಂದ ಮಸಾಜ್ ಮಾಡಲಾಗುತ್ತದೆ , ಇದರಿಂದ ದೇಹದ ಕಣ ಕಣವು ಜಾಗೃತಿಗೊಂಡು ಒಂದು ವಿಧವಾದ ಚೈತನ್ಯವನ್ನ ನೀಡುತ್ತದೆ ಈ ದೈವೀ ಪ್ರಜ್ಞೆ ಮನಸ್ಸು ಮತ್ತು ದೇಹದ ಕಾರ್ಯನಿರ್ವಹಣೆಯ ನಿಯಂತ್ರಿಸುತ್ತಿದೆ, ದೇಹದ ಜಡ ತತ್ವಗಳನ್ನು ಹೊರಗಡೆ ಹಾಕುತ್ತದೆ.

ಪಂಚಪ್ರಾಣ (ಐದು ಪ್ರಮುಖ ಶಕ್ತಿಗಳು)ಗಳನ್ನು ಸಕ್ರಿಯಗೊಳಿಸಲು ಪರಿಣಾಮಕಾರಿ.
ದೇಹದ ಅನಗತ್ಯ ಶಕ್ತಿ ,ಜಡತ್ವ ಇತ್ಯಾದಿ ಆಕಳಿಕೆ , ಬಾಯಿಂದ ಬರುವ ತೇಗು ಇತ್ಯಾದಿಯ ರೂಪದಲ್ಲಿ ಹೊರಗಡೆ ಬರುತ್ತದೆ.
ಕೆಲವೊಮ್ಮೆ ಜಡಾನಿಲ , ಅನಿಲ ತ್ಯಾಜ್ಯ ಕೆಲವೊಮ್ಮೆ ಕಣ್ಣುಗಳು, ಮೂಗು, ಕಿವಿ ಮೂಲಕ ಹೊರಹಾಕಲಾಗುತ್ತದೆ ಮತ್ತು ಚರ್ಮದ ರಂಧ್ರಗಳ ಮೂಲಕ ಹೊರಬರುತ್ತವೆ ಆದ್ದರಿಂದಲೇ ತೈಲ ಹಚ್ಚಿದ ನಂತರ ಕಣ್ಣುಗಳು ಮತ್ತು ಮುಖ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ದೇಹದ ಅಂಗಾಂಗಗಳ ಜಡತ್ವ ತೆಗೆದ ಮೇಲೆ ಚೈತನ್ಯ ಶಕ್ತಿ ಹೀರಿಕೊಳ್ಳಲು ಸಹಾಯಕವಾಗಿದೆ.

ಅಭ್ಯಂಗಸ್ನಾನದ ಪ್ರಯೋಜನಗಳು:

ದೇಹಕ್ಕೆ ತೈಲದಿಂದ ಮಸಾಜ್ ಮಾಡಿದರೆ ಸೂರ್ಯನಾಡಿ ಸಕ್ರಿಯಗೊಳ್ಳುತ್ತದೆ ಇದರಿಂದ ದೇಹದ ವಿಕಿರಣ ಶಕ್ತಿ ಹೆಚ್ಚಿ ,ದೇಹದಲ್ಲಿ ಉಂಟಾಗುವ ಕಾಂತಿಯ ಅಲೆ ದೇಹದಲ್ಲಿನ ರಜ ತಮ ಶಕ್ತಿಗಳನ್ನು ನಾಶಪಡಿಸುತ್ತದೆ.
ಈ ಶುದ್ಧೀಕರಣ ಪ್ರಕ್ರಿಯೆಯಲ್ಲಿ ವ್ಯಕ್ತಿಯ ಪ್ರತಿಯೊಂದು ಕರ್ಮ ಸಾಧನೆಯಾಗಿ (ಆಧ್ಯಾತ್ಮಿಕ ಅಭ್ಯಾಸ) ರೂಪಾಂತರಗೊಳ್ಳುತ್ತದೆ.

ಈ ಕ್ರಿಯೆಯನ್ನು ದೇಹದಲ್ಲಿ ಸಾತ್ತ್ವಿಕ್ತ ಶಕ್ತಿ ಹೆಚ್ಚಾಗಿ ಒಳ್ಳೆಯದಾಗುತ್ತದೆ.

ಚೈತನ್ಯ ಮಟ್ಟದಲ್ಲಿ ಉಂಟಾಗುವ ಈ ಆಧ್ಯಾತ್ಮಿಕ ಅಭ್ಯಾಸ ವಾಯುಮಂಡಲವನ್ನು ಶುದ್ಧೀಕರಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
To Top